ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿ ಹಾವಳಿಗೆ ಜನರ ಆಕ್ರೋಶ

Last Updated 3 ಡಿಸೆಂಬರ್ 2017, 6:50 IST
ಅಕ್ಷರ ಗಾತ್ರ

ವಿಜಯಪುರ: ಬೀದಿನಾಯಿಗಳ ಹಾವಳಿ ತಪ್ಪಿಸುವಂತೆ ಪುರಸಭೆಯ ಅಧಿಕಾರಿಗಳಿಗೆ ಅನೇಕ ಬಾರಿಗೆ ಮನವಿ ಮಾಡಿದ್ದೇವೆ. ಇದುವರೆಗೂ ಅವರು ಯಾವುದ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರಾದ ವಿನೋದ್ ಕುಮಾರ್, ಮುರಳಿ, ಚೇತನ್ ಕುಮಾರ್ ಆರೋಪಿಸಿದರು.

ಇಲ್ಲಿನ ಬೀದಿ ಬೀದಿಗಳಲ್ಲಿ ಹಿಂಡುಹಿಂಡಾಗಿ ಓಡಾಡುವ ಬೀದಿನಾಯಿಗಳಿಂದ ಜನರು ನೆಮ್ಮದಿಯಾಗಿ ಓಡಾಡಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಮಕ್ಕಳನ್ನು ಮನೆಗಳಿಂದ ಹೊರಗೆ ಬಿಡಲು ಭಯ ಪಡುವಂತಹ ಸ್ಥಿತಿ ಇದೆ. ಕೋಲಾರ ರಸ್ತೆಯಲ್ಲಿರುವ ಮಾಂಸದ ಅಂಗಡಿಗಳ ಮುಂಭಾಗದಲ್ಲಿ ಸುತ್ತಾಡುವ ನೂರಾರು ಬೀದಿ ನಾಯಿಗಳು ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಸೇರಿ
ದಂತೆ ನಾಗರಿಕರ ಮೇಲೆ ಮುಗಿಬೀಳುತ್ತಿವೆ ಎಂದರು.

ಮಾಂಸ ಮಾರಾಟಕ್ಕೆ ಪ್ರತ್ಯೇಕ ಜಾಗವನ್ನು ಗುರ್ತಿಸಿ, ಎಲ್ಲಾ ಅಂಗಡಿಗಳನ್ನು ಸ್ಥಳಾಂತರ ಮಾಡಬೇಕು, ಇದರಿಂದ ನಾಗರಿಕರು ನೆಮ್ಮದಿಯಿಂದ ಓಡಾಡಲು ಅವಕಾಶವಾಗುತ್ತದೆ ಎಂದರು.

ರಾತ್ರಿಯ ವೇಳೆಯಂತು ಓಡಾಡಲು ಕಷ್ಟ. ಮಾಂಸದ ಅಂಗಡಿಗಳಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯಗಳನ್ನು ತಿನ್ನುವ ನಾಯಿಗಳು ರಸ್ತೆಯ ಇಕ್ಕೆಲುಗಳಲ್ಲೇ ಮಲಗುತ್ತವೆ. ಪುರಸಭೆಯವರ ಗಮನಕ್ಕೆ ತಂದರೆ, ಬೀದಿನಾಯಿಗಳನ್ನು ಹಿಡಿದು ಸಾಯಿಸಲು ಅವಕಾಶವಿಲ್ಲ, ಅವುಗಳನ್ನು ಹಿಡಿದರೆ ಪ್ರಾಣಿದಯಾ ಸಂಘದವರು ವಿರೋಧ ವ್ಯಕ್ತಪಡಿಸುತ್ತಾರೆ ಎನ್ನುವ ಉತ್ತರ ನೀಡುತ್ತಾರೆ ಎಂದರು.

ದೇವನಹಳ್ಳಿ ರಸ್ತೆಯಲ್ಲಿರುವ ದರ್ಗಾದ ಬಳಿ ವೃದ್ಧರೊಬ್ಬರ ಮೇಲೆ ದಾಳಿ ಮಾಡಿದ್ದ ಬೀದಿನಾಯಿಗಳಿಂದ ಕಣ್ಣುಗಳನ್ನು ಕಳೆದುಕೊಂಡು ಸಾವನ್ನಪ್ಪಿದ್ದರು. ಶಾಲಾ ಮಕ್ಕಳ ಮೇಲೆ ದಾಳಿ ಮಾಡಿವೆ. ಆಸ್ಪತ್ರೆಗೆ ಹೋಗುತ್ತಿರುವ ರೋಗಿಗಳಲ್ಲಿ ಬಹಳಷ್ಟು ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಇಷ್ಟಾದರೂ ಕ್ರಮ ಕೈಗೊಳ್ಳದಿದ್ದರೆ ಹೇಗೆ. ಪುರಸಭೆಯವರು ಇದೇ ರೀತಿ ನಿರ್ಲಕ್ಷ್ಯ ವಹಿಸುತ್ತಿದೆ. ಜನರು ಪುರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT