ಕೊಪ್ಪಳ

ಮೂಕರಿಗೆ ಮಾತಾದವರು...

ದೊಡ್ಡ ಸಮಾರಂಭದ ವೇದಿಕೆಯ ಮೂಲೆಯಲ್ಲಿ ಈ ಮಹಿಳೆ ನಿಂತಿರುತ್ತಾರೆ. ಭಾಷಣಕಾರರು, ಕಾರ್ಯಕ್ರಮ ನಿರೂಪಕರು ಹೇಳಿದ ಮಾತುಗಳನ್ನು ಸಂಜ್ಞೆ ಮೂಲಕ ತಿಳಿಸುತ್ತಾರೆ.

ಸಂಜ್ಞೆ ಭಾಷೆಯ ತರಬೇತಿ ನೀಡುತ್ತಿರುವ ತಾಹೇರಾ

ಕೊಪ್ಪಳ: ದೊಡ್ಡ ಸಮಾರಂಭದ ವೇದಿಕೆಯ ಮೂಲೆಯಲ್ಲಿ ಈ ಮಹಿಳೆ ನಿಂತಿರುತ್ತಾರೆ. ಭಾಷಣಕಾರರು, ಕಾರ್ಯಕ್ರಮ ನಿರೂಪಕರು ಹೇಳಿದ ಮಾತುಗಳನ್ನು ಸಂಜ್ಞೆ ಮೂಲಕ ತಿಳಿಸುತ್ತಾರೆ. ಸಂಜ್ಞೆಯ ಸಂದೇಶಗಳು ಒಂದು ಸಮೂಹವನ್ನು ತಲುಪುತ್ತಿರುತ್ತದೆ. ಇದು ಯಾರಿಗೂ ಗೊತ್ತೇ ಆಗುವುದಿಲ್ಲ. ಆದರೆ, ಈ ಸಂಜ್ಞೆಗಳು ಮಾತು ಬಾರದವರ ಮನಸ್ಸು ಗಳಿಗೆ ಹೊರ ಪ್ರಪಂಚದ ಅರಿವಿನ ಕಿಂಡಿಯೊಂದನ್ನು ತೆರೆಯುತ್ತದೆ. ಸಭೆ ಸಮಾರಂಭಗಳಲ್ಲಿ ಮೂಕ ಮಕ್ಕಳ, ಯುವಕರ ಗುಂಪನ್ನು ಒಂದೆಡೆ ಕೂರಿಸಿ ಗಂಟೆಗಟ್ಟಲೆ ನಿಂತುಕೊಂಡು ಸಂಜ್ಞೆ ಭಾಷೆಯ ಮೂಲಕ ಮಾತುಗಳನ್ನು ಅರ್ಥ ಮಾಡಿಸುತ್ತಾರೆ.

ತಾಹೇರಾ ಚೌಧರಿ ಲಿಂಗಸೂಗೂರಿ ನವರು. 1997ರಿಂದ ಅಂಗವಿಕಲರ ನೆರವು ಸಂಬಂಧಿಸಿದ ನಾನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಈಗ ಮೂಕರಿಗೆ ಮಾತಾಗಿದ್ದಾರೆ. ಅವರ ಹಕ್ಕುಗಳಿಗಾಗಿ ಹೋರಾಡಿದ್ದಾರೆ. ನಗರದ ಹೊರವಲಯದಲ್ಲಿರುವ ಅಂಗವಿಕಲರಿಗಾಗಿಯೇ ಶ್ರಮಿಸುತ್ತಿರುವ ಕೊಪ್ಪಳದ ಸಮೂಹ ಸಂಸ್ಥೆಯಲ್ಲಿ ಹಿರಿಯ ಯೋಜನಾಧಿಕಾರಿ ಆಗಿದ್ದಾರೆ.

ಅಂಗವಿಕಲರು, ಮಾನಸಿಕ ಅಸ್ವಸ್ಥರು, ಅಸಹಾಯಕರಿಗೆ ನೆರವಾಗುತ್ತಲೇ ಭೌತಿಕ, ಬೌದ್ಧಿಕ ಬದುಕನ್ನು ವಿಸ್ತರಿಸಿಕೊಂಡಿದ್ದಾರೆ. ಬಿ.ಎ. ಪದವಿ ಓದಿ ಬಂದ ತಾಹೇರಾ ಇಂದು ಕೌನ್ಸೆಲಿಂಗ್‌ ಮತ್ತು ಸೈಕೋಥೆರಪಿಯಲ್ಲಿ ಎಂ.ಎಸ್ಸಿ ಅಧ್ಯಯನ ಮಾಡಿದ್ದಾರೆ. ಸಮುದಾಯ ಆಧರಿತ
ಪುನರ್ವಸತಿ ವಿಷಯದಲ್ಲಿ ಡಿಪ್ಲೊಮಾ ಪಡೆದಿದ್ದಾರೆ.

ಇವರು ನೆನಪಿಸುವ ಪ್ರಕಾರ 1997ರಲ್ಲಿ ರಾಯಚೂರಿನ ಜಾಲಹಳ್ಳಿ ಯಲ್ಲಿ ಸಮೂಹ ಹುಟ್ಟಿಕೊಂಡಿತು. ಅಂದು ನನಗೆ ಕೆಲಸದ ಅಗತ್ಯವೂ ಇತ್ತು. ಕಷ್ಟದ ದಿನಗಳವು. ಅಂದಿನಿಂದಲೇ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಬಂದೆ. ಆ ದಿನಗಳಲ್ಲಿ ಅಂಗವಿಕಲರಿಗೆ ಟೈಲರಿಂಗ್‌ ಕಲಿಸುತ್ತಿದ್ದೆ. ಅವರ ಮನೆಮನೆಗೆ ಭೇಟಿ ನೀಡಿ ತರಬೇತಿ ನೀಡುವುದು, ಪೋಷಕರಿಗೆ ತಿಳಿವಳಿಕೆ ಮೂಡಿಸುವುದು, ಫಿಸಿಯೋಥೆರಪಿ ಮಾಡುವುದು ಇತ್ಯಾದಿ ಮಾಡುತ್ತಿದ್ದೆ ಎಂದರು ತಾಹೇರಾ.
(ತಾಹೇರಾ ಮೊಬೈಲ್‌ 96634 72261)

* * 

ಸಂಜ್ಞೆಯ ಕಲಿಕೆ
15ರಿಂದ 35 ವರ್ಷ ವಯೋಮಾನದ 370 ಜನ, 15 ವರ್ಷದೊಳಗಿನ 300 ಜನ ಸಂಜ್ಞೆ ಭಾಷೆ ಕಲಿತಿದ್ದಾರೆ. ಕೆಲವರಿಗೆ ನಮ್ಮ ಸಂಸ್ಥೆಯಲ್ಲಿಯೇ ಉದ್ಯೋಗ ಕೊಟ್ಟಿದ್ದೇವೆ. ಬೆಂಗಳೂರು, ಮೈಸೂರಿನಲ್ಲಿ ಇದೇ ಕ್ಷೇತ್ರ ದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವರು ಗಾರ್ಮೆಂಟ್‌ ಕಾರ್ಖಾನೆಗಳಲ್ಲಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಮುಖ್ಯಮಂತ್ರಿ ಆಗಲು ಅವಕಾಶ ಕೊಡಿ

ಕೊಪ್ಪಳ
ಮುಖ್ಯಮಂತ್ರಿ ಆಗಲು ಅವಕಾಶ ಕೊಡಿ

22 Jan, 2018

ಕನಕಗಿರಿ
₹ 2. 63 ಕೋಟಿ ಕಾಮಗಾರಿಗೆ ಚಾಲನೆ

ಹುಲಸನಹಟ್ಟಿ ಗ್ರಾಮದಿಂದ ಅಡವಿಬಾವಿ ಚಿಕ್ಕತಾಂಡದ ವರೆಗೆ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಲ್ಲಿ ₹ 1. 40...

22 Jan, 2018
ರಾಜ್ಯದಲ್ಲಿ ಹೆಚ್ಚಿದ ಹತ್ಯೆ, ಆತ್ಮಹತ್ಯೆಗಳು

ಕೊಪ್ಪಳ
ರಾಜ್ಯದಲ್ಲಿ ಹೆಚ್ಚಿದ ಹತ್ಯೆ, ಆತ್ಮಹತ್ಯೆಗಳು

21 Jan, 2018
ಹನುಮನಹಳ್ಳಿಯಲ್ಲಿ ಕುಡುಕರಿಗೆ ದೊಣ್ಣೆಯೇಟು ಖಾತ್ರಿ

ಕೊಪ್ಪಳ
ಹನುಮನಹಳ್ಳಿಯಲ್ಲಿ ಕುಡುಕರಿಗೆ ದೊಣ್ಣೆಯೇಟು ಖಾತ್ರಿ

20 Jan, 2018

ಗಂಗಾವತಿ
ಆತ್ಮಹತ್ಯೆ ನಿರ್ಣಯ ಹಿಂಪಡೆದ ಪೌರನೌಕರರು

ಹಿರಿಯ ಕಾರ್ಮಿಕ ನಾಯಕ ಜೆ. ಭಾರದ್ವಾಜ್, ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆಯದಂತೆ ಸರ್ಕಾರದ ನಿರ್ದೇಶನವಿದೆ.

20 Jan, 2018