ಬೆಂಗಳೂರು

‘ಸೆಕೆಂಡ್‌ಹ್ಯಾಂಡ್’ ಬೊಕೆ ವ್ಯವಹಾರ

ಪ್ಯಾಂಟ್‌, ಶರ್ಟ್‌, ಮೇಲೊಂದು ಜಾಕೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಶುಕ್ರವಾರ ಮಧ್ಯಾಹ್ನ ವಿಧಾನಸೌಧದ ಮೂರನೇ ಮಹಡಿಯಲ್ಲಿ ಠಳಾಯಿಸಿದ. ಮುಖ್ಯಕಾರ್ಯದರ್ಶಿ ಕಚೇರಿ ಮುಂದೆ ನಿಂತು ತನ್ನ ಪರ್ಸ್‌ನಿಂದ ₹100ರ ನೋಟ್‌ ತೆಗೆದು ಮೇಲಿನ ಕಿಸೆಯಲ್ಲಿಟ್ಟುಕೊಂಡ.

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿರುವ ಕೆ.ರತ್ನಪ್ರಭಾ ಅವರನ್ನು ವ್ಯಕ್ತಿಯೊಬ್ಬ ಸೆಕೆಂಡ್‌ಹ್ಯಾಂಡ್ ಹೂಗುಚ್ಛ ನೀಡಿ ಅಭಿನಂದಿಸಿದ ಪ್ರಸಂಗವಿದು.

ಪ್ಯಾಂಟ್‌, ಶರ್ಟ್‌, ಮೇಲೊಂದು ಜಾಕೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಶುಕ್ರವಾರ ಮಧ್ಯಾಹ್ನ ವಿಧಾನಸೌಧದ ಮೂರನೇ ಮಹಡಿಯಲ್ಲಿ ಠಳಾಯಿಸಿದ. ಮುಖ್ಯಕಾರ್ಯದರ್ಶಿ ಕಚೇರಿ ಮುಂದೆ ನಿಂತು ತನ್ನ ಪರ್ಸ್‌ನಿಂದ ₹100ರ ನೋಟ್‌ ತೆಗೆದು ಮೇಲಿನ ಕಿಸೆಯಲ್ಲಿಟ್ಟುಕೊಂಡ. ಅಲ್ಲಿದ್ದ ಪರಿಚಾರಕ ನೊಬ್ಬನನ್ನು ಕರೆದು ಒಳಗಿಂದ ಎರಡು ಬೊಕೆಗಳನ್ನು
ತರುವಂತೆ ಸೂಚಿಸಿದ.

ಆ ಪರಿಚಾರಕ ಓಡಿಹೋಗಿ ಮೇಡಮ್ ಕಚೇರಿಯ ಒಳಗೆ ರಾಶಿ ಬಿದ್ದಿದ್ದ ಬೊಕೆ ಮತ್ತು ಹಾರಗಳ ನಡುವಿನಿಂದ ಎರಡನ್ನು ಎತ್ತಿಕೊಂಡು ಹಿಂಬಾಗಿಲಿಂದ ಬಂದು ಇವರಿಗೆ ನೀಡಿದ. ಅದರಲ್ಲಿ ಚೆನ್ನಾಗಿರುವ ಒಂದು ಬೊಕೆ ಆಯ್ದುಕೊಂಡ ವ್ಯಕ್ತಿ, ₹100ರ ನೋಟನ್ನು ಪರಿಚಾರಕನ ಕೈಲಿಟ್ಟ!

ಬಳಿಕ ರತ್ನಪ್ರಭಾ ಅವರ ಕಚೇರಿಯ ಒಳಗೆ ಹೋಗಿ ಅಲ್ಲಿನ ಎಲ್ಲ ಸಿಬ್ಬಂದಿಗೂ ತುಂಬಾ ಆತ್ಮೀಯನಂತೆ ಮಾತನಾಡಿಸಿದ. ಅಲ್ಲೇ ಸ್ವಲ್ಪ ಹೊತ್ತು ಕಾಯ್ದು, ರತ್ನಪ್ರಭಾ ಅವರನ್ನು ಅಭಿನಂದಿಸಿ ಸಂತೋಷದಿಂದ ಹೊರಬಂದ. ಸೆಕೆಂಡ್‌ಹ್ಯಾಂಡ್ ಬೊಕೆಯಲ್ಲಿ ವ್ಯವಹಾರ ಮುಗಿಸಿದ ‘ಚತುರ ನಡೆ’ ಕಂಡು ಅಲ್ಲಿದ್ದವರೆಲ್ಲ ಕಕ್ಕಾಬಿಕ್ಕಿಯಾದರು.

Comments
ಈ ವಿಭಾಗದಿಂದ ಇನ್ನಷ್ಟು

ವಾರೆಗಣ್ಣು
ಗೌರವದಿಂದ ಬೀಳ್ಕೊಡೋಣ...

ಮುಧೋಳದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬೆಳಗಾವಿ ವಿಭಾಗದ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶ ನಡೆದಿತ್ತು.

15 Apr, 2018

ವಾರೆಗಣ್ಣು
ಇದೊಂದು ಸಲ ನಮ್ಮನ್ನು ನೋಡಿ!

‘ಎಲ್ಲರನ್ನೂ ನೋಡಿದ್ದೀರಲ್ಲ. ಇದೊಂದ್‌ ಸಲ ನಮಗೂ ಅಧಿಕಾರ ಕೊಟ್ಟು ನೋಡಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅರ್ಧ ತಮಾಷೆ, ಅರ್ಧ...

15 Apr, 2018

ವಾರೆಗಣ್ಣು
ಕಳೆ ಎಂದರೆ ಸಾಕು, ಕಾಂಗ್ರೆಸ್‌ ಬೇಡ!

‘ಈ ಬಾರಿ ನೀವ್‌ ಏನಾದ್ರೂ ತಿಳ್ಕೋಳಿ. ನಮ್‌ ಮನಗೂಳಿಗೆ ನಾವು ಹಾರ ಹಾಕೋದು ಖಚಿತ’.

8 Apr, 2018
ಪ್ರಾಯಶ್ಚಿತ್ತದ ಮೊದಲ ಹೆಜ್ಜೆ ಇಟ್ಟ ವೈಲಿ

ವ್ಯಕ್ತಿ
ಪ್ರಾಯಶ್ಚಿತ್ತದ ಮೊದಲ ಹೆಜ್ಜೆ ಇಟ್ಟ ವೈಲಿ

1 Apr, 2018

ವಾರೆಗಣ್ಣು
ಮೀನಿನ ಊಟ ಮಾಡ್ಸಿಯಪ್ಪ

ಮಧ್ಯಾಹ್ನ 3 ಗಂಟೆ. ಮಂಗಳೂರಿನ ಎಕ್ಕೂರು ಹೊರಾಂಗಣ ಕ್ರೀಡಾಂಗಣದ ಶಿಲಾನ್ಯಾಸ ನೆರವೇರಿಸಲು ಬಂದಿದ್ದ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಮುಖದಲ್ಲಿ ಅಂಥ ಉತ್ಸಾಹ...

1 Apr, 2018