ಉಡುಪಿ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯ

ಅಂಗವಿಕಲರಿಗೆ ಸರ್ಕಾರ ಬಸ್ ಪಾಸ್ ನೀಡುತ್ತಿದ್ದು. ಅದರ ಪ್ರಯಾಣ ಮಿತಿಯನ್ನು ಏರಿಸಬೇಕು. ಅವಶ್ಯಕತೆ ಇರುವಷ್ಟು ದೂರಕ್ಕೆ ಅನುಮತಿಯನ್ನು ನೀಡಬೇಕು

ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನೇತೃತ್ವದಲ್ಲಿ ವಿವಿದ್ದೋದ್ದೇಶ ಪುರ್ನಾವಸತಿ ಹಾಗೂ ಗ್ರಾಮೀಣ ಪುರ್ನಾವಸತಿ ಕಾರ್ಯಕರ್ತರು ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಉಡುಪಿ: ಅಂಗವಿಕಲರಿಗೆ ಸ್ವ ಉದ್ಯೋಗಕ್ಕಾಗಿ ನೀಡುತ್ತಿರುವ ಆಧಾರ ಗೂಡಾಂಗಡಿ ಸಹಾಯಧನ ಮೊತ್ತವನ್ನು ₹1 ಲಕ್ಷಕ್ಕೆ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನೇತೃತ್ವದಲ್ಲಿ ವಿವಿದ್ದೋದ್ದೇಶ ಪುನರ್ವಸತಿ ಹಾಗೂ ಗ್ರಾಮೀಣ ಪುರ್ನಾವಸತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಅಂಗವಿಕಲರಿಗೆ ಸರ್ಕಾರ ಬಸ್ ಪಾಸ್ ನೀಡುತ್ತಿದ್ದು. ಅದರ ಪ್ರಯಾಣ ಮಿತಿಯನ್ನು ಏರಿಸಬೇಕು. ಅವಶ್ಯಕತೆ ಇರುವಷ್ಟು ದೂರಕ್ಕೆ ಅನುಮತಿಯನ್ನು ನೀಡಬೇಕು. ಪಾಸ್ ಸೌಲಭ್ಯ ಪಡೆಯಲು ಮಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇದ್ದು, ಹತ್ತಿರದ ಕೆಎಸ್‌ಆರ್‌ಟಿಸಿ ಕಚೇರಿಗಳಲ್ಲಿ ನೀಡಬೇಕು. ಖಾಸಗಿ ಬಸ್‌ನಲ್ಲಿ ಸಹ ಶೇ50ರಷ್ಟು ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು

ಎಂಡೋ ಸಂತ್ರಸ್ತರು ಹಾಗೂ ಅಂಕವಿಕಲರ ಪುರ್ನಾವಸತಿಗಾಗಿ ಕಾರ್ಯನಿರ್ವಹಿಸುವ ಎಂಆರ್‌ಡಬ್ಲ್ಯೂ ಹಾಗೂ ವಿಆರ್‌ಡಬ್ಲ್ಯೂ ಕಾರ್ಯಕರ್ತರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಅವರಿಗೆ ನೀಡುವ ಗೌರವಧನವನ್ನು ₹8,000 ದಿಂದ ₹12,000 ಹೆಚ್ಚಳ ಮಾಡಬೇಕು. ಸರ್ಕಾರ ನೀಡುತ್ತಿರು ಮಾಸಿಕ ಪೋಷಣೆ ಲಭ್ಯತೆಯನ್ನು ₹500 ನಿಂದ ₹3,000 ಹಾಗೂ 1,200 ರಿಂದ 5,000ಕ್ಕೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು. ಎಂಡೋ ಸಂತ್ರಸ್ತರ ಪುನರ್‌ವಸತಿ ಕೇಂದ್ರದ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಂಡೋ ಸಂತ್ರಸ್ತರಿಗೆ ಹಾಗೂ ಅಂಕವಿಕಲರಿಗೆ ಉಡುಪಿಯಲ್ಲಿ ಬಸ್‌ಪಾಸ್ ನೀಡುವ ಕುರಿತು ಪರಿಶೀಲನೆ ಮಾಡಲಾಗುವುದು ಎಂದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ್ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಪೂಜಾರಿ, ಗೌರವಾಧ್ಯಕ್ಷ ವೆಂಕಟೇಶ್ ಕೋಣಿ, ಮಂಜುಳಾ ಕಾರ್ಕಳ, ಕೃಷ್ಣ ಬ್ರಹ್ಮಾವರ, ರಾಧಕೃಷ್ಣ ಬೈಂದೂರು, ಬಾಬು ದೇವಾಡಿಗ ಇದ್ದರು.

* * 

ಎಂಡೋ ಸಂತ್ರಸ್ತರ ಪುನರ್ವಸತಿ ಕೇಂದ್ರದ ನಿರ್ಮಾಣ ಮಾಡಲು ಈಗಾಗಲೇ ಕುಂದಾಪುರ ತಾಲ್ಲೂಕಿನಲ್ಲಿ 5ಎಕರೆ ಜಾಗ ಗುರುತಿಸಲಾಗಿದೆ. ಅನುದಾನ ಬಿಡುಗಡೆ ಆದ ಕೂಡಲೇ ಕಟ್ಟಡದ ಕಾಮಗಾರಿ ಆರಂಭಿಸಲಾಗುತ್ತದೆ.
ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ.

Comments
ಈ ವಿಭಾಗದಿಂದ ಇನ್ನಷ್ಟು
ಪುಷ್ಪ ಹೂರಣ: ಚಂದಗೊಂಡ ಸಭಾಂಗಣ

ಉಡುಪಿ
ಪುಷ್ಪ ಹೂರಣ: ಚಂದಗೊಂಡ ಸಭಾಂಗಣ

18 Jan, 2018
ಪಲಿಮಾರು ಮಠದಲ್ಲಿದೆ  800 ವರ್ಷಗಳ ಹಿಂದಿನ ಗ್ರಂಥ

ಉಡುಪಿ
ಪಲಿಮಾರು ಮಠದಲ್ಲಿದೆ 800 ವರ್ಷಗಳ ಹಿಂದಿನ ಗ್ರಂಥ

18 Jan, 2018
ಧರ್ಮ ಸಂಸತ್‌ ನಡೆಸಿ ದೇಶವನ್ನೇ ಸೆಳೆದ ಸಂತ

ಉಡುಪಿ
ಧರ್ಮ ಸಂಸತ್‌ ನಡೆಸಿ ದೇಶವನ್ನೇ ಸೆಳೆದ ಸಂತ

18 Jan, 2018
ಎಲ್ಲೆಲ್ಲೂ ಸಂಭ್ರಮದ ವಾತಾವರಣ

ಉಡುಪಿ
ಎಲ್ಲೆಲ್ಲೂ ಸಂಭ್ರಮದ ವಾತಾವರಣ

17 Jan, 2018

ಉಡುಪಿ
ಮನಸ್ಸಿನ ವಿಕಾಸಕ್ಕೆ ಸಾಹಿತ್ಯ ಅಗತ್ಯ: ವೈದೇಹಿ

‘ಸಮಗ್ರ ವಿಶ್ವ ಸಾಹಿತ್ಯದ ಪರಿಚಯವೇ ‘ಕೃತಿ ಜಗತ್ತು’ ಪುಸ್ತಕದಲ್ಲಿದೆ. ದುರಂತ, ದುಃಖ, ಸಂತೋಷವೆಲ್ಲವನ್ನೂ ವಿಶ್ಲೇಷಿಸಿ, ವಿಮರ್ಶಿಸಿ, ಅರ್ಥೈಸಿರುವ ಒಟ್ಟು 26 ಲೇಖನಗಳನ್ನು ಒಳಗೊಂಡಿದೆ.

17 Jan, 2018