ರಾಯಬಾಗ

‘ಕೆಲಸ ಮಾಡದಿದ್ದರೆ ಗಂಟು ಮೂಟೆ ಕಟ್ಟಿ’

ಸ್ವಚ್ಛ ಭಾರತ ಯೋಜನೆಯಡಿ ಜನವರಿ 26ರೊಳಗೆ ತಾಲ್ಲೂಕನ್ನು ಬಯಲು ಶೌಚ ಮುಕ್ತ ತಾಲ್ಲೂಕು ಎಂದು ಘೋಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲ 37 ಗ್ರಾಮ ಪಂಚಾಯ್ತಿಗಳ ಪಿಡಿಒ ಹಾಗೂ ನೋಡಲ್ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು

ರಾಯಬಾಗ: ಯಾವ ಗ್ರಾಮ ಪಂಚಾಯ್ತಿ ಪಿಡಿಒ ಸರಿಯಾಗಿ ಕೆಲಸ ಮಾಡುವುದಿಲ್ಲವೋ ಅಂಥವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲಾಗುವುದು. ಕೆಲಸ ಮಾಡದಿದ್ದರೆ ನಿಮ್ಮ ಗಂಟು ಮೂಟೆ ಕಟ್ಟಿಕೊಂಡು ಹೋಗಲು ಸಿದ್ಧರಾಗಿ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಎ.ಎಂ. ಪಾಟೀಲ ಎಚ್ಚರಿಕೆ ನೀಡಿದರು. ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಶೌಚಾಲಯಗಳ ನಿರ್ಮಾಣದ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.

ಸ್ವಚ್ಛ ಭಾರತ ಯೋಜನೆಯಡಿ ಜನವರಿ 26ರೊಳಗೆ ತಾಲ್ಲೂಕನ್ನು ಬಯಲು ಶೌಚ ಮುಕ್ತ ತಾಲ್ಲೂಕು ಎಂದು ಘೋಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲ 37 ಗ್ರಾಮ ಪಂಚಾಯ್ತಿಗಳ ಪಿಡಿಒ ಹಾಗೂ ನೋಡಲ್ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕುಎಂದು ಅವರು ಸೂಚಿಸಿದರು.

‘ನೀವು ಮನಸ್ಸು ಮಾಡಿದರೆ ಪ್ರತಿದಿನ ಕನಿಷ್ಠ ಐದು ಶೌಚಾಲಯಗಳನ್ನು ಕಟ್ಟಿಸಬಹುದಾಗಿದೆ. ಎಂಥ ಪರಿಸ್ಥಿತಿ ಬಂದರೂ ಜನವರಿ 26ರೊಳಗೆ ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಶೌಚಾಲಯ ಇಲ್ಲದ ಒಂದೂ ಕುಟುಂಬ ಇರಬಾರದು ಎಂದರು.

ಸರಿಯಾಗಿ ಮಾಹಿತಿ ತರದ ಇಟನಾಳ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡ ಎ.ಎಂ. ಪಾಟೀಲ ಸಭೆಗೆ ಬರುವಾಗ ಸರಿಯಾದ ಮಾಹಿತಿ ತರುವಂತೆ ಹೇಳಿ ಸಭೆಯಿಂದ ಹೊರಹೋಗುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಬಸವ ಹಾಗೂ ಅಂಬೇಡ್ಕರ್‌ ವಸತಿ ಮನೆಗಳ ನಿರ್ಮಾಣದ ಪ್ರಗತಿಯ ಬಗ್ಗೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಸಹ ಮಾಹಿತಿ ಪಡೆದರು.

ತಾಲ್ಲೂಕು ಪಂಚಾಯ್ತಿ ಇ.ಒ ಡಿ.ಎಂ.ಜಕ್ಕಪ್ಪಗೋಳ ಮಾತನಾಡಿ, ತಾಲ್ಲೂಕಿನ ಸಿದ್ದಾಪೂರದಲ್ಲಿ ಕೇವಲ 13 ಶೌಚಾಲಯಗಳು ಮಾತ್ರ ಬಾಕಿ ಇವೆ. ಅವನ್ನು ಡಿಸೆಂಬರ್‌ನಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಒಂದೇ ಕ್ಷೇತ್ರದಲ್ಲಿ 301 ಜನ ಸ್ಪರ್ಧೆ!

ಬೆಳಗಾವಿ
ಒಂದೇ ಕ್ಷೇತ್ರದಲ್ಲಿ 301 ಜನ ಸ್ಪರ್ಧೆ!

20 Apr, 2018

ಬೆಳಗಾವಿ
‘ಹಿಂದೂ– ಮುಸ್ಲಿಂ ಧರ್ಮದ ನಡುವಿನ ಚುನಾವಣೆ’

‘ಈ ಬಾರಿಯ ಚುನಾವಣೆ ನಡೆಯುವುದು ರಸ್ತೆ, ಚರಂಡಿ, ಕುಡಿಯುವ ನೀರಿಗಲ್ಲ; ಹಿಂದೂ–ಮುಸ್ಲಿಂ ಧರ್ಮದ ಮಧ್ಯೆ ನಡೆಯುತ್ತಿದೆ..’ಹೀಗೆಂದು ಇಲ್ಲಿನ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ...

20 Apr, 2018

ಎಂ.ಕೆ.ಹುಬ್ಬಳ್ಳಿ
ಟೆಂಪೋ ಪಲ್ಟಿ; 15 ಜನರಿಗೆ ಗಾಯ

ಎಂ.ಕೆ.ಹುಬ್ಬಳ್ಳಿ ಸಮೀಪದ ಅಂಬಡಗಟ್ಟಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಗುರುವಾರ ಮದುವೆಯಿಂದ ಮರಳಿ ಬರುತ್ತಿದ್ದ ಮಿನಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ...

20 Apr, 2018

ಬೆಳಗಾವಿ
ಬೆಳಗಾವಿ: ಸ್ವಪಕ್ಷೀಯರಿಂದಲೇ ಸಂಸದರ ವಿರುದ್ಧ ಪ್ರತಿಭಟನೆ

ಬೆಳಗಾವಿಯ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಮುಖಂಡರ ಬೆಂಬಲಿಗರು ಎನ್ನಲಾದ ಪಕ್ಷದ ಕಾರ್ಯಕರ್ತರು ನಗರದಲ್ಲಿ ಗುರುವಾರ ಸಂಜೆ ಪ್ರತ್ಯೇಕವಾಗಿ ಪ್ರತಿಭಟನೆ...

20 Apr, 2018

ಬೈಲಹೊಂಗಲ
ಪಕ್ಷೇತರ ಅಭ್ಯರ್ಥಿಯಾಗಿ ಮೆಟಗುಡ್ಡ ನಾಮಪತ್ರ

ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡಿರುವ ಜಗದೀಶ ಮೆಟಗುಡ್ಡ ಸಾವಿರಾರು ಬೆಂಬಲಿಗರ ಜತೆಗೂಡಿ ಮೆರವಣಿಗೆ ನಡೆಸಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ಕೆ.ಸಿ.ದೊರೆಸ್ವಾಮಿ ಅವರಿಗೆ ಗುರುವಾರ...

20 Apr, 2018