ಬಾಗಲಕೋಟೆ

ಪೈಗಂಬರ ಜನ್ಮದಿನ: ಭವ್ಯ ಮೆರವಣಿಗೆ

ಮುಂಜಾನೆ ಅಂಜುಮನ್ ಸಂಸ್ಥೆ ಆವರಣದಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಪಂಖಾ ಮಸೀದಿಯ ಹತ್ತಿರ ಸಮಾರೋಪಗೊಂಡಿತು.

ಬಾಗಲಕೋಟೆಯಲ್ಲಿ ಶನಿವಾರ ಈದ್‌ಮಿಲಾದ್ ಅಂಗವಾಗಿ ಮುಸ್ಲಿಂ ಸಮಾಜದ ವತಿಯಿಂದ ಮೆರವಣಿಗೆ ನಡೆಸಲಾಯಿತು

ಬಾಗಲಕೋಟೆ: ಜಗತ್ತಿಗೆ ಮಾನವತೆಯ ಬೆಳಕು ಪಸರಿಸಿದ ಪ್ರವಾದಿ ಮಹಮ್ಮದ್‌ ಅವರ ಜನ್ಮ ದಿನಾಚರಣೆಯನ್ನು ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಗರದಲ್ಲಿ ಭವ್ಯ ಮೆರವಣಿಗೆಯನ್ನು (ಜುಲೂಸ್) ನಡೆಸಲಾಯಿತು.

ಮುಂಜಾನೆ ಅಂಜುಮನ್ ಸಂಸ್ಥೆ ಆವರಣದಿಂದ ಹೊರಟ ಮೆರವಣಿ ಗೆಯೂ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಪಂಖಾ ಮಸೀದಿಯ ಹತ್ತಿರ ಸಮಾರೋಪಗೊಂಡಿತು.

ಮೆರವಣಿಗೆಯಲ್ಲಿ ಶಾಸಕ ಎಚ್‌.ವೈ.ಮೇಟಿ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೈನುದ್ದೀನ ನಬಿವಾಲೆ, ಬಿಟಿಡಿಎ ಸಭಾಪತಿ ಎ.ಡಿ.ಮೊಕಾಶಿ, ಸೀರತ್ ಸಮಿತಿ ಅಧ್ಯಕ್ಷ ಇಮ್ರಾನ್ ದೊಡಮನಿ, ಶಬ್ಬೀರ್ ಜಮಖಂಡಿ, ಮಹಮ್ಮದ್ ಆರೀಫ್ ಢಾಲಾಯತ್, ಟಂಕಸಾಲಿ, ಜಿ.ಎಂ.ತರಫದಾರ, ನಬಿಸಾಬ್ ಟಂಕಸಾಲಿ, ಎ.ಎಚ್.ಬಾಗೇವಾಡಿ, ನೂರ ಪಟ್ಟೇವಾಲೆ, ಸಲೀಂ ಮೋಮಿನ್, ಅಯೂಬ್ ಬಾಗೇವಾಡಿ, ಇಮಾಮ್ ಜಾಫರ್ ಬೇಪಾರಿ, ಅಕ್ರಮ್ ಶಹಾಪುರ, ಅಬ್ದುಲ್‌ಸತ್ತಾರ ಮನಿಯಾರ, ಮಲ್ಲಿಕಾರ್ಜುನ ಮೇಟಿ, ಅಕ್ಬರ್ ಮುಲ್ಲಾ, ಅಬ್ದುಲ್‌ರಜಾಕ್ ಬೇನೂರ, ಅಬ್ದುಲ್‌ರಜಾಕ್ ಹಳ್ಳೂರ, ರಫೀಕ್ ಇಳಕಲ್ಲ, ಆರ್.ಡಿ.ಬಾಬು, ಸಿಕಂದರ ಅಥಣಿ ಸೇರಿದಂತೆ ಮುಸ್ಲಿಂ ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು.

ನಗರದ ಪ್ರಮುಖ ವೃತ್ತಗಳಲ್ಲಿ ಮಕ್ಕಾ -ಮದೀನಾದ ರೂಪಕಗಳನ್ನು ಸಹ ನಿರ್ಮಾಣ ಮಾಡಲಾಗಿತ್ತು.

ಮಹಮ್ಮದ್‌ರ ಕೊಡುಗೆ ಅಪಾರ

ಬೀಳಗಿ: ‘ಸಮಾಜಕ್ಕೆ ಮಹಮ್ಮದ್ ಪೈಗಂಬರರು ನೀಡಿದ ಕೊಡುಗೆ ಅಪಾರವಾಗಿದೆ. ಅವರು ತೋರಿಸಿದ ಸನ್ಮಾರ್ಗದಲ್ಲಿ ಎಲ್ಲರೂ ಸಾಗಬೇಕಾಗಿದೆ’ ಎಂದು ಮಹಮ್ಮದ್ ಜುಗೇರ್ ಹೇಳಿದರು.

ಇಲ್ಲಿನ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಹಾಗೂ ಮಹಮ್ಮದ್ ಪೈಗಂಬರ್ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ವೇಳೆ ಪೈಗಂಬರರು ವಿಶ್ವಕ್ಕೆ ಸುಖ, ಶಾಂತಿ ಹಾಗೂ ಸಮೃದ್ಧಿ ನೀಡಲಿ ಎಂದು ಖರಾನ್ ಗ್ರಂಥ ಪಠಣ ಮಾಡಲಾಯಿತು.

ಕಾಶೀಂ ಅಲಿಗೋಠೆ, ಮಹಮ್ಮದ್ ಕಮತರ, ಶಮಶುದ್ದೀನ್ ಮುಜಾವಾರ, ಸಲೀಂ ಅರಬ್ಬ, ಎಂ.ಬಿ.ಖಲೀಫ್, ಇಲಿ ಯಾಸ್ ದಂಡೀನ್, ರಫೀಕ್ ಅಲ್ಲಾಡಿ, ಅಜ್ಜುಭಾಯಿ ಸರಕಾರ, ಶಬ್ಬೀರ್ ತಾಂಬೋಳಿ ಇದ್ದರು.

ಮೆರವಣಿಗೆ: ಇಲ್ಲಿನ ಟಿಪ್ಪು ಸುಲ್ತಾನ್ ವೃತ್ತದಿಂದ ಅದ್ಧೂರಿ ಮೆರವಣಿಗೆ ನಡೆಯಿತು. ಡಾ.ಬಿ.ಆರ್ ಅಂಬೇಡ್ಕರ್ ವೃತ್ತಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜುಮ್ಮಾ ಮಸೀದಿಗೆ ತೆರಳಿತು. ನೂರಾರು ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮುಸ್ತಫಾ ಜಯಂತಿ

ತೇರದಾಳ(ಬನಹಟ್ಟಿ): ಪಟ್ಟಣದ ಕಿಲ್ಲಾ ಭಾಗದ ರಜಾಯೆ ಮುಸ್ತಫಾ ಯಂಗ್ ಕಮಿಟಿ ಆಶ್ರಯದಲ್ಲಿ ಶನಿವಾರ ಹಜರತ್‌ ಮಹಮ್ಮದ್‌ ಮುಸ್ತಫಾ ಇವರ ಜಯಂತಿ ನಿಮಿತ್ತವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ 9ಗಂಟೆಗೆ ಸಂಭ್ರಮ ಸಡ ಗರದಿಂದ ಜುಲೂಸ್ ಮೆರವಣಿಗೆ ನಡೆ ಯಿತು. ಮೆರವಣಿಗೆಯು ಜಾಮೀಯಾ ಮಸೀದಿಯಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಮೆರವಣಿಗೆಯಲ್ಲಿ ಚಿಕ್ಕ- ಮಕ್ಕಳು ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಆಸೀಫ್‌ ರಜ್ವಿ ಅವರು ಧಾರ್ಮಿಕ ನಾಥ್ ಹೇಳುತ್ತ ಪಾಲ್ಗೊಂಡಿದ್ದರು.

ಹನಮಂತ ರೋಡನ್ನವರ, ರುಸ್ತುಂ ನಿಪ್ಪಾಣಿ, ರಾಜೇಸಾಬ್ ನಗಾರ್ಜಿ, ಮೊಹಸಿನ್‌ ಜಮಖಂಡಿ, ಬಿಲಾಲ್ ಮುಜಾವರ್‌, ತೌಸೀಫ್ ದರವಾನ, ಇರ್ಫಾನ್‌ ತಾಂಬೋಳಿ, ದಾದಾ ಅತಾರಾವುತ್, ರಾಜು ತಹಶೀಲ್ದಾರ್, ಸಲೀಂ ನಾಯ್ಕವಾಡಿ, ಫಜಲ್ ಅತಾರಾವುತ್, ದಸ್ತಗೀರ ಜಮಾದಾರ ಸೇರಿದಂತೆ ರಜಾಯೆ ಮುಸ್ತಫಾ ಯಂಗ್ ಕಮಿಟಿ ಸದಸ್ಯರು ಮತ್ತು ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಂತರ ವಿವಿಧ ಶಾಲಾ ಮಕ್ಕಳಿಂದ ಭಾಷಣ ಸ್ಪರ್ಧೆ ನಡೆಯಿತು. ಸಂಜೆ ನಾತಿಯಾ ಮುಶಾಯರಾ ಕವಿ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.

ಸಂಭ್ರಮದ ಜಯಂತ್ಯುತ್ಸವ

ರಬಕವಿ ಬನಹಟ್ಟಿ: ಪ್ರವಾದಿ ಮಹಮ್ಮದ್‌ ಪೈಗಂಬರ್‌ ಜನ್ಮಜಯಂತಿ ಉತ್ಸವ ನಗರದಲ್ಲಿ ಶನಿವಾರ ಸಂಭ್ರಮದಿಂದ ಜರುಗಿತು.

ಸ್ಥಳೀಯ ಜಾಮಿಯಾ ಮಸೀದಿ ಆಶ್ರಯದಲ್ಲಿ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 10 ಗಂಟೆಗೆ ಆರಂಭವಾದ ಮೆರವಣಿಗೆಯಲ್ಲಿ ಯುವಕರು ಹಾಡುಗಳಿಗೆ ನೃತ್ಯ ಮಾಡಿದರು. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಮೆರವಣಿಗೆಯಲ್ಲಿ ಮೌಲಾನಾ ಮಂಜೂರ ಇಲಾಹಿ, ಹಾಜಿ ಅನ್ವರ್‌ ಜಂಗಿ, ಹಾಜಿ ಮೌಲಾಸಾಬ್‌ ಪೆಂಡಾರಿ, ಡಾ.ಅಕ್ಬರ್‌ ತಾಂಬೋಳಿ, ಪ್ರೊ.ಬಸವರಾಜ ಕೊಣ್ಣೂರ, ವಿಜಯಕುಮಾರ ಉಮಾಶ್ರೀ, ಇಸಾಕ್‌ ಸವದಿ, ಅಯೂಬ್‌ಖಾನ್‌ ಹೊರಟ್ಟಿ, ಮುಸ್ತಾಕ್‌ ಶೇಖ್, ಮುರಾದ ಮೊಮಿನ್‌, ಅಬ್ದುಲ್‌ ಕೊಣ್ಣೂರ, ರುಸ್ತುಂ ಬಿಜಾಪುರ, ರಾಜು ಪೆಂಡಾರಿ, ಎಂ,ಎಂ,ಬೊಂಬರಡಿ ಸೇರಿದಂತೆ ನೂರಾರು ಚಿಕ್ಕ ಮಕ್ಕಳು, ಶಾಲಾ ಮಕ್ಕಳು, ಯುವಕರು, ಹಿರಿಯರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸಿಪಿಐ ಬಿ.ಎಸ್‌.ಮಂಟೂರ ಮತ್ತು ಪಿಎಸ್ಐ ಎಸ್‌.ಎಸ್‌. ಆವಜಿ, ಎಎಸ್‌ಐ ಯು.ಝ. ಝಾರೆ ಮೆರವಣಿಗೆಗೆ ಸೂಕ್ತ ಬಂದೊಬಸ್ತ್‌ ಒದಗಿಸಿದ್ದರು.

ಜನ್ಮೋತ್ಸವ

ಗುಳೇದಗುಡ್ಡ: ಈದ್ ಮಿಲಾದ್ ಹಬ್ಬದ ಹಾಗೂ ಹಜರತ್ ಮಹಮ್ಮದ್‌ ಪೈಗಂಬರ ಜನ್ಮೋತ್ಸವ ನಿಮಿತ್ತ ಸ್ಥಳೀಯ ಮುಸ್ಲಿಮರು ಪಟ್ಟಣದಲ್ಲಿ ಮೆರವಣಿಗೆ ಶನಿವಾರ ನಡೆಸಿದರು.

ಮೆರವಣಿಗೆಯು ಬಾಗವಾನ ಪೇಟೆಯಿಂದ ಹೊರಟು ಪವಾರ ಕ್ರಾಸ್, ನಡುವಿನಪೇಟೆ, ಪುರಸಭೆ ಸರ್ಕಲ್, ಬನ್ನಿಕಟ್ಟಿ, ಪಿಂಜಾರ ಓಣಿ, ಸರಾಫ್ ಬಜಾರ್, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ್, ಅರಳಿಕಟ್ಟಿ, ರಜಂಗಳಪೇಟೆ ಮೂಲಕ ಹಾಯ್ದು ಬಾಗವಾನಪೇಟೆಗೆ ಬಂದು ತಲುಪಿತು.

ಮೆರವಣಿಗೆಯಲ್ಲಿ ಸೊಪಿ ಅಬುಬಕರ ಮುಪ್ತಿ, ಜಮೀರ್ ಮೌಲ್ವಿ, ಎಂ. ಎಂ. ಜಮಖಾನಿ, ಕೆ.ಎಂ. ಮಕಾನ ದಾರ, ಸಲಿಂ ಮೋಮಿನ್, ಅನ್ವರಖಾನ್‌ ಪಠಾಣ, ಮುಬಾರಕ್‌ ಮಂಗಳೂರ, ಚಾಂದಸಾಬ್ ಹನಮಸಾಗರ, ನಜೀರಸಾಬ್ ಕೊತ್ತಲ, ಅಬ್ದುಲ್ ರಜಾಕ್ ಸವರಾಜ, ಯುವಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಫೆಬ್ರುವರಿಯೊಳಗೆ ಕಬ್ಬು ಬಾಕಿ ಪಾವತಿ

ಬಾಗಲಕೋಟೆ
ಫೆಬ್ರುವರಿಯೊಳಗೆ ಕಬ್ಬು ಬಾಕಿ ಪಾವತಿ

21 Jan, 2018

ರಬಕವಿ–ಬನಹಟ್ಟಿ
‘ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ’

‘ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದರಿಂದ ಅಪಘಾತಗಳಿಂದಾಗುವ ಅನಾಹುತ ತಪ್ಪಿಸಬಹುದು. ಹೆಲ್ಮೆಟ್ ಧರಿಸುವುದರಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳಬಹುದು’

21 Jan, 2018
33 ಸಾವಿರ ಅಭ್ಯರ್ಥಿಗಳಿಂದ ನೋಂದಣಿ!

ಬಾಗಲಕೋಟೆ
33 ಸಾವಿರ ಅಭ್ಯರ್ಥಿಗಳಿಂದ ನೋಂದಣಿ!

20 Jan, 2018

ಅಮೀನಗಡ
ಸಂದಿಗ್ಧ ಪರಿಸ್ಥಿತಿಯಲ್ಲಿ ಕರಕುಶಲಕರ್ಮಿಗಳು

‘ದೇಶದಲ್ಲಿ ವಿವಿಧ ಕರಕುಶಲ ಉತ್ಪನ್ನಗಳನ್ನು ತಮ್ಮ ಕರಗಳಿಂದಲೇ ಉತ್ಪಾದನೆಯನ್ನು ಮಾಡಿ ಜೀವನವನ್ನು ಸಾಗಿಸುವ ಶ್ರಮ ಜೀವಿಗಳ ಸಂಖ್ಯೆ ಶೇ 70 ರಷ್ಟಿದ್ದು, ಯಾಂತ್ರಿಕತೆಯಿಂದ ಬದುಕುವ...

20 Jan, 2018

ಅಮೀನಗಡ
ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ: ವಿಷಾದ

ದೇಶದಲ್ಲಿ ಸಂವಿಧಾನಾತ್ಮಕ ಕಾನೂನುಗಳಲ್ಲಿ ಶಿಕ್ಷಣ ಕಲಿಕೆಗೆ ಮತ್ತು ಬದುಕಿಗೆ ಅನ್ವಯವಾಗುವಷ್ಟು ಕಾನೂನು ಜ್ಞಾನ ಪಡೆಯಬೇಕು.

20 Jan, 2018