ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಸ್ಟ್ ಇಂಡೀಸ್‌ನಲ್ಲಿ ನನ್ನನ್ನು ಬಂಧಿಸುವಂತೆ ಪೊಲೀಸರಿಗೆ ಕರೆ ಮಾಡಿದ್ದ ಪೊಲಾರ್ಡ್‌: ಹಾರ್ದಿಕ್‌ ಪಾಂಡ್ಯ ಮೆಲುಕು

Last Updated 2 ಡಿಸೆಂಬರ್ 2017, 11:33 IST
ಅಕ್ಷರ ಗಾತ್ರ

ಮುಂಬೈ: ವೆಸ್ಟ್‌ಇಂಡೀಸ್‌ ವಿರುದ್ಧ ಏಕದಿನ ಸರಣಿ ಆಡಲು ಹೋಗಿದ್ದ ಭಾರತದ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಬಂಧಿಸುವಂತೆ ವಿಂಡೀಸ್‌ ಆಟಗಾರ ಕೀರನ್‌ ಪೊಲಾರ್ಡ್‌ ಕರೆ ಮಾಡಿದ್ದ ಪ್ರಸಂಗವನ್ನು ಹಾರ್ದಿಕ್‌ ಪಾಂಡೆ ಮೆಲುಕು ಹಾಕಿದ್ದಾರೆ.

ಗೌರವ್‌ ಕಪೂರ್‌ ಜತೆಗಿನ ‘ಬ್ರೇಕ್‌ ಫಾಸ್ಟ್‌ ವಿತ್‌ ಚಾಂಪಿಯನ್ಸ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಹಾರ್ದಿಕ್‌ ಪಾಂಡ್ಯ, ‘ನಾನು ಪೊಲಾರ್ಡ್‌ ಉತ್ತಮ ಸ್ನೇಹಿತರಾಗಿದ್ದೇವೆ. ಅವರ ದೇಶದಲ್ಲಿ ಪೊಲಾರ್ಡ್‌ ನನ್ನ ಜತೆಗಿರುತ್ತಾರೆ ಎಂಬ ವಿಶ್ವಾಸದೊಂದಿಗೆ ನಾನು ಹೆಚ್ಚಾಗಿ ಸುತ್ತಾಟ ನಡೆಸಿದ್ದೇನೆ’ ಎಂದು ತಿಳಿಸಿದ್ದಾರೆ.

‘ಒಮ್ಮೆ ಪೊಲಾರ್ಡ್‌ ನನ್ನನ್ನು ಶಾಂತವಾಗಿ ಇರುವಂತೆ ಹೇಳಿದ್ದರು. ಆದರೆ, ಆದಕ್ಕೆ ನಾನು ನೀವು ನನ್ನ ಜತೆಗಿರುವಾಗ ಯಾವುದೆ ತೊಂದರೆ ಆಗುವುದಿಲ್ಲ ಎಂದು ತಿಳಿಸಿ ಹೊರಗೆ ಹೊರಟ್ಟಿದ್ದೆ. ಆಗ ಪೊಲಾರ್ಡ್‌ ಪೊಲೀಸರೊಬ್ಬರಿಗೆ ಕರೆ ಮಾಡಿ ನನ್ನನ್ನು ಬಂಧಿಸುವಂತೆ ಸೂಚಿದ್ದರು. ಅದು ನನಗೆ ತಿಳಿದಿರಲಿಲ್ಲ. ನಾನು ಹೊರಗೆ ಹೋದಾಗ ಪೊಲೀಸರೊಬ್ಬರು ನನ್ನನ್ನು ಬಂಧಿಸಲು ಮುಂದಾದರೂ ಆ ಪ್ರಸಂಗವನ್ನು ನಾನು ತಮಾಷೆ ಎಂದು ಭಾವಿಸಿದೆ. ಆದರೆ ಅದು ಒಂದು ಹಂತದವರೆಗೂ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಆಗ ನಾನು ತಕ್ಷಣ ನಮ್ಮ ತಂಡದ ಆಟಗಾರರನ್ನು ಸಂಪರ್ಕಿಸಲು ಪ್ರಯತ್ನಿಸಿದೆ.

ಇದೇ ವೇಳೆ ಪೊಲೀಸರು ಮೊಬೈಲ್‌ನಿಂದ ಯಾರಿಗೋ ಕರೆ ಮಾಡಲು ಮುಂದಾಗಿದ್ದರು. ಆದರೆ, ಅವರು ಮೊಬೈಲ್‌ ಉಲ್ಟಾ ಹಿಡಿದುಕೊಂಡಿದ್ದನ್ನು ನೋಡಿ ಇದು ತಮಾಷೆಗೆ ಎನ್ನುವ ಸಂಗತಿ ತಿಳಿಯಿತು ಎಂದು ಹಾರ್ದಿಕ್‌ ಪಾಂಡ್ಯ ಪೊಲಾರ್ಡ್‌ ಅವರೊಂದಿಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ವೆಸ್ಟ್‌ ಇಂಡಿಸ್‌ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 3–1ರಲ್ಲಿ ಜಯ ಸಾಧಿಸಿತ್ತು. ಆದರೆ, ಐಕೈಕ ಟಿ–20 ಪಂದ್ಯದಲ್ಲಿ ಸೋತಿತ್ತು.

ಭಾರತೀಯ ಕ್ರಿಕೆಟ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಆವೃತ್ತಿಗಳಲ್ಲಿ ಹಾರ್ದಿಕ್‌ ಪಾಂಡ್ಯ ಹಾಗೂ ಕೀರನ್‌ ಪೊರ್ಲಾಡ್‌ ಮುಂಬೈ ಇಂಡಿಯನ್ಸ್‌ ತಂಡದ ಪರ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT