ಹಿರೇಕೆರೂರ

ಅಹೋರಾತ್ರಿ ಧರಣಿ ಡಿ.4ರಿಂದ

‘ಬಗರ್ ಹುಕುಂ ಅಕ್ರಮ ಸಾಗುವಳಿದಾರರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ, ಇದೇ 4ರಂದು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತೇವೆ’

ಹಿರೇಕೆರೂರ: ‘ಬಗರ್ ಹುಕುಂ ಅಕ್ರಮ ಸಾಗುವಳಿದಾರರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ, ಇದೇ 4ರಂದು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತೇವೆ’ ಎಂದು ಉತ್ತರ ಕರ್ನಾಟಕ ಅನ್ನದಾತರ ಸೇನೆ ರಾಜ್ಯ ಸಂಚಾಲಕ ಹನುಮಂತಪ್ಪ ದೀವಿಗಿಹಳ್ಳಿ ಹೇಳಿದರು.

ಬಗರ್ ಹುಕುಂ ಸಾಗುವಳಿ ಮಾಡಿದ ರೈತರಿಗೆ ಪಟ್ಟಾ ನೀಡುವಂತೆ ನವೆಂಬರ್ 20ರಂದು ಜಿಲ್ಲಾಡಳಿತ ಭವನದ ಎದುರು ಉತ್ತರ ಕರ್ನಾಟಕ ಅನ್ನದಾತರ ಸೇನೆ ಕಪ್ಪು ಬಟ್ಟೆ ಪ್ರದರ್ಶಿಸಿತ್ತು. ನಮ್ಮನ್ನು ಭೇಟಿ ಮಾಡಿದ್ದ ಅಧಿಕಾರಿಗಳು ಸಾಗುವಳಿದಾರರಿಗೆ ಹಕ್ಕುಪತ್ರ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಕೆಲಸ ಮಾತ್ರ ಮಾಡಿಲ್ಲ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ತಾಲ್ಲೂಕಿನ ತಹಶೀಲ್ದಾರರು, ಅರಣ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದಾಗಿ ವರಹ, ಆಲದಗೇರಿ ಹಾಗೂ ಬಾವಾಪುರ ಗ್ರಾಮಗಳ ಸಾಗುವಳಿದಾರರಿಗೆ ಹಕ್ಕುಪತ್ರ ಸಿಗುತ್ತಿಲ್ಲ ಎಂದು ಹೇಳಿದರು.

4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಣಕ್ಕೆ ಬರುತ್ತಿದ್ದಾರೆ. ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಹತ್ತಿ ಮತ್ತು ಗೋವಿನಜೋಳ ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ, ಜಿಲ್ಲೆಯ ಸಮಸ್ಯೆಗಳ ಕುರಿತು ಅವರ ಗಮನ ಸೆಳೆಯಲಾಗುವುದು ಎಂದರು.

ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ, ಮಂಜಯ್ಯ ಮಠದ, ಸಿದ್ದಪ್ಪ ನೂಲಗೇರಿ, ಜಗದೀಶ ಕುಸಗೂರ, ಚಂದ್ರು ಮತ್ತೂರ, ಬಸಪ್ಪ ಲಗುಬಗಿ, ತಾವರೆಪ್ಪ ಮೂಡಿ ಹಾಗೂ ಮಹೇಶಪ್ಪ ಪುಟ್ಟಪ್ಪನವರ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ

ಬ್ಯಾಡಗಿ
ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ

18 Apr, 2018

ಹಾವೇರಿ
ಅನುಭವ ಮಂಟಪ, ಶರಣರು, ಇಂದಿನ ಶಾಸಕರು

ನುಡಿದಂತೆ ನಡೆಯುವ ವ್ಯಕ್ತಿಗಳನ್ನು ಪ್ರಜೆಗಳು ಆಯ್ಕೆ ಮಾಡಬೇಕು. ಜನರಿಂದ ನಾಯಕನೇ ಹೊರತು, ಜನರಿಲ್ಲದಿದ್ದರೆ ಯಾರೂ ನಾಯಕರಲ್ಲ ಎಂಬ ಅರಿವು ಇರಬೇಕು. ತಮ್ಮ ಕುಟುಂಬದಂತೆ ಸಮಾಜವನ್ನೂ...

18 Apr, 2018

ಹಾವೇರಿ
ಗುರು–ಶಿಷ್ಯರ ಜಗಳಕ್ಕೆ ಮಾನೆ ‘ಮದ್ದು’

ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಗುರು–ಶಿಷ್ಯರುಗಳ ಜಗಳದಲ್ಲಿ ಶಾಸಕ ಮನೋಹರ್ ತಹಸೀಲ್ದಾರಗೆ ಟಿಕೆಟ್ ಕೈ ತಪ್ಪಿದ್ದು, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರನ್ನು ಕಾಂಗ್ರೆಸ್...

18 Apr, 2018

ಹಾನಗಲ್
ಹಾನಗಲ್‌ ಅಭ್ಯರ್ಥಿಯಾಗಿದ್ದು ನನ್ನ ಭಾಗ್ಯ

‘ಜಾತಿ ರಾಜಕಾರಣದ ಸೊಂಕಿಲ್ಲದ ಮತ್ತು ಜ್ಯಾತ್ಯತೀತ ಶಕ್ತಿ ಕೇಂದ್ರವೆಂದು ಗುರುತಿಸಲ್ಪಡುವ ಹಾನಗಲ್‌ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗುವ ಅವಕಾಶ ಲಭಿಸಿರುವುದು ನನ್ನ ಭಾಗ್ಯ’ ಎಂದು...

18 Apr, 2018

ಹಾವೇರಿ
‘ಕೈ’ ಕೊಟ್ಟಿತೇ ಅತಿಯಾದ ಆತ್ಮವಿಶ್ವಾಸ!

ಶಾಸಕ ಬಸವರಾಜ ಶಿವಣ್ಣನವರ ಅತಿಯಾದ ಆತ್ಮವಿಶ್ವಾಸವೇ ಕಾಂಗ್ರೆಸ್ ಟಿಕೆಟ್‌ ಕೈ ತಪ್ಪಲು ಕಾರಣವಾಯಿತೇ? ಎಂಬ ವಿಶ್ಲೇಷಣೆಯು ರಾಜಕೀಯ ವಲಯದಲ್ಲಿ ಜೋರಾಗಿದೆ.

17 Apr, 2018