ತುಮಕೂರು

63 ವಾರ್ಡ್‌ಗಳಲ್ಲಿ ಬೋಗಸ್ ಮತದಾರರು

‘ಸತ್ಯಮಂಗಲದ ಮತದಾರರ ಹೆಸರನ್ನು ಕುಣಿಗಲ್ ರಸ್ತೆಯ ಬೂತ್‌ಗೆ ಹಾಕಲಾಗಿದೆ. ಹೀಗೆ ನಗರದ ಒಂದು ಬಡಾವಣೆಯ ಮತದಾರರನ್ನು ಮತ್ತೊಂದು ಬೂತ್‌ಗೆ ಸೇರಿಸಲಾಗಿದೆ.

ಜ್ಯೋತಿ ಗಣೇಶ್

ತುಮಕೂರು: ‘ನಗರದ 63 ವಾರ್ಡ್‌ಗಳಲ್ಲಿ ಅಂದಾಜು 15 ಸಾವಿರ ಬೋಗಸ್ ಮತದಾರರು ಇದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರು ಸೇರಿದಂತೆ ನಗರ ವಾಸಿಗಳಲ್ಲದ ಒಂದೇ ಧರ್ಮದ ಜನರನ್ನು ಮತದಾರರಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ನಕಲಿ ಮತದಾರರ ಪಟ್ಟಿ ವಿರುದ್ಧ ಪಕ್ಷ ಒಂದೂವರೆ ವರ್ಷದಿಂದ ಹೋರಾಟ ನಡೆಸುತ್ತಿದ್ದೇವೆ. ರಾಜ್ಯ ಚುನಾವಣಾ ಆಯೋಗಕ್ಕೂ ದೂರು ನೀಡಿದೆ. ಅ.25ರಂದು ಬಿಡುಗಡೆ ಮಾಡಬೇಕಾದ ಕರಡು ಮತದಾರರ ಪಟ್ಟಿಯನ್ನು ನ.30ರಂದು ಬಿಡುಗಡೆ ಮಾಡಲಾಗಿದೆ. ಡಿ.30ರ ಒಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಈ ಕರಡು ಪಟ್ಟಿಯಲ್ಲಿ ಹೆಚ್ಚಿನ ಲೋಪ ದೋಷಗಳು ಇವೆ’ ಎಂದು ಟೀಕಿಸಿದರು.

‘ಸತ್ಯಮಂಗಲದ ಮತದಾರರ ಹೆಸರನ್ನು ಕುಣಿಗಲ್ ರಸ್ತೆಯ ಬೂತ್‌ಗೆ ಹಾಕಲಾಗಿದೆ. ಹೀಗೆ ನಗರದ ಒಂದು ಬಡಾವಣೆಯ ಮತದಾರರನ್ನು ಮತ್ತೊಂದು ಬೂತ್‌ಗೆ ಸೇರಿಸಲಾಗಿದೆ. ಜನರು ಮತ ಚಲಾಯಿಸಲು ಬರುವುದೇ ಕಷ್ಟ. ಹೀಗಿರುವಾಗ ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ತೆರಳಿ ಮತ ಚಲಾಯಿಸಬೇಕು ಎಂದು ಮತದಾನದಿಂದಲೇ ದೂರ ಉಳಿಯುವ ಸಂಭವ ಇರುತ್ತದೆ’ ಎಂದು ಹೇಳಿದರು.

‘ಮತದಾರರ ಪಟ್ಟಿಯಲ್ಲಿ ಮೃತಪಟ್ಟವರ ಹೆಸರು ಸಾವಿರಾರು ಇವೆ. ಆದರೆ ಬದುಕಿರುವವರನ್ನೇ ಕೈ ಬಿಟ್ಟಿದ್ದಾರೆ. ಈ ಲೋಪದೋಷಗಳನ್ನು ಮೊದಲು ಸರಿಪಡಿಸಬೇಕು. ಎರಡರಿಂದ ಮೂರು ಸಾವಿರದಷ್ಟು ಬಾಂಗ್ಲಾ ವಲಸಿಗರು ಮತದಾರರ ಪಟ್ಟಿಯಲ್ಲಿ ಸೇರಿದ್ದಾರೆ’ ಎಂದು ಆರೋಪಿಸಿದರು.

‘ನಗರದಲ್ಲಿ ಈ ಮುಂಚೆ 222 ಮತಗಟ್ಟೆಗಳು ಇದ್ದವು. ಈಗ 235 ಇವೆ. ಇವುಗಳಿಗೆ ಮತಗಟ್ಟೆ ಅಧಿಕಾರಿಗಳನ್ನು (ಬಿಎಲ್‌ಒ) ನೇಮಿಸಲಾಗಿದೆ. ಆದರೆ ಅಧಿಕಾರಿಗಳಿಗೆ ನಾವು ಯಾವ ಮತಗಟ್ಟೆಗೆ ಬಿಎಲ್‌ಒ ಗಳಾಗಿದ್ದೇವೆ ಎನ್ನುವುದೇ ಗೊತ್ತಿಲ್ಲ. ಕೆಲವರಿಗೆ ಕರೆ ಮಾಡಿದರೆ ನಾವು ನಿವೃತ್ತರಾಗಿದ್ದೇವೆ ಎನ್ನುತ್ತಾರೆ. ಮತ್ತಷ್ಟು ಮೊಬೈಲ್ ಸಂಖ್ಯೆಗಳು ಸರಿ ಇಲ್ಲ. ಒಂಬತ್ತು ಅಂಕಿಗಳು ಇವೆ’ ಎಂದು ದೂರಿದರು.

‘ದೋಷಗಳ ಕುರಿತು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಲಾಗಿದೆ. ಸೋಮವಾರ (ಡಿ.4) ಈ ಕುರಿತು ಸಭೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಅಕ್ರಮಕ್ಕೆ ಅವಕಾಶ ನೀಡಿದ ಅಧಿಕಾರಿಗಳು ತಲೆದಂಡ ತೆರಬೇಕಾಗುತ್ತದೆ’ ಎಂದರು. ಮಂಡಲ ಘಟಕದ ಅಧ್ಯಕ್ಷ ಸಿ.ಎನ್.ರಮೇಶ್, ಎಚ್.ಎಂ.ರವೀಶ್ ಗೋಷ್ಠಿಯಲ್ಲಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಬಸವರಾಜು ವಿರುದ್ಧ ವಾಗ್ದಾಳಿ

ತುಮಕೂರು
ಬಸವರಾಜು ವಿರುದ್ಧ ವಾಗ್ದಾಳಿ

26 Apr, 2018
ಕನ್ಯಕಾ ಪರಮೇಶ್ವರಿ ಅಮ್ಮನವರ ಉತ್ಸವ

ತುಮಕೂರು
ಕನ್ಯಕಾ ಪರಮೇಶ್ವರಿ ಅಮ್ಮನವರ ಉತ್ಸವ

26 Apr, 2018

ತಿಪಟೂರು
ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ

ಜನಪ್ರತಿನಿಧಿಗಳಾಗಲು ಬಯಸುವವರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಬೇಕು. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ದೃಢ ಭರವಸೆಯನ್ನು ನೀಡಬೇಕು ಎಂದು ರೈತ ಪರ ಸಂಘಟನೆಗಳ ಸಮನ್ವಯ...

26 Apr, 2018
ಮಳೆಗಾಳಿಗೆ ತುರುವೇಕೆರೆ ತತ್ತರ

ತುರುವೇಕೆರೆ
ಮಳೆಗಾಳಿಗೆ ತುರುವೇಕೆರೆ ತತ್ತರ

25 Apr, 2018

ತಿಪಟೂರು
ತಿಪಟೂರು: ಈಗ ತೀವ್ರ ಪೈಪೋಟಿ ಕಣ

ಈ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆ ಎಂದೆಂದೂ ಕಾಣದಷ್ಟು ಪಕ್ಷೇತರರ ಸ್ಪರ್ಧೆ ಕಂಡು ಬರುತ್ತಿದ್ದು, ಅವರೆಷ್ಟು ಮತ ಗಳಿಸುತ್ತಾರೆ ಅಥವಾ ಯಾವ ಅಧಿಕೃತ ಅಭ್ಯರ್ಥಿಗಳ ಕಾಲೆಳೆಯುತ್ತಾರೆ...

25 Apr, 2018