ಮಹಾಲಿಂಗಪುರ

‘ಢವಳೇಶ್ವರ ಸೇತುವೆಗೆ ₹10 ಕೋಟಿ’

2017–18ನೇ ಸಾಲಿನಲ್ಲಿ ತೇರದಾಳ ಮತಕ್ಷೇತ್ರದ ನಂದಗಾಂವ, ಮದಭಾಂವಿ, ನಾವಲಗಿ-ಮಧುರಖಂಡಿ ಗ್ರಾಮಗಳನ್ನು ಗ್ರಾಮ ವಿಕಾಸ ಯೋಜನೆಗೆ ಆಯ್ಕೆ ಮಾಡಲಾಗಿದೆ.

ಮಹಾಲಿಂಗಪುರ: ‘ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ಘಟಪ್ರಭಾ ನದಿಗೆ ಢವಳೇಶ್ವರ ಹತ್ತಿರ ಬೃಹತ್ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹ 10 ಕೋಟಿ ಮಂಜೂರಿ ಮಾಡಿದೆ. ಅತಿ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ನಂದಗಾಂವ ಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆಯ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

ಸೇತುವೆ ನಿರ್ಮಾಣದಿಂದ ತೇರದಾಳ ಕ್ಷೇತ್ರದ ಜನತೆಗೆ ಬೆಳ ಗಾವಿ, ಹುಬ್ಬಳ್ಳಿಯ ಸಂಪರ್ಕ ಅನು ಕೂಲವಾಗಲಿದೆ. ಕೃಷ್ಣಾ ನದಿಗೆ ರಬಕವಿ –ಮಹಿಷವಾಡಗಿ ಸೇತುವೆಯೂ ಮಂಜೂರಿಯಾಗಿದೆ. ಇದರಿಂದ ನೆರೆಯ ಅಥಣಿ ತಾಲ್ಲೂಕಿಗೆ ಸಂಪರ್ಕ ಸಾಧಿಸಲು ಸುಲಭವಾಗಲಿದೆ ಎಂದರು.

2017–18ನೇ ಸಾಲಿನಲ್ಲಿ ತೇರದಾಳ ಮತಕ್ಷೇತ್ರದ ನಂದಗಾಂವ, ಮದಭಾಂವಿ, ನಾವಲಗಿ-ಮಧುರಖಂಡಿ ಗ್ರಾಮಗಳನ್ನು ಗ್ರಾಮ ವಿಕಾಸ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ನಾಲ್ಕು ಗ್ರಾಮಗಳಿಗೆ ತಲಾ ₹ 1 ಕೋಟಿ ಅನುದಾನ ಬರಲಿದೆ. ಈ ಅನುದಾನದಲ್ಲಿ ಚರಂಡಿ ನಿರ್ಮಾಣ, ಗ್ರಂಥಾಲಯ, ಸಿಸಿ ರಸ್ತೆ, ತಿಪ್ಪೆಗುಂಡಿಗಳ ನಿರ್ಮಾಣ, ಸಾಮೂಹಿಕ ಶೌಚಾಲಯ ನಿರ್ಮಾಣ ಸೇರಿದಂತೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಈ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವೆ ಹೇಳಿದರು.

ಎಸ್‌ಸಿ ಕಾಲೊನಿ ಸಿಸಿ ರಸ್ತೆಗೆ ₹ 33 ಲಕ್ಷ, ನಂದಗಾಂವ-ಮಹಾಲಿಂಗಪುರ ರಸ್ತೆ ಡಾಂಬರೀಕರಣಕ್ಕೆ ₹ 50 ಲಕ್ಷ, ನಂದಗಾಂವ–ಢವಳೇಶ್ವರ ರಸ್ತೆ ಅಭಿವೃದ್ಧಿಗೆ ₹ 1 ಕೋಟಿ, ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ₹ 10 ಲಕ್ಷ, ಶುದ್ಧ ಕುಡಿಯುವ ನೀರಿನ ಘಟಕ, ಇತರ ದೇವಸ್ಥಾನಗಳಿಗೆ ಅನುದಾನ ಹಾಗೂ ಈಗ ಗ್ರಾಮ ವಿಕಾಸದ ₹ 1 ಕೋಟಿ ಸೇರಿದಂತೆ ಸುಮಾರು ₹ 4.50 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಕಾರ್ಯಗಳನ್ನು ನಂದಗಾಂವ ಗ್ರಾಮವೊಂದರಲ್ಲೇ ಕೈಗೊಳ್ಳಲಾಗಿದೆ ಎಂದು ಸಚಿವೆ ವಿವರ ನೀಡಿದರು.

ಎಲ್ಲ ಮನೆಗೂ ಸರಕಾರಿ ಸೌಲಭ್ಯ: ತೇರದಾಳ ಮತಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ 7-8 ಸಾವಿರ ಮನೆಗಳನ್ನು ನೀಡಲಾಗಿದೆ. ತೇರದಾಳ ಮತಕ್ಷೇತ್ರಕ್ಕೆ ಸಾವಿರ ಕೋಟಿಗೂ ಅಧಿಕ ಅನುದಾನ ತಂದು ಸಂಪೂರ್ಣ ತೇರದಾಳ ಮತಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಮೂಲಕ ಹೆಣ್ಣು ಮಗಳು ಏನು ಮಾಡುತ್ತಾಳೆ ಎನ್ನುತ್ತಿದ್ದವರಿಗೆ ಅಭಿವೃದ್ಧಿ ಕೆಲಸಗಳ ಮೂಲಕ ಉತ್ತರ ನೀಡಿದ್ದೇನೆ. ಕ್ಷೇತ್ರದ ಸಕಲರಿಗೂ ಒಂದಿಲ್ಲೊಂದು ಸರ್ಕಾರಿ ಸೌಲಭ್ಯ ಸಿಗುವಂತೆ ಮಾಡಿದ್ದೇನೆ ಎಂದು ವಿವರ ನೀಡಿದರು.

ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಸಿಂಗಾಡಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಲ್ಲಪ್ಪ ಹರಿಜನ, ಉಪಾಧ್ಯಕ್ಷ ಸಂಗಪ್ಪ ಮುಗಳಖೋಡ, ಪುರಸಭೆ ಅಧ್ಯಕ್ಷ ಬಸವರಾಜ ರಾಯರ, ಸದಸ್ಯರಾದ ಜಾವೇದ ಭಾಗವಾನ, ಮಂಜು ಬಕರೆ, ಹೊಳೆಪ್ಪ ಬಾಡಗಿ, ಗ್ರಾಮ ಪಂಚಾಯ್ತಿ ಸದಸ್ಯರಾದ ವೆಂಕಪ್ಪ ಹೊಸೂರ, ಯಮನವ್ವ ಖೋತ, ಮೀನಾಕ್ಷಿ ಗುಗ್ಗರಿ, ಶಾಂತವ್ವ ಗಸ್ತಿ, ಬಸು ಬಾರಕೋಲ, ಕಾಂಗ್ರೆಸ್ ಮುಖಂಡರಾದ ವಿಜುಗೌಡ ಪಾಟೀಲ, ಬಿ.ವಿ. ಅಡವಿಮನಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಆರಂಭವಾಗದ ಇಂದಿರಾ ಕ್ಯಾಂಟಿನ್

ಬಾಗಲಕೋಟೆ
ಆರಂಭವಾಗದ ಇಂದಿರಾ ಕ್ಯಾಂಟಿನ್

17 Mar, 2018
ಅನುಮತಿ ರದ್ದತಿಗೆ ಕಾಶಪ್ಪನವರ ಒತ್ತಾಯ

ಇಳಕಲ್
ಅನುಮತಿ ರದ್ದತಿಗೆ ಕಾಶಪ್ಪನವರ ಒತ್ತಾಯ

17 Mar, 2018

ಇಳಕಲ್
ಇಳಕನ್ ನಗರಸಭೆ: ಖುರ್ಷಿದಾ ಅಧ್ಯಕ್ಷೆ

ಇಳಕಲ್‌ ನಗರಸಭೆಯ ನೂತನ ಅಧ್ಯಕ್ಷರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ 21ನೇ ವಾರ್ಡ್‌ನ ಖುರ್ಷಿದಾ ಮೆಹಬೂಬ್‌ಸಾಬ್‌ ಗದ್ವಾಲ್‌ ಅವಿರೋಧವಾಗಿ ಆಯ್ಕೆಯಾದರು.

17 Mar, 2018

ಇಳಕಲ್‌
ಬಿಸಿಯೂಟದ ಸಿಬ್ಬಂದಿ ವಜಾಕ್ಕೆ ಒತ್ತಾಯ

ಸಮೀಪದ ಹಿರೇಉಪನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಸಿಬ್ಬಂದಿ ಶುಚಿ–ರುಚಿಯಾಗಿ ಅಡುಗೆ ಮಾಡುತ್ತಿಲ್ಲ. ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಶಾಲೆಯ ವಿದ್ಯಾರ್ಥಿಗಳು...

17 Mar, 2018

ಬೀಳಗಿ
ಪಕ್ಷ ಸಂಘಟನೆಗೆ ಶ್ರಮಿಸುವೆ: ಪಾಟೀಲ

‘ಹೈಕಮಾಂಡ್ ನನ್ನ ಮೇಲೆ ನಂಬಿಕೆ ಇಟ್ಟು ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿದೆ. ಅದನ್ನು ಯಶಸ್ವಿಯಾಗಿ ನಿಭಾಯಿಸುವೆ ಎಂದು ಕೆಪಿಸಿಸಿ ನೂತನ ಕಾರ್ಯದರ್ಶಿ ಎಂ.ಎನ್. ಪಾಟೀಲ...

17 Mar, 2018