ಡಂಬಳ

‘ಹಬ್ಬಗಳು ಸೌಹಾರ್ದದ ಪ್ರತೀಕವಾಗಲಿ’

ಹಬ್ಬಗಳಿಂದ ಸಮಾಜದಲ್ಲಿ ಸಾಮರಸ್ಯ ನೆಲೆಸಬೇಕು. ಎಲ್ಲ ಧರ್ಮದವರು ಎಲ್ಲ ಹಬ್ಬಗಳನ್ನು ಪ್ರೀತಿ, ಸೌಹಾರ್ದದಿಂದ ಆಚರಿಸಬೇಕು’

ಡಂಬಳ: ‘ಹಬ್ಬಗಳಿಂದ ಸಮಾಜದಲ್ಲಿ ಸಾಮರಸ್ಯ ನೆಲೆಸಬೇಕು. ಎಲ್ಲ ಧರ್ಮದವರು ಎಲ್ಲ ಹಬ್ಬಗಳನ್ನು ಪ್ರೀತಿ, ಸೌಹಾರ್ದದಿಂದ ಆಚರಿಸಬೇಕು’ ಎಂದು ಸಿಪಿಐ ಮಂಜುನಾಥ ಆರ್. ನಡುವಿನಮನಿ ಹೇಳಿದರು. ಡಂಬಳ ಗ್ರಾಮದಲ್ಲಿ ನಡೆದ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಗಂಗಾವತಿ, ಡಿ.ಬಿ.ಡೊಲಿ ಮಾತನಾಡಿ, ‘ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರ ಸಾಮಾಜಿಕ ಕಾರ್ಯಗಳಿಂದ ಡಂಬಳ ಕೋಮು ಸೌಹಾರ್ದಕ್ಕೆ ದೇಶದಲ್ಲೇ ಹೆಸರು ಪಡೆದಿದೆ. ಇಲ್ಲಿ ಎಲ್ಲ ಧರ್ಮದವರು ಸೇರಿ ಎಲ್ಲ ಹಬ್ಬಗಳನ್ನು ಪ್ರೀತಿ, ವಿಶ್ವಾಸ, ಹಾಗೂ ಸೌಹಾರ್ದದಿಂದ ಆಚರಿಸುತ್ತಾರೆ’ ಈ ವರ್ಷವೂ ಆ ಸಂಪ್ರದಾಯ ಮುಂದುವರಿಯಲಿದೆ ಎಂದು ಹೇಳಿದರು.

ಹುಸೇನಸಾಬ್ ಮೂಲಿಮನಿ, ಸುರೇಶ ಗಡಗಿ, ಮುರ್ತುಜಾ ಮೂಲಿಮನಿ, ನಿಂಗಪ್ಪ ಗೋವಿನಕೊಪ್ಪ, ಮುತ್ತಣ್ಣಕೊಂತಿಕೊಲ್ಲ ಮಲ್ಲಿಕಾರ್ಜುನ ಪ್ಯಾಟಿ ಸಭೆಯಲ್ಲಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಗದಗ
ಪುಸ್ತಕಗಳಿಂದ ವಿಚಾರ ಕ್ರಾಂತಿ: ತೋಂಟದ ಶ್ರೀ

‘ಮಠಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗದೆ, ಪುಸ್ತಕೋತ್ಸವಗಳಂತಹ ಸಮಾಜಮುಖಿ ಕಾರ್ಯಗಳನ್ನು ಕೈಕೊಳ್ಳುವ ಮೂಲಕ ಜ್ಞಾನ ದಾಸೋಹದ ಕೇಂದ್ರಗಳಾಗಬೇಕು’ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ...

20 Apr, 2018
ಅಸಮರ್ಪಕ ನೀರು ಪೂರೈಕೆ: ಗ್ರಾಮಸ್ಥರಿಂದ ರಸ್ತೆ ತಡೆ

ಮುಂಡರಗಿ
ಅಸಮರ್ಪಕ ನೀರು ಪೂರೈಕೆ: ಗ್ರಾಮಸ್ಥರಿಂದ ರಸ್ತೆ ತಡೆ

20 Apr, 2018

ಲಕ್ಷ್ಮೇಶ್ವರ
ಲಕ್ಷ್ಮೇಶ್ವರ ಸುತ್ತಮುತ್ತ ಭಾರಿ ಮಳೆ– ಗಾಳಿ: ಅಪಾರ ನಷ್ಟ

ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ರಾತ್ರಿ ಬೀಸಿದ ರಭಸದ ಮಳೆ– ಗಾಳಿಗೆ ಅನೇಕ ಮರಗಳು ಧರೆಗುರುಳಿದ್ದು ಮನೆಗಳ ತಗಡಿನ ಚಾವಣಿ ಹಾರಿ ಹೋಗಿದೆ. ...

20 Apr, 2018

ಗದಗ
ನಾಲ್ಕು ಅಭ್ಯರ್ಥಿಗಳಿಂದ ನಾಮಪತ್ರ

ಗದಗ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಗುರುವಾರ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

20 Apr, 2018

ನರೇಗಲ್
‘ಅಭಿವೃದ್ಧಿ ಸಹಿಸದ ಬಿಜೆಪಿಯಿಂದ ಸುಳ್ಳು ಆರೋಪ’

‘ಅಭಿವೃದ್ದಿಯನ್ನು ಅರಗಿಸಿಕೊಳ್ಳಲಾಗದ ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡುತ್ತಿವೆ’ ಎಂದು ಶಾಸಕ ಜಿ.ಎಸ್.ಪಾಟೀಲ ಟೀಕಿಸಿದರು.

18 Apr, 2018