ಮುಧೋಳ

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚು

ನೇಪಾಳ ದೇಶದ ಕಠ್ಮಂಡುನಲ್ಲಿ 2017ರ ಅಕ್ಟೋಬರ್ 28ರಿಂದ 30ರವರೆಗೆ ನಡೆದ ಅಂತರ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ 100 ಮೀ. ಸ್ಟ್ರಿಂಟ್ ರನ್ನಿಂಗ್‌ನಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಬೆಳ್ಳಿ ಪದಕ ದೇಶಕ್ಕೆ ಕೊಡುಗೆ ನೀಡಿದ್ದಾರೆ.

ನೇಪಾಳದಲ್ಲಿ ನಡೆದ ಅಂತರ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಪಡೆದ ಬೆಳ್ಳಿ ಪದಕದೊಂದಿಗೆ ಮುಧೋಳ ತಾಲ್ಲೂಕು ಹಲಕಿ ಗ್ರಾಮದ ಬಸವರಾಜ ಹೊರಡ್ಡಿ

ಮುಧೋಳ: ಗ್ರಾಮೀಣ ಭಾಗದಲ್ಲಿ ಜನಿಸಿ, ಸರಿಯಾದ ಮಾರ್ಗದರ್ಶನ ಇಲ್ಲದೆ, ದೈಹಿಕ ಅಂಗವಿಕಲತೆಯನ್ನೂ ಮೀರಿ ತನ್ನ ಸಾಧನೆಯ ಮೂಲಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಪ್ರತಿಭೆ ಮುಧೋಳ ತಾಲ್ಲೂಕಿನ ಹಲಕಿ ಗ್ರಾಮ ಬಸವರಾಜ ತಮ್ಮಣ್ಣಪ್ಪ ಹೊರಡ್ಡಿ.

ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ನೇಪಾಳ ದೇಶದ ಕಠ್ಮಂಡುನಲ್ಲಿ 2017ರ ಅಕ್ಟೋಬರ್ 28ರಿಂದ 30ರವರೆಗೆ ನಡೆದ ಅಂತರ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ 100 ಮೀ. ಸ್ಟ್ರಿಂಟ್ ರನ್ನಿಂಗ್‌ನಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಬೆಳ್ಳಿ ಪದಕ ದೇಶಕ್ಕೆ ಕೊಡುಗೆ ನೀಡಿದ್ದಾರೆ.

2009ರಲ್ಲಿ ಬೆಂಗಳೂರಿನಲ್ಲಿ ನಡೆದ ಆವಾಸ್ ವರ್ಡ್ ಗೇಮ್‌ನಲ್ಲಿ 400 ಮೀ. ರಿಲೇಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನದ ಬಂಗಾರದ ಪದಕ ಪಡೆದಿದ್ದಾರೆ. 2007ರಲ್ಲಿ ದಯವಾನ್ ಆವಾಸ್ ವರ್ಡ್ ಗೇಮ್‌ನಲ್ಲಿ ಭಾಗವಹಿಸಿ ತ್ರಿಬಲ್ ಜಂಪ್‌ನಲ್ಲಿ ತೃತೀಯ ಸ್ಥಾನದ ಕಂಚಿನ ಪದಕ ಪಡೆದಿದ್ದಾರೆ. 2006ರಲ್ಲಿ ಶ್ರೀಲಂಕಾದಲ್ಲಿ ನಡೆದ ಇಂಟರ್‌ನ್ಯಾಷನಲ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ 100 ಮೀ. ಹರ್ಡಲ್ ಪ್ರಥಮ ಸ್ಥಾನದ ಚಿನ್ನದ ಪದಕ ಪಡೆದಿದ್ದಾರೆ.

2010 ಇಂಗ್ಲೆಂಡ್‌ನಲ್ಲಿ ನಡೆದ ಅಂತರ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ 100 ಮೀ. ಓಟದಲ್ಲಿ ಪ್ರಥಮದ ಚಿನ್ನದ ಪದಕ ಹಾಗೂ 200 ಮೀ. ಓಟದಲ್ಲಿ ದ್ವಿತೀಯ ಸ್ಥಾನದ ಬೆಳ್ಳಿ ಪದಕ ಪಡೆದಿದ್ದಾರೆ. 2006ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟ ಹಾಗೂ 2006 ಪ್ಯಾರಾ ಏಷಿಯನ್ ಗೇಮ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

‘ಅಂಗವಿಕಲತೆಯ ಬಗ್ಗೆ ಕೊರಗುವುದಕ್ಕಿಂತ ಅದನ್ನು ಉಪಯೋಗಿಸಿಕೊಂಡು ಸಾಧನೆ ಮಾಡುವುದೇ ನಿಜವಾದ ಬದುಕು. ಅಂಗವಿಕಲತೆ ಶಾಪ ಎಂದು ಕೊರಗುವುದೇ ನಿಜವಾದ ಅಂಗವಿಕಲತೆ’ ಎಂದು 29 ವಯಸ್ಸಿನ ಬಸವರಾಜ ಹೇಳುತ್ತಾರೆ.

ಬಡತನದಲ್ಲಿರುವ ತಮಣ್ಣಪ್ಪ ಹೊರಡ್ಡಿ ಹಾಗೂ ಕಸ್ತೂರಿ ಅವರ ಏಕೈಕ ಪುತ್ರ ಬಸವರಾಜ. ಬಿಎ ಶಿಕ್ಷಣ ಮುಗಿದ ತಕ್ಷಣ ಅವರ ಸಾಧನೆ ಗಮನಿಸಿದ ಹಲಕಿ ಗ್ರಾಮದ ಹತ್ತಿರದಲ್ಲಿರುವ ಜೆ.ಕೆ. ಸಿಮೆಂಟ್ ಕಂಪನಿಯ ಆಡಳಿತ ಮಂಡಳಿ ನೌಕರಿ ನೀಡಿದೆ. ಅವರ ಕ್ರೀಡೆಗೆ ನೆರವು ನೀಡುತ್ತಾ ಬಂದಿದೆ. ಜೆ.ಕೆ. ಸಿಮೆಂಟ್ ಕಂಪನಿಯ ಮುಖ್ಯಸ್ಥ ಆರ್‌ಬಿಎಂ ತ್ರಿಪಾಠಿ, ತಾಂತ್ರಿಕ ವಿಭಾಗದ ಮುಖ್ಯಸ್ಥ ಜಯಂತ ಮಲ್ಹೋತ್ರಾ ಅವರನ್ನು ಬಸವರಾಜ ಸ್ಮರಿಸುತ್ತಾರೆ.

ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಮಣ್ಣ ತಳೇವಾಡ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಿಕ ಆರ್ಥಿಕ ನೆರವು ನೀಡಿದ್ದನ್ನೂ ಬಸವರಾಜ ಸ್ಮರಿಸುತ್ತಾರೆ. ಗ್ರಾಮೀಣ ಭಾಗದ ನನಗೆ ಸರಿಯಾದ ಮಾರ್ಗದರ್ಶನ ಮಾಡುವುದರ ಮೂಲಕ ನನ್ನ ಪ್ರತಿಭೆ ಅನಾವರಣಕ್ಕೆ ಕಾರಣರಾದ ತರಬೇತುದಾರ ಆರ್.ಕೆ.ಪಡತಾರೆ ಸ್ಮರಿಸಿ, ಪತ್ನಿ ಪೂರ್ಣಿಮಾ ಹಾಗೂ ಹಲಕಿ ಗ್ರಾಮಸ್ಥರ ಬೆಂಬಲವನ್ನು ನೆನೆಯುತ್ತಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಬಾಗಲಕೋಟೆ
ಯಮಕನಮರಡಿ ಚೆಕ್‌ಪೋಸ್ಟ್‌: 72 ಚೀಲ ಗೋಧಿ ವಶ

ಪರವಾನಗಿ ಇಲ್ಲದೇ, ಲಾರಿಯೊಂದರಲ್ಲಿ ಸಾಗಿಸುತ್ತಿದ್ದ 72 ಚೀಲ ಗೋಧಿಯನ್ನು ಗ್ರಾಮದ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ವಶಪಡಿಸಿಕೊಳ್ಳಲಾಗಿದೆ.

23 Apr, 2018

ಮುಧೋಳ
ಕಾಂಗ್ರೆಸ್ ಸಭೆ: ಒಗ್ಗಟ್ಟಿನ ಮಂತ್ರ ಜಪ

‘ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ನುಡಿದಂತೆ ನಡೆದಿದೆ. ಪ್ರಣಾಳಿಕೆಯಲ್ಲಿ ತಿಳಿಸಿದ ಶೇ 98ರಷ್ಟು ಆಶ್ವಾಸನೆ ಪೂರೈಸಿದೆ. ದೀನ ದಲಿತರಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ...

23 Apr, 2018
ಹುಡ್ಕೊ ಕಾಲೊನಿ: ನೀರಿನ ಸಮಸ್ಯೆ ಉಲ್ಬಣ

ಬಾಗಲಕೋಟೆ
ಹುಡ್ಕೊ ಕಾಲೊನಿ: ನೀರಿನ ಸಮಸ್ಯೆ ಉಲ್ಬಣ

23 Apr, 2018

ಇಳಕಲ್
ಮಾಧುರ್ಯಕ್ಕೆ ಮತ್ತೊಂದು ಹೆಸರು ಪಿಬಿಎಸ್‌

ಗಾನ ಗಂಧರ್ವ ಪಿ.ಬಿ. ಶ್ರೀನಿವಾಸ ಅಸಾಮಾನ್ಯ ಗಾಯಕ. ಕರ್ನಾಟಕ ಮಾತ್ರವಲ್ಲ. ಇಡೀ ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಸಾಧಾರಣ ಸಾಧನೆ ಮಾಡಿ, ಛಾಪು ಮೂಡಿಸಿದ ಮೇರು...

23 Apr, 2018

ಬಾದಾಮಿ
ಸಿದ್ದರಾಮಯ್ಯ ಗೆಲ್ಲಿಸಲು ಪಣ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಬಾದಾಮಿ ಮತಕ್ಷೇತ್ರದಿಂದ ಸ್ಪರ್ಧಿಸಲಿದ್ದು, 24ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅವರನ್ನು ಗೆಲ್ಲಿಸಲು ಎಲ್ಲರೂ ಸಿದ್ಧರಾಗಬೇಕು’ ಎಂದು ಕೆಪಿಸಿಸಿ...

23 Apr, 2018