ವಿಜಯಪುರ

ಭಾಷಣದ ಬದಲು ಬೆಳ್ಳುಬ್ಬಿ ಗಾಯನ..!

ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆಗಾಗಿ ವಿಜಯಪುರದ ದರಬಾರ ಪ್ರೌಢಶಾಲಾ ಮೈದಾನದಲ್ಲಿ ಜನಸ್ತೋಮ ಸೇರಿತ್ತು. ಮುಸ್ಸಂಜೆ ದಾಟಿ, ರಾತ್ರಿಯಾದರೂ ನಾಯಕರು ಯಾರೂ ಬರಲಿಲ್ಲ. ಜನರನ್ನು ಸಮಾಧಾನದಿಂದ ಇರಿಸಲು ಸ್ಥಳೀಯ ನಾಯಕರಿಂದಲೇ ಭರ್ಜರಿ ಭಾಷಣ ನಡೆಯುತ್ತಿತ್ತು.

ವಿಜಯಪುರ: ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆಗಾಗಿ ವಿಜಯಪುರದ ದರಬಾರ ಪ್ರೌಢಶಾಲಾ ಮೈದಾನದಲ್ಲಿ ಜನಸ್ತೋಮ ಸೇರಿತ್ತು. ಮುಸ್ಸಂಜೆ ದಾಟಿ, ರಾತ್ರಿಯಾದರೂ ನಾಯಕರು ಯಾರೂ ಬರಲಿಲ್ಲ. ಜನರನ್ನು ಸಮಾಧಾನದಿಂದ ಇರಿಸಲು ಸ್ಥಳೀಯ ನಾಯಕರಿಂದಲೇ ಭರ್ಜರಿ ಭಾಷಣ ನಡೆಯುತ್ತಿತ್ತು.

ಬಿಜೆಪಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಅವರನ್ನು ಭಾಷಣ ಮಾಡುವಂತೆ ಆಹ್ವಾನಿಸಿದರು. ಬೆಳ್ಳುಬ್ಬಿ ಅವರು ಇನ್ನೇನು ಕಾಂಗ್ರೆಸ್‌ ಪಕ್ಷದ ವಿರುದ್ಧ ಟೀಕಾ ಪ್ರಹಾರ ಆರಂಭಿಸಬೇಕು ಎನ್ನುವಷ್ಟರಲ್ಲಿ ಕಾರ್ಯಕರ್ತರು ‘ಭಾಷಣ ಬ್ಯಾಡ್ರೀ... ಬಿಜಾಪುರ ಹಾಡ ಹಾಡ್ರೀ’ ಎಂಬ ಒತ್ತಾಯ ಆರಂಭಿಸಿದರು. ಅದನ್ನು ನಿರ್ಲಕ್ಷಿಸಿದ ಬೆಳ್ಳುಬ್ಬಿ ಭಾಷಣಕ್ಕೆ ಮುಂದಾಗುತ್ತಿದ್ದಂತೆ ಕಾರ್ಯಕರ್ತರ ಗದ್ದಲ ಹೆಚ್ಚಾಯಿತು.

ಒತ್ತಾಯಕ್ಕೆ ಮಣಿದ ಬೆಳ್ಳುಬ್ಬಿ ಭಾಷಣಕ್ಕೆ ಮಂಗಳ ಹಾಡಿ, ವಿಜಯಪುರ ಜಿಲ್ಲೆಯ ಐತಿಹ್ಯ, ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಬಿಂಬಿಸುವ ‘ಭೂ ಲೋಕದ ಸ್ವರ್ಗ ಬಿಜಾಪುರ’ ಎಂಬ ಹಾಡು ಹಾಡಲು ಆರಂಭಿಸಿದರು. ಕಾರ್ಯಕರ್ತರು ಕೇಕೇ, ಶಿಳ್ಳೆ, ಚಪ್ಪಾಳೆಯ ಸುರಿಮಳೆ ಗೈದರು. ಬೆಳ್ಳುಬ್ಬಿ ಮೊಗದಲ್ಲಿ ಮಂದಹಾಸ ಮೂಡಿಸಿತು.

Comments
ಈ ವಿಭಾಗದಿಂದ ಇನ್ನಷ್ಟು
ಫುಟ್‌ಬಾಲ್ ಅಂಗಳದ ಮಿನುಗುತಾರೆ

ವ್ಯಕ್ತಿ
ಫುಟ್‌ಬಾಲ್ ಅಂಗಳದ ಮಿನುಗುತಾರೆ

18 Mar, 2018
 ‘ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಯಲಿ’

ವಾರದ ಸಂದರ್ಶನ
‘ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಯಲಿ’

18 Mar, 2018
ಬುದ್ಧನ ಕಥೆಗೆ ಬಗ್ಗಿದ ವೈದ್ಯ!

ಕಟಕಟೆ–110
ಬುದ್ಧನ ಕಥೆಗೆ ಬಗ್ಗಿದ ವೈದ್ಯ!

18 Mar, 2018

ವಿಜಯಪುರ
‘ನೀನೇನು ಎಲೆಕ್ಷನ್‌ಗೆ ನಿಲ್ತಿಯೇನಪ್ಪಾ..!’

‘ನೋಡಪ್ಪಾ ನೀ ಎಲೆಕ್ಷನ್‌ಗೆ ನಿಲ್ಲೋದಿದ್ರೇ ಹೇಳು. ಸುಮ್ನೇ ಯಾಕ ಕಾರ್ಪೊರೇಟರ್ ಆಗಾಕ ಬಡಿದಾಡ್ತಿ. ನಮ್‌ ಸದಸ್ಯರನ್ನೆಲ್ಲಾ ಒಪ್ಸಿ, ನಿನ್ನೇ ಸಿಟಿಗೆ ಎಂಎಲ್‌ಎ ಎಲೆಕ್ಷನ್‌ಗೆ ನಿಲ್ಲಸ್ತೀನಿ...’ ...

18 Mar, 2018

ಈ ಭಾನುವಾರ
ಬಟ್ಟೆ ಧರಿಸದಿದ್ದರೆ ಮಾನ ಹೋಗೋದು!

‘ಬೆಂಗಳೂರಿನ ಮಾನ ಹೋದ ಮೇಲೆ ಇನ್ನೊಂದು ವರದಿ ಕೊಟ್ಟರೆ ಜನರು ನಂಬ್ತಾರಾ’ ಎಂದು ಪತ್ರಕರ್ತರು ಮರು ಪ್ರಶ್ನಿಸಿದಾಗ, ‘ಅಯ್ಯೊ ಮಾನ ಹೇಗೆ ಹೋಗುತ್ತೆ. ನಾವು...

18 Mar, 2018