ಧಾರವಾಡ

ಯೋಗೀಶ ಗೌಡ ಗೌಡರ ಕೊಲೆ ಪ್ರಕರಣ ಕಮಿಷನರ್‌–ಎಸ್‌ಪಿ ನಡುವೆ ಹಗ್ಗಜಗ್ಗಾಟ

ಬೆಳಗಾವಿ ಐಜಿಪಿ ಕಚೇರಿಯ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಹಾಗೂ ಧಾರವಾಡ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ಅವರು ಯೋಗೀಶ ಗೌಡರ ಕೊಲೆ ಆರೋಪಿಗಳೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದರು

ನಾಗರಾಜ

ಧಾರವಾಡ: ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಕೊಲೆ ಆರೋಪಿಗಳ ಜತೆ ರಾಜಿ ಮಾಡಿಕೊಳ್ಳುವಂತೆ ಇಬ್ಬರು ಡಿವೈಎಸ್ಪಿಗಳು ಒತ್ತಡ ಹೇರಿದ್ದರು ಎನ್ನಲಾದ ಪ್ರಕರಣದ ತನಿಖೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಮಿಷನರೇಟ್‌ ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ಕೈಚೆಲ್ಲಿದ್ದಾರೆ.

ಕೊಲೆ ಆರೋಪಿಗಳ ಜತೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಿರುವ ಘಟನೆ ನಡೆದಿರುವುದು ತಮ್ಮ ವ್ಯಾಪ್ತಿಯಲ್ಲಿ ಅಲ್ಲ ಎಂದು ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರು ಪ್ರತ್ಯೇಕವಾಗಿ ತಿಳಿಸಿದ್ದಾರೆ.

ಹೀಗಾಗಿ ಯೋಗೀಶಗೌಡರ ಸಹೋದರ ಗುರುನಾಥಗೌಡ ಗೌಡರ ಕೊಟ್ಟಿರುವ ದೂರಿನ ತನಿಖೆ ಯಾರು ನಡೆಸಬೇಕು ಎನ್ನುವ ಗೊಂದಲ ಮೂಡಿದ್ದು, ಡಿಜಿಪಿ ಮುಂದೆ ಈ ವಿಷಯ ಚರ್ಚೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಐಜಿಪಿ ಕಚೇರಿಯ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಹಾಗೂ ಧಾರವಾಡ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ಅವರು ಯೋಗೀಶ ಗೌಡರ ಕೊಲೆ ಆರೋಪಿಗಳೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಿ ನ.29ರಂದು ಗುರುನಾಥ ಗೌಡ, ಎಸ್ಪಿ ಸಂಗೀತಾ ಅವರಿಗೆ ದೂರು ನೀಡಿದ್ದರು.

ಇದರ ತನಿಖೆ ನಡೆಸಿದ್ದ ಸಂಗೀತಾ ನ.30ರಂದು ಗುರುನಾಥಗೌಡರಿಗೆ ಹಿಂಬರಹದ ಪತ್ರ ಕೊಟ್ಟಿದ್ದಾರೆ. ‘ಘಟನೆ ನಡೆದಿರುವುದು ಶ್ರೀನಗರ ಬಳಿ ಇರುವ ಹೋಟೆಲ್ ಉದ್ಯಮಿ ಮಹೇಶ ಶೆಟ್ಟಿ ಮನೆಯಲ್ಲಿ. ಹೀಗಾಗಿ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ. ಜತೆಗೆ ಈ ಅರ್ಜಿಯನ್ನು ಮುಂದಿನ ಕ್ರಮಕ್ಕಾಗಿ ಪೊಲೀಸ್‌ ಕಮಿಷನರ್‌ ಅವರಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.

ಆದರೆ, ಇದನ್ನು ಪೊಲೀಸ್‌ ಕಮಿಷನರ್‌ ನಾಗರಾಜ ನಿರಾಕರಿಸಿದ್ದಾರೆ. ‘ರಾಜಿ ಮಾತುಕತೆ ಆರಂಭವಾಗಿರುವುದು ತಾಲ್ಲೂಕಿನ ಗೋವನಕೊಪ್ಪದಲ್ಲಿ. ಅದು ಗ್ರಾಮೀಣ ಠಾಣೆ ವ್ಯಾಪ್ತಿಗೆ ಬರುತ್ತದೆ. ಅದರ ನಂತರ ಶ್ರೀನಗರದಲ್ಲಿ ಮಾತುಕತೆ ನಡೆದಿದೆ. ಹೀಗಾಗಿ ಜಿಲ್ಲಾ ಪೊಲೀಸರೇ ಇದರ ತನಿಖೆ ನಡೆಸಬೇಕು. ಈ ವಿಷಯದಲ್ಲಿ ಎಸ್ಪಿಗೆ ಗೊಂದಲ ಇರಬೇಕು’ ಎಂದು ಕಮಿಷನರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

Comments
ಈ ವಿಭಾಗದಿಂದ ಇನ್ನಷ್ಟು
ಮುಂದುವರಿದ ಅಕ್ರಮ ಪಂಪ್‌ಸೆಟ್‌ ತೆರವು

ದಾವಣಗೆರೆ/ಮಾಯಕೊಂಡ
ಮುಂದುವರಿದ ಅಕ್ರಮ ಪಂಪ್‌ಸೆಟ್‌ ತೆರವು

20 Jan, 2018
ಸಿಪಿಐ ರಾಜ್ಯ ಸಮ್ಮೇಳನ 27ರಿಂದ

ದಾವಣಗೆರೆ
ಸಿಪಿಐ ರಾಜ್ಯ ಸಮ್ಮೇಳನ 27ರಿಂದ

20 Jan, 2018

ಚನ್ನಗಿರಿ
ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವಡ್ನಾಳ್‌ ರಾಜಣ್ಣ

‘ಕಾಂಗ್ರೆಸ್ ಸರ್ಕಾರ ₹ 8560 ಕೋಟಿ ರೈತರ ಸಾಲವನ್ನು ಮನ್ನಾ ಮಾಡಿದೆ. ಆದರೆ ಅಚ್ಛೇ ದಿನ್ ಎಂದು ಹೇಳುವ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ...

20 Jan, 2018
ಟೊಮೆಟೊ ಸುರಿದು ರೈತರ ಪ್ರತಿಭಟನೆ

ದಾವಣಗೆರೆ
ಟೊಮೆಟೊ ಸುರಿದು ರೈತರ ಪ್ರತಿಭಟನೆ

19 Jan, 2018
ಎಲೆಕೋಸು: ರೈತನಿಗೆ ಬೆಲೆ ಕುಸಿತದ ಆತಂಕ

ಸಂತೇಬೆನ್ನೂರು
ಎಲೆಕೋಸು: ರೈತನಿಗೆ ಬೆಲೆ ಕುಸಿತದ ಆತಂಕ

19 Jan, 2018