ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಪ್ರಯಾಣ ಕ್ಲಿನಿಕ್‌ ಉದ್ಘಾಟನೆ

Last Updated 2 ಡಿಸೆಂಬರ್ 2017, 10:19 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಯಾಣಿಕರಿಗೆ ಮತ್ತು ಸಾರಿಗೆ ನಿಗಮಗಳ ನೌಕರಿಗೆ ಉಚಿತವಾಗಿ ತುರ್ತು ಚಿಕಿತ್ಸೆ ಒದಗಿಸುವ ಮಹತ್ವಾಕಾಂಕ್ಷೆಯ ಇಂದಿರಾ ಪ್ರಯಾಣ (ಟ್ರಾನ್ಸಿಟ್‌) ಕ್ಲಿನಿಕ್‌ಗಳನ್ನು ನಗರದ ಕೆಂಪೇಗೌಡ ಬಸ್‌ನಿಲ್ದಾಣ ಹಾಗೂ ಯಶವಂತಪುರ ಬಸ್‌ ನಿಲ್ದಾಣಗಳ ಬಳಿ ಆರಂಭಿಸಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಭಾಗಿತ್ವದಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಯೋಜನೆಯಡಿ ಆರಂಭಿಸಲಾದ ಈ ಕ್ಲಿನಿಕ್‌ಗೆ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಶನಿವಾರ ಚಾಲನೆ ನೀಡಿದರು.

ಕ್ಲಿನಿಕ್‌ನಲ್ಲಿ ಏನೇನಿದೆ?
ಪ್ರಾಥಮಿಕ ಆರೋಗ್ಯ ಸೇವೆ ಹಾಗೂ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಕ್ಲಿನಿಕ್‌ನಲ್ಲಿದೆ. ತಲಾ ಒಬ್ಬರು ವೈದ್ಯಾಧಿಕಾರಿ,  ಶೂಶ್ರೂಷಕಿ, ಹಾಗೂ ಫಾರ್ಮಸಿಸ್ಟ್‌ ಕರ್ತವ್ಯ ನಿರ್ವಹಿಸಲಿದ್ದಾರೆ. ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಕ್ಲಿನಿಕ್‌ ತೆರೆದಿರುತ್ತದೆ. ಸಿಬ್ಬಂದಿ ಎರಡು ಪಾಳಿಯಲ್ಲಿ ಸೇವೆ ಒದಗಿಸಲಿದ್ದಾರೆ.

ಔಷಧ ಉಚಿತ
ಕ್ಲಿನಿಕ್‌ನಲ್ಲಿ ನೀಡುವ ಔಷಧವೂ ಉಚಿತ. ಈ ಸಲುವಾಗಿಯೇ ಆರ್‌ಯುಎಚ್‌ಎಂ ಅಡಿ ತಿಂಗಳಿಗೆ ₹ 1 ಲಕ್ಷ ಅನುದಾನ ಒದಗಿಸಲಾಗುತ್ತದೆ.
ಈ ಕ್ಲಿನಿಕ್‌ನಲ್ಲಿ ಪಡೆಯುವ ಸೇವೆ ಸಂಪೂರ್ಣ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT