, ಕಾಪು ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ: ಆಂಧ್ರ ಪ್ರದೇಶ ಸರ್ಕಾರ ಮಸೂದೆ ಅಂಗೀಕಾರ | ಪ್ರಜಾವಾಣಿ
ಅಮರಾವತಿ

ಕಾಪು ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ: ಆಂಧ್ರ ಪ್ರದೇಶ ಸರ್ಕಾರ ಮಸೂದೆ ಅಂಗೀಕಾರ

ಹಿಂದುಳಿದ ವರ್ಗಗಳಲ್ಲಿ ಎಫ್‌ ಎಂಬ ಕೆಟಗೆರಿ ರೂಪಿಸಿ, ಅದರಲ್ಲಿ ಕಾಪು ಸಮುದಾಯಕ್ಕೆ ಮೀಸಲಾತಿ ನೀಡಲು ಆಂಧ್ರಪ್ರದೇಶದ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿದೆ.

ಎನ್‌. ಚಂದ್ರಬಾಬು ನಾಯ್ಡು

ಅಮರಾವತಿ: ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕಾಪು ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಶನಿವಾರ ಅವಿರೋಧವಾಗಿ ಅಂಗೀಕರಿಸಲಾಯಿತು. 

ಕಾಪು ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕೆಂಬ ಒತ್ತಾಯ ಬಹಳ ವರ್ಷಗಳಿಂದ ಇತ್ತು. ಹಿಂದುಳಿದ ವರ್ಗಗಳಲ್ಲಿ ಎಫ್‌ ಎಂಬ ಕೆಟಗೆರಿ ರಚಿಸಿ, ಅದರಲ್ಲಿ ಸಮುದಾಯಕ್ಕೆ ಮೀಸಲಾತಿ ನೀಡಲು ಆಂಧ್ರಪ್ರದೇಶದ ಸರ್ಕಾರ ಮುಂದಾಗಿದೆ.

ಮಸೂದೆಯನ್ನು ಮಂಡಿಸುವಾಗ ವಿರೋಧ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ನ ಶಾಸಕರು ಕಲಾಪ ಬಹಿಷ್ಕರಿಸಿದ್ದರು. ಆಡಳಿತರೂಢ ತೆಲುಗು ದೇಶಂ ಪಕ್ಷ(ಟಿಡಿಪಿ) ಮತ್ತು ಮಿತ್ರಪಕ್ಷವಾಗಿರುವ ಬಿಜೆಪಿ ಶಾಸಕರು ಮಸೂದೆಯ ಚರ್ಚೆಯಲ್ಲಿ ಭಾಗವಹಿಸಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೆ.ಅಚ್ಚ ನಾಯ್ಡು ಮಸೂದೆ ಮಂಡಿಸಿದರು. ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಮತ್ತು ಇತರೆ ಸದಸ್ಯರು ಮಸೂದೆ ಕುರಿತು ಮಾತನಾಡಿದರು. ಬಳಿಕ, ಧ್ವನಿಮತದ ಮೂಲಕ ಅವಿರೋಧವಾಗಿ ಮಸೂದೆ ಅಂಗೀಕರಿಸಲಾಯಿತು.

ಕಾಪು ಸಮುದಾಯದ ಸ್ಥಿತಿಗತಿ ಅಧ್ಯಯನಕ್ಕೆ ಸರಕಾರ ಮಂಜುನಾಥ ಸಮಿತಿ ರಚಿಸಿತ್ತು. ಅದರ ಶಿಫಾರಸಿನ ಮೇರೆಗೆ ಶೇ. 5ರಷ್ಟು ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ನಿರ್ಧರಿಸಿತ್ತು.

ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ ಮೀಸಲಾತಿ ಪ್ರಮಾಣ ಶೇ.50ರ ಮಿತಿಯನ್ನು ಮೀರುವಂತಿಲ್ಲ. ಕಾಪು ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಈ ಮಸೂದೆ ಕಾಯ್ದೆಯಾಗಲು ಸಂವಿಧಾನ ತಿದ್ದುಪಡಿ ಮಾಡಲು ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ರಾಜ್ಯದಲ್ಲಿನ ಹಿಂದುಳಿದ ವರ್ಗಗಳಿಗೆ ಶೇ. 25, ಪರಿಶಿಷ್ಟ ಜಾತಿಗಳಿಗೆ ಶೇ.15, ಪರಿಶಿಷ್ಟ ಪಂಗಡಗಳಿಗೆ ಶೇ.6 ಮತ್ತು ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿಯನ್ನು ಸದ್ಯ ಒದಗಿಸಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಪರಸ್ಪರ ವಂದಿಸಿಕೊಂಡ ನರೇಂದ್ರ ಮೋದಿ ಮತ್ತು ಮನಮೋಹನ್‌ ಸಿಂಗ್‌

ನವದೆಹಲಿ
ಪರಸ್ಪರ ವಂದಿಸಿಕೊಂಡ ನರೇಂದ್ರ ಮೋದಿ ಮತ್ತು ಮನಮೋಹನ್‌ ಸಿಂಗ್‌

13 Dec, 2017
ಕಲ್ಲಿದ್ದಲು ಹಗರಣ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ದೋಷಿ

ನವದೆಹಲಿ
ಕಲ್ಲಿದ್ದಲು ಹಗರಣ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ದೋಷಿ

13 Dec, 2017
ಗುಜರಾತಿನ ಬುಡಕಟ್ಟು ಪ್ರದೇಶವೊಂದರ ಜನರಿಗೆ ಮೋದಿಯೇ ಮುಖ್ಯಮಂತ್ರಿ, ಕಾಂಗ್ರೆಸ್ ಅಂದರೆ ಇಂದಿರಾ ಗಾಂಧಿ ಮಾತ್ರ ಗೊತ್ತು!

ಬಿಜೆಪಿ ಗೊತ್ತಿಲ್ಲ, ಅದೇನಿದ್ದರೂ ಮೋದಿ ಪಕ್ಷ
ಗುಜರಾತಿನ ಬುಡಕಟ್ಟು ಪ್ರದೇಶವೊಂದರ ಜನರಿಗೆ ಮೋದಿಯೇ ಮುಖ್ಯಮಂತ್ರಿ, ಕಾಂಗ್ರೆಸ್ ಅಂದರೆ ಇಂದಿರಾ ಗಾಂಧಿ ಮಾತ್ರ ಗೊತ್ತು!

13 Dec, 2017
ರಾಜಕಾರಣಿಗಳ ಅಪರಾಧ ವಿಚಾರಣೆಗೆ 12 ನ್ಯಾಯಾಲಯ

ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ
ರಾಜಕಾರಣಿಗಳ ಅಪರಾಧ ವಿಚಾರಣೆಗೆ 12 ನ್ಯಾಯಾಲಯ

13 Dec, 2017
ಅನರ್ಹತೆ ಪ್ರಕರಣ: ಹೈಕೋರ್ಟ್ ಮೆಟ್ಟಿಲೇರಿದ ಶರದ್ ಯಾದವ್

ರಾಜ್ಯಸಭೆ ಸದಸ್ಯತ್ವ
ಅನರ್ಹತೆ ಪ್ರಕರಣ: ಹೈಕೋರ್ಟ್ ಮೆಟ್ಟಿಲೇರಿದ ಶರದ್ ಯಾದವ್

13 Dec, 2017