ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾದಿ ಜನ್ಮದಿನ: ಈದ್‌ ಮಿಲಾದ್ ಇಂದು

Last Updated 2 ಡಿಸೆಂಬರ್ 2017, 10:02 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಾದ್ಯಂತ ಶನಿವಾರ ಈದ್ ಮಿಲಾದ್ ಆಚರಿಸಲಾಗುತ್ತಿದ್ದು, ಶುಕ್ರವಾರ ಎಲ್ಲೆಡೆ ಸಿದ್ಧತೆಗಳು ಕಂಡುಬಂದವು. ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆ, ತಾಲ್ಲೂಕು ಕೇಂದ್ರಗಳು ಸೇರಿದಂತೆ ಬಹುತೇಕ ಕಡೆ ಮಸೀದಿ, ದರ್ಗಾ, ಪ್ರಮುಖ ರಸ್ತೆ, ವೃತ್ತಗಳನ್ನು ಸಿಂಗರಿಸಲಾಗಿದೆ.

ವಿದ್ಯುತ್ ದೀಪಾಲಂಕಾರ, ಬಣ್ಣ ಬಣ್ಣದ ಬಂಟಿಂಗ್ಸ್, ಮೆಕ್ಕಾ–ಮದೀನದ ಭಾವ ಚಿತ್ರಗಳು, ಕುರಾನ್‌ನ ಉಕ್ತಿಗಳು, ಹಬ್ಬದ ಶುಭಾಷಯ ನುಡಿಗಳು, ಉರ್ದು, ಅರೇಬಿಕ್‌, ಹಿಂದಿ, ಕನ್ನಡದ ಸಂದೇಶಳು, ಬಾವುಟಗಳು, ಬ್ಯಾನರ್‌ಗಳಿಂದ ಸಿಂಗರಿಸಲಾಗಿದೆ. ಇತ್ತ ಮಾರುಕಟ್ಟೆಯಲ್ಲಿ ಹಣ್ಣು ಹಂಪಲುಗಳು, ಆಹಾರ ಧಾನ್ಯ, ಬಟ್ಟೆ ಬರೆ, ಸುಗಂಧ ದ್ರವ್ಯ ಖರೀದಿ ಅಬ್ಬರ ಜೋರಾಗಿತ್ತು.

ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಜನ್ಮದಿನವನ್ನು ಎಲ್ಲೆಡೆ ‘ಈದ್‌– ಎ –ಮಿಲಾದ್‌ –ಉನ್‌– ನಬಿ’ (ಪ್ರವಾದಿ ಹುಟ್ಟಿದ ಹಬ್ಬ) ಎಂದು ಆಚರಿಸಲಾಗುತ್ತದೆ. ಈ ಉರ್ದು ಪದವು ನಾಡಿನಾದ್ಯಂತ ‘ಈದ್‌ ಮಿಲಾದ್‌’ ಎಂದೇ ಜನಪ್ರಿಯಗೊಂಡಿದೆ.

ಹಬ್ಬದ ಸಂದರ್ಭದಲ್ಲಿ ಇಸ್ಲಾಂ ಧರ್ಮದ ಪವಿತ್ರ ತತ್ವ ಪದಗಳನ್ನು ಹಾಡುತ್ತಾ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ನಗರದ ಮೆಹೆಬೂಬ್‌ಸುವಾನಿ ದರ್ಗಾದಿಂದ, ಹೊಸಮನಿ ಸಿದ್ಧಪ್ಪ ವೃತ್ತ, ಜೆಎಚ್ ಪಟೇಲ್‌ ವೃತ್ತ, ಸುಭಾಸ್‌ ವೃತ್ತ, ರೈಲ್ವೆ ನಿಲ್ದಾಣ ರಸ್ತೆ, ಹುಕ್ಕೇರಿಮಠ ರಸ್ತೆ ಮೂಲಕ ಸಾಗುತ್ತದೆ.

ದೇವರು ಎಲ್ಲರಿಗಿಂತ ದೊಡ್ಡವನು, ದೇವರ ಸ್ಮರಣೆ ದೊಡ್ಡದು, ದೇವರ ತತ್ವ, ವಿಚಾರ, ಬೋಧನೆ, ಧರ್ಮ ಪಾಲನೆ, ನೀತಿ, ನಿಯಮವನ್ನು ಎಂದಿಗೂ ಕೈ ಬಿಡದೆ ಪಾಲನೆ ಮಾಡುತ್ತೆವೆ ಎಂದು ಪ್ರಾರ್ಥಿಸುತ್ತಾರೆ. ಸಾಮೂಹಿಕ ಪ್ರಾರ್ಥನೆಗಳು ನಡೆಯುತ್ತವೆ. ಪರಸ್ಪರ ಶುಭವಿನಿಮಯ ಮಾಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT