ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಿಂದ ಅಭಿವೃದ್ಧಿ ಅಸಾಧ್ಯ

Last Updated 3 ಡಿಸೆಂಬರ್ 2017, 5:59 IST
ಅಕ್ಷರ ಗಾತ್ರ

ರಾಮನಗರ: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಜನರಿಗೆ ಮನವರಿಕೆ ಆಗಿದೆ ಎಂದು ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್‌ ಹೇಳಿದರು.

ಇಲ್ಲಿನ ಮಹದೇಶ್ವರ ಕಾಂಪ್ಲೆಕ್ಸ್‍ ನಲ್ಲಿ ನಗರ ಹಾಗೂ ತಾಲ್ಲೂಕು ಜೆಡಿಎಸ್ ಘಟಕದ ವಿವಿಧ ವಿಭಾಗಗಳ ಪದಾಧಿಕಾರಿಗಳಿಗೆ ಶನಿವಾರ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

ರಾಜ್ಯದ ನೆಲ, ಜಲ ಭಾಷಾ ಸಮಸ್ಯೆಗಳನ್ನು ಪರಿಹರಿಸಲು ಪ್ರಾದೇಶಿಕ ಪಕ್ಷವೊಂದು ಅನಿವಾರ್ಯವಾಗಿದೆ ಎಂಬ ಭಾವನೆ ಜನರಲ್ಲಿ ಭಾವನೆ ಬಂದಿದೆ. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗುವುರದಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಪಕ್ಷದಲ್ಲಿ ವಿವಿಧ ಸ್ಥಾನಮಾನಗಳನ್ನು ಪಡೆದಿರುವವರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷವನ್ನು ಬೆಂಬಲಿಸುವುದರಿಂದ ಆಗುವ ಅನುಕೂಲಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ನಗರ ಘಟಕದ ಅಧ್ಯಕ್ಷ ಕುಮಾರ್ ಮಾತನಾಡಿ, ಪಕ್ಷ ನೀಡಿರುವ ನಗರ ಘಟಕದ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಜತೆಗೆ ಪಕ್ಷದ ಹಿರಿಯ ಮತ್ತು ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ ಯುವ ಪಡೆಯನ್ನು ಸಂಘಟಿಸಿವುದಾಗಿ ತಿಳಿಸಿದರು.

ನೂತನ ಪದಾಧಿಕಾರಿಗಳು: ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದ ತಾಂತ್ರಿಕ ವಿಭಾಗದ ಅಧ್ಯಕ್ಷರಾಗಿ ಅನಿಲ್‍ ಕುಮಾರ್, ಕಾರ್ಯಾಧ್ಯಕ್ಷರಾಗಿ ಎಂ.ಚೇತನ್‍ ಕುಮಾರ್, ಉಪಾಧ್ಯಕ್ಷರಾಗಿ ಜೆ.ಮಂಜುನಾಥ್, ಎಂ.ಅಶೋಕ್, ಬಿ.ಜಿ.ಪ್ರಮೋದ್‍ ಕುಮಾರ್, ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಸಿದ್ಧರಾಜು, ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆರ್.ಸಿ.ಮಂಜೇಶ್‍ ಗೌಡ, ಕಾರ್ಯಾಧಕ್ಷರಾಗಿ ಆರ್.ನಾಗಾರ್ಜುನ್, ಮಹಾ ಪ್ರಧಾನಕಾರ್ಯದರ್ಶಿ ಎಂ.ವರುಣ್‍ ಗೌಡ, ನಗರ ಘಟಕದ ಅಧ್ಯಕ್ಷರಾಗಿ ಎಚ್.ಎಸ್.ಸುನೀಲ್, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸಮೃದ್‍ ಗೌಡ, ನಗರ ಯುವ ಘಟಕದ ಅಧ್ಯಕ್ಷರಾಗಿ ಆರ್.ಪಿ.ಶಿವಕುಮಾರ್, ಉಪಾಧ್ಯಕ್ಷರಾಗಿ ರಘು, ಮಣಿಕಂಠ, ಶಫಿ, ಗೋವಿಂದರಾಜು ಅವರಿಗೆ ನೇಮಕಾತಿ ಪತ್ರವನ್ನು ವಿತರಿಸಲಾಯಿತು.

ನಗರಸಭಾ ಸದಸ್ಯರಾದ ಆರ್.ಎ. ಮಂಜುನಾಥ್‌, ಎ. ರವಿ, ಗ್ಯಾಬ್ರಿಯಲ್‌, ಜೆಡಿಎಸ್ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಾಣೇಶ್, ಕಾರ್ಯದರ್ಶಿ ಬಿ. ಉಮೇಶ್, ಕಾರ್ಯಾಧ್ಯಕ್ಷ ದೊರೆಸ್ವಾಮಿ, ನಗರ ಘಟಕದ ಅಧ್ಯಕ್ಷ ಅಜಯ್‌ ದೇವೇಗೌಡ, ಹಿಂದುಳಿದ ವರ್ಗದ ಅಧ್ಯಕ್ಷ ಜೆ. ಮುಕುಂದರಾಜ್‌, ಮುಖಂಡರಾದ ಸಾಬಾನ್ ಸಾಬ್, ಡಿಪೋ ಚಿಕ್ಕಣ್ಣ, ಎಸ್‌.ಆರ್. ರಾಮಕೃಷ್ಣಯ್ಯ, ಜಗದೀಶ್, ಪ್ರಕಾಶ್, ಡಾ.ಸೈಯದ್, ಜಿ.ಟಿ. ಕೃಷ್ಣಪ್ಪ, ಡಿ. ನರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT