ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿಸಿರಿಯಲ್ಲಿ ಅನ್ನದಾಸೋಹದ ರುಚಿ ಸವಿದರು

Last Updated 3 ಡಿಸೆಂಬರ್ 2017, 4:59 IST
ಅಕ್ಷರ ಗಾತ್ರ

ಮೂಡುಬಿದಿರೆ:ಆಳ್ವಾಸ್ ನುಡಿಸಿರಿಯಲ್ಲಿ ಸಾಂಸ್ಕೃತಿಕ ಹಸಿವು ನೀಗಿಸಿಕೊಂಡ ಸಾಹಿತ್ಯಾಸಕ್ತರು ಮಧ್ಯಾಹ್ನ ಮತ್ತು ರಾತ್ರಿ ಕರಾವಳಿ ಜಿಲ್ಲೆಯ ಶುಚಿ ರುಚಿಯಾದ ಭೋಜನ ಸ್ವೀಕರಿಸಿ ಹೊಟ್ಟೆಯ ಹಸಿವನ್ನು ತಣಿಸಿಕೊಂಡರು. ಎರಡನೇ ದಿನ ಸುಮಾರು 90 ಸಾವಿರ ಮಂದಿ ಅನ್ನದಾಸೋಹದಲ್ಲಿ ಭಾಗಿಯಾಗಿ ಜಿಲ್ಲೆಯ ವೈವಿಧ್ಯ ಆಹಾರವನ್ನು ಸ್ವೀಕರಿಸಿ ಖುಷಿಪಟ್ಟರು.

ಆಳ್ವಾಸ್ನ ಪ್ರಮೋದ್ ಹೆಗ್ಡೆ, ದೇವಿಪ್ರಸಾದ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಾಜೀವ್, ಚಂದ್ರಶೇಖರ್ ಮಯ್ಯ ಉಸ್ತುವಾರಿಯಲ್ಲಿ ಆಳದಂಗಡಿಯ ರಾಜೇಂದ್ರ ಹಾಗೂ ವಾಮಂಜೂರಿನ ಸೂರ್ಯನಾರಾಯಣ ಭಟ್ ಉಸ್ತುವಾರಿಯಲ್ಲಿ ಸುಮಾರು 250 ಬಾಣಸಿಗರ ಪ್ರತ್ಯೇಕ ತಂಡ ಅಡುಗೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹುಣಸೆ ಹುಳಿ ಉಪ್ಪಿನಕಾಯಿ, ಅಲಸಂಡೆ ಪಲ್ಯ, ಸುವರ್ಣ ಗಡ್ಡೆ ಗಸಿ, ಅನ್ನ ಸಾರು, ಚಪಾತಿ ಗಸಿ, ತೋವೆ, ಹೆಸರು ಸಾಗು ಪಾಯಸ, ಬೂಂದಿ ಲಡ್ಡು ಇವು ಊಟದ ಮೆನು ಆಗಿದೆ. ಬೆಳ್ತಿಗೆ ಮತ್ತು ಕುಸಲಕ್ಕಿ ಎರಡು ಬಗೆಯ ಊಟ ಇತ್ತು. ಬೆಳಗ್ಗಿನ ಉಪಹಾರಕ್ಕೆ ಸಜ್ಜಿಗೆ ಅವಲಕ್ಕಿ, ಇಡ್ಲಿ ಸಾಂಬಾರ್, ಶೀರ, ಶ್ಯಾವಿಗೆ, ಚಾ, ಕಾಫಿ ನೀಡಲಾಗಿದೆ.

ಕರಾವಳಿ ಖಾದ್ಯದ ಜತೆಗೆ ಉತ್ತರ ಕನರ್ಾಕದವರವರನ್ನು ಗಮನದಲ್ಲಿರಿಸಿಕೊಂಡು ಜೋಳದ ರೋಟಿಯನ್ನು ಭೋಜನದಲ್ಲಿ ಸೇರಿಸಲಾಗಿದ್ದು ಈ ಬಾರಿಯ ವಿಶೇಷವಾಗಿದೆ. ‌‌

ಈ ಬಾರಿಯ ನುಡಿಸಿರಿಗೆ ಹೆಚ್ಚಿನ ಜನರ ಆಗಮನದ ನಿರೀಕ್ಷೆಯಿದ್ದುದರಿಂದ ಎರಡು ಕಡೆ ಭೋಜನ ಕೇಂದ್ರವನ್ನು ತೆರಯಲಾಗಿದೆ. ಡುಗೆ ತಯಾರಿಕೆಗೆ ಭೋಜನ ಶಾಲೆಯಲ್ಲಿ ಬಾಣಸಿಗರು ಅಹನರ್ಿಶಿ ದುಡಿಯುತ್ತಿದ್ದಾರೆ. ಸ್ವಚ್ಚತೆಗಾಗಿ 70 ಕಾರ್ಮಿಕರು ಸಹಕರಿಸುತ್ತಿದ್ದಾರೆ.

ನೂಕು ನುಗ್ಗಲಿಲ್ಲ:ನುಡಿಸಿರಿ ಮತ್ತು ಕೃಷಿಸಿರಿ ಎರಡೂ ಆವರಣದಲ್ಲಿ ಒಟ್ಟು 65 ಊಟದ ಕೌಂಟರ್ಗಳನ್ನು ತೆರೆಯಲಾಗಿದ್ದು ಜಿಲ್ಲೆಯ ಬೇರೆ ಬೇರೆ ಕಾಲೇಜಿನ ಸುಮಾರು 1800 ವಿದ್ಯಾರ್ಥಿಗಳು ಊಟ ಬಡಿಸುವ ವಿಭಾಗದಲ್ಲಿ ಸ್ವಯಂ ಸೇವಕರಾಗಿ ದುಡಿಯುತ್ತಿದ್ದಾರೆ.

ಊಟದ ಕೌಂಟರನ್ನು ತೆರೆಯಲಾಗಿದ್ದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗು ಅನ್ನದಾಸೋಹದ ಸೇವೆ ನಡೆಯುತ್ತಿರುತ್ತದೆ. ಪಾಯಸ ಮತ್ತು ಚಾ-ಕಾಫಿಗೆಂದೆ ದಿನವೊಂದಕ್ಕೆ ಸುಮಾರು 3600 ಲೀಟರ್ನಷ್ಟು ಹಾಲು ಬಳಕೆಯಾಗುತ್ತಿದೆ. ಊಟದ ಕೇಂದ್ರದಲ್ಲಿ ಒಮ್ಮೆಗೆ ಸಾವಿರಾರು ಜನ ಸೇರಿದರು ನೂಕು ನುಗ್ಗಲಿನ ರಗಳೆ ಇಲ್ಲ. ಕ್ಯೂನಲ್ಲಿ ನಿಂತು ಹೆಚ್ಚು ಕಾಯಬೇಕಾಗಿಯು ಇಲ್ಲ. ಇಲ್ಲು ಶಿಸ್ತು ಮತ್ತು ಅಚ್ಚುಕಟ್ಟುತನ ಎದ್ದು ಕಾಣುತ್ತಿದೆ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT