ರಾಯಚೂರು

ಸಂಭ್ರಮದ ‘ಈದ್‌ ಮಿಲಾದ್‌’ ಅಚರಣೆ

ಮೊಹಮ್ಮದ್‌ ಪೈಗಂಬರ್‌ ಅವರು ಹೇಳಿರುವ ಧರ್ಮ ಸಂದೇಶಗಳನ್ನು ನೆನಪಿಸಿಕೊಳ್ಳುವುದು ಹಬ್ಬದ ಮುಖ್ಯ ಉದ್ದೇಶ

ರಾಯಚೂರು: ಇಸ್ಲಾಂ ಧರ್ಮ ಪ್ರವರ್ತಕ ಮೊಹಮ್ಮದ್‌ ಪೈಗಂಬರ್‌ ಅವರ 1603ನೇ ಜನ್ಮದಿನದ ನಿಮಿತ್ತ ಜಿಲ್ಲೆಯಾದ್ಯಂತ ‘ಈದ್‌ ಮಿಲಾದ್‌’ ಸಂಭ್ರಮದಿಂದ ಆಚರಿಸಲಾಯಿತು.

ಮೊಹಮ್ಮದ್‌ ಪೈಗಂಬರ್‌ ಅವರು ಹೇಳಿರುವ ಧರ್ಮ ಸಂದೇಶಗಳನ್ನು ನೆನಪಿಸಿಕೊಳ್ಳುವುದು ಹಬ್ಬದ ಮುಖ್ಯ ಉದ್ದೇಶ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಮುಖ ರಸ್ತೆಗಳ ವೃತ್ತಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಹಸಿರು ವರ್ಣದ ಬಂಟಿಂಗ್ಸ್‌ ಗಮನ ಸೆಳೆಯು ವಂತಿದ್ದವು. ಹಸಿರು ಹಾಗೂ ಶ್ವೇತ ವಸ್ತ್ರಗಳನ್ನು ವಿಶೇಷ ವಿನ್ಯಾಸಗಳಲ್ಲಿ ಜೋಡಿಸಲಾಗಿತ್ತು.

ಜಹೀರಾಬಾದ್ ವೃತ್ತ, ಜ್ಯೋತಿ ಕಾಲನಿ ವೃತ್ತ, ತಿನ್‌ ಕಂದಿಲ್‌ ವೃತ್ತ, ಶಶಿಮಲ್‌ ವೃತ್ತ, ಝಾಕೀರ್‌ ಹುಸೇನ್‌ ವೃತ್ತ, ಟಿಪ್ಪು ಸುಲ್ತಾನ ರಸ್ತೆ, ಈದ್ಗಾ ಮೈದಾನ, ಪೆಟ್ಲಾ ಬ್ರಿಡ್ಜ್‌ ಪ್ರದೇಶಗಳಲ್ಲಿ ಮಾಡಿದ್ದ ಅಲಂಕಾರವು ಗಮನ ಸೆಳೆದವು. ಗಣ್ಯರು ಶುಭಕೋರಿ ವಿವಿಧೆಡೆ ಫ್ಲೆಕ್ಸ್‌ ಗಳನ್ನು ಹಾಕಿದ್ದರು.

ಮೆರವಣಿಗೆ: ಸಂಜೆನಗರದ ವಿವಿಧ ಮಸೀದಿಗಳಿಂದ ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭವಾಯಿತು. ವೈವಿಧ್ಯಮಯ ವರ್ಣಗಳ ಹೂವುಗಳು, ವಸ್ತ್ರಗಳು ಹಾಗೂ ಕಾಗದಗಳನ್ನು ಬಳಸಿ ನಿರ್ಮಿಸಿದ್ದ ಮೆಕ್ಕಾ, ಮದೀನಾ ಹಾಗೂ ಸ್ಥಳೀಯ ಮಸೀದಿಗಳ ಸ್ತಬ್ಧಚಿತ್ರಗಳು ಒಂದಕ್ಕಿಂತ ಒಂದು ಸುಂದರವಾಗಿದ್ದವು. ಜಾಮೀಯಾ ಮಸೀದಿಯಿಂದ ಈದ್ಗಾ ಮೈದಾನವರೆಗೂ ಪ್ರಧಾನ ಮೆರವಣಿಗೆ ನಡೆಯಿತು.

ಏಕಮಿನಾರ್‌ ಮಸೀದಿ, ರಜಾಮು ಸ್ತಾಫ್‌ ಮಸೀದಿ, ದಾರು ಉಲಮಾ ಮಸೀದಿಗಳಿಂದ ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಮುಸ್ಲಿಮರು. ಹೊಸ ವಸ್ತ್ರಗಳನ್ನು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸ್ತಬ್ಧ ಚಿತ್ರಗಳೊಂದಿಗೆ ಕೂತಿದ್ದ ಮಕ್ಕಳ ವೇಷಭೂಷಣ ಚಿತ್ತಾಕರ್ಷಕವಾಗಿತ್ತು. ಪೊಲೀಸರು ನಗರದ ವಿವಿಧೆಡೆ ಬಂದೋಬಸ್ತ್‌ ಏರ್ಪಡಿಸಿದ್ದರು. ವಾಹನಗಳ ಸಂಚಾರವನ್ನು ನಿಯಂತ್ರಿಸಿ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಅನುಕೂಲ ಮಾಡಿದರು.

Comments
ಈ ವಿಭಾಗದಿಂದ ಇನ್ನಷ್ಟು
ಸಮ್ಮೇಳನದಿಂದ ಸಮಾಜ ಕಟ್ಟುವ ಕೆಲಸ

ರಾಯಚೂರು
ಸಮ್ಮೇಳನದಿಂದ ಸಮಾಜ ಕಟ್ಟುವ ಕೆಲಸ

20 Jan, 2018

ಮಸ್ಕಿ
ತೊಗರಿ ಖರೀದಿ ಕೇಂದ್ರ ಆರಂಭ

ತೊಗರಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು ಸಹಕಾರಿ ಪತ್ತಿನ ಸಹಕಾರಿ ಬ್ಯಾಂಕ್ ಮೂಲಕ ಸರ್ಕಾರ ಖರೀದಿಗೆ ಮುಂದಾಗಿದೆ

20 Jan, 2018
ಅಕ್ಷರ ಜಾತ್ರೆಗೆ ಪೋತ್ನಾಳ ಸಜ್ಜು

ಮಾನ್ವಿ
ಅಕ್ಷರ ಜಾತ್ರೆಗೆ ಪೋತ್ನಾಳ ಸಜ್ಜು

19 Jan, 2018
ಅಂಗನವಾಡಿ,ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ‍್ಯಾಲಿ

ರಾಯಚೂರು
ಅಂಗನವಾಡಿ,ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ‍್ಯಾಲಿ

18 Jan, 2018

ರಾಯಚೂರು
ಶಿವಯೋಗಿ ಸಿದ್ದರಾಮೇಶ್ವರರು ಕರ್ಮಯೋಗಿ

‘ಸಿದ್ದರಾಮೇಶ್ವರರು 68 ಸಾವಿರ ವಚನಗಳನ್ನು ಬರೆದಿದ್ದಾರೆ ಎಂದು ಇತಿಹಾಸದಿಂದ ತಿಳಿದು ಬಂದಿದೆ. 1379 ವಚನಗಳು ನಮಗೆ ಲಭ್ಯವಿರುವುದನ್ನು ಎಂ.ಎಂ.ಕಲಬುರಗಿ ಅವರು ಬರೆದ ಪುಸ್ತಕದಲ್ಲಿ ಕಾಣುತ್ತೇವೆ’...

18 Jan, 2018