ಚಿತ್ರದುರ್ಗ

‘ಒಳಮೀಸಲಾತಿ ಸಿಗುವುದಾದರೆ ರಾಜೀನಾಮೆ ಕೊಡುವೆ’

ನನ್ನ ರಾಜೀನಾಮೆಯಿಂದ ಮಾದಿಗ ಜನಾಂಗಕ್ಕೆ ಒಳಮೀಸಲಾತಿ ಸಿಗುತ್ತದೆ ಎನ್ನುವುದಾದರೆ ಅದಕ್ಕೂ ಸಿದ್ಧ ’

ಆಂಜನೇಯ

ಚಿತ್ರದುರ್ಗ: ‘ನನ್ನ ರಾಜೀನಾಮೆಯಿಂದ ಮಾದಿಗ ಜನಾಂಗಕ್ಕೆ ಒಳಮೀಸಲಾತಿ ಸಿಗುತ್ತದೆ ಎನ್ನುವುದಾದರೆ ಅದಕ್ಕೂ ಸಿದ್ಧ ’ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಎಚ್. ಆಂಜನೇಯ ಭರವಸೆ ನೀಡಿದರು.

ಮಾದಿಗ ಜನಾಂಗಕ್ಕೆ ಒಳಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿರುವ ಕಾರ್ಯಕರ್ತರನ್ನು ಶನಿವಾರ ನಗರದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಭೇಟಿಯಾಗಿ ಅವರು ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಒಳಮೀಸಲಾತಿಗೆ ಶಿಫಾರಸು ಮಾಡಲು ಅಸಹಾಯಕರಾದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೋರಾಟಕ್ಕೆ ಬರಬೇಕು ಎಂದು ಹೋರಾಟಗಾರರು ಕೇಳುತ್ತಿದ್ದಾರೆ. ಇದರಲ್ಲಿ ಅಸಹಾಯಕತೆಯ ಪ್ರಶ್ನೆಯೇ ಇಲ್ಲ. ರಾಜೀನಾಮೆಯಿಂದ ಅನುಕೂಲವಾಗುತ್ತದೆ, ಹೋರಾಟಗಾರರಿಗೆ ಸಮಾಧಾನವಾಗುತ್ತದೆ ಎನ್ನುವುದಾದರೆ ಅದಕ್ಕೂ ಸಿದ್ಧನಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಸದಾಶಿವ ವರದಿ ಅನುಷ್ಠಾನದಿಂದ ಭೋವಿ, ಲಂಬಾಣಿ, ಕೊರಚ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ಹೊರ ಹಾಕಲಾಗುತ್ತದೆ ಎಂಬ ತಪ್ಪು ಮಾಹಿತಿಯಿಂದಾಗಿ, ಆ ಸಮುದಾಯದವರು ಒಳಮೀಸಲಾತಿ ವಿರೋಧಿಸುತ್ತಿದ್ದಾರೆ. ಸಂವಿಧಾನದ ಪ್ರಕಾರ ಯಾವುದೇ ಆಯೋಗಕ್ಕಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಒಂದು ಜಾತಿಯನ್ನು ಸೇರಿಸುವ ಅಥವಾ ತೆಗೆಯುವುದಕ್ಕೆ ಅಧಿಕಾರ ಇರುವುದಿಲ್ಲ. ಕೇಂದ್ರ ನೀಡುವ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸುವುದಷ್ಟೇ ನಮ್ಮ ಕೆಲಸ. ಹಾಗಾಗಿ ಈ ವಿಚಾರದಲ್ಲಿ ಆ ಸಮುದಾಯದವರು ಭಯಪಡಬೇಕಾಗಿಲ್ಲ’ ಎಂದು ಅವರು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು

ಹಿರಿಯೂರು
‘ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ’

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ, ಕಮೀಷನ್ ರಹಿತ ಆಡಳಿತ ವ್ಯವಸ್ಥೆಗೆ, ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಈ ಬಾರಿ ಬಿಜೆಪಿಗೆ ಮತ ನೀಡಿ ಎಂದು ರಾಜ್ಯ...

22 Apr, 2018

ಹಿರಿಯೂರು
ಮತದಾರರು ಆಮಿಷಗಳಿಗೆ ಬಲಿಯಾಗದಿರಲಿ

ಮತದಾರರು ರಾಜಕಾರಣಿಗಳು ತೋರಿಸುವ ಆಮಿಷಗಳಿಗೆ ಬಲಿಯಾಗಿ ಆತ್ಮಗೌರವ ಕಳೆದುಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಎಚ್ಚರಿಕೆ ನೀಡಿದರು.

22 Apr, 2018

ಹೊಸದುರ್ಗ
ಬಿಜೆಪಿ ಅಧಿಕಾರಕ್ಕೆ ಬಂದರೆ 12 ತಾಸು ವಿದ್ಯುತ್‌ ಪೂರೈಕೆ

ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದಿನದ 12 ತಾಸು ವಿದ್ಯುತ್ ಪೂರೈಸುವ ಜತೆಗೆ ಅಡಿಕೆ, ತೆಂಗು, ದಾಳಿಂಬೆ ಬೆಳೆಗಾರರ ಸಮಸ್ಯೆ ನಿವಾರಿಸಲಾಗುವುದು....

22 Apr, 2018

ಮೊಳಕಾಲ್ಮುರು
ಸಭೆಗಳಿಂದ ಮತಗಳು ಬೀಳುವುದಿಲ್ಲ

ಪಕ್ಷಗಳು ಆಯೋಜಿಸುವ ಬೃಹತ್‌ ಕಾರ್ಯಕರ್ತರ ಸಭೆಗಳಿಂದ ಮತಗಳು ಬೀಳುವುದಿಲ್ಲ. ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದಲ್ಲಿ ಮಾತ್ರ ಗೆಲ್ಲಲು ಸಾಧ್ಯ. ಇದನ್ನು ಮುಖಂಡರು ಅರಿಯಬೇಕು...

22 Apr, 2018
‘ನಾಯಕ ಸಮುದಾಯಕ್ಕೆ ಅನ್ಯಾಯ ಮಾಡಿದ ಸಿದ್ದರಾಮಯ್ಯ’

ಚಿತ್ರದುರ್ಗ
‘ನಾಯಕ ಸಮುದಾಯಕ್ಕೆ ಅನ್ಯಾಯ ಮಾಡಿದ ಸಿದ್ದರಾಮಯ್ಯ’

22 Apr, 2018