ಚಿಕ್ಕಮಗಳೂರು

ಈದ್‌ ಮಿಲಾದ್‌ ಮೆರವಣಿಗೆ ಸಡಗರ

‘ಬ್ರಿಟಿಷರ ವಿರುದ್ಧ ಹೋರಾಡಿ ಕನ್ನಡ ಮಣ್ಣಿಗಾಗಿ ಮಡಿದದವ ಟಿಪ್ಪು...’, ‘ಟಿಪ್ಪು ಮೈಸೂರು ಟೈಗರು...’, ‘ಕನ್ನಡ ಮಣ್ಣಿಗೆ ಹೆಮ್ಮೆ ಟಿಪ್ಪು...’ ಮೊದಲಾದ ಟಿಪ್ಪು ಸುಲ್ತಾನ್‌ ಗುಣಗಾನದ ಗೀತೆಗಳು ಧ್ವನಿವರ್ಧಕದಲ್ಲಿ ಮೊಳಗಿದವು

ಚಿಕ್ಕಮಗಳೂರು: ಈದ್‌ ಮಿಲಾದ್‌ ಆಚರಣೆ ಅಂಗವಾಗಿ ಮುಸ್ಲಿಮರು ಶನಿವಾರ ನಗರದಲ್ಲಿ ಸಡಗರದಿಂದ ಈದ್‌ ಮಿಲಾದ್‌ ಮೆರವಣಿಗೆ ನಡೆಸಿದರು. ನಗರದ ಅಂಡೇ ಛತ್ರದ ಬಳಿಯಿಂದ ಬೆಳಿಗ್ಗೆ 10.15ಕ್ಕೆ ಮೆರವಣಿಗೆ ಹೊರಟಿತು. ಸಹಸ್ರಾರು ಮುಸ್ಲಿಮರು ಪಾಲ್ಗೊಂಡಿದ್ದರು. ‘ಜಿಂದಾಬಾದ್‌–ಜಿಂದಾಬಾದ್‌ ಇಸ್ಲಾಂ ಜಿಂದಾಬಾದ್’, ‘ಅಲ್ಲಾಹು ಅಕ್ಬರ್‌’ ಘೋಷಣೆಗಳನ್ನು ಕೂಗಿದರು.

ಧ್ವಜಗಳನ್ನು ಹಿಡಿದು ಮೆರವ ಣಿಗೆಯಲ್ಲಿ ಸಾಗಿದರು. ಬಹು ತೇಕರು ಶ್ವೇತವಸ್ತ್ರಗಳನ್ನು ತೊಟ್ಟಿದ್ದರು. ಯುವಪಡೆ ಮೆರವಣಿಗೆಯದ್ದಕ್ಕೂ ನೃತ್ಯ ಮಾಡಿ ಸಂಭ್ರಮಿಸಿದರು. ಕೆಲವರು ಪುಟಾಣಿ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಸಾಗಿದರು. ಮುಸ್ಲಿಂ ಮಹಿಳೆಯರು, ಸಾರ್ವಜನಿಕರು ಮೆರವಣಿಗೆ ಮಾರ್ಗದಲ್ಲಿನ ಕಟ್ಟಡ ಗಳ ಮೇಲೆ ನಿಂತು ಸೊಬಗು ವೀಕ್ಷಿಸಿ ದರು. ಮುಸ್ಲಿಮರು ಪರಸ್ಪರ ಶುಭಾಶಯ ಕೋರಿದರು.

‘ಬ್ರಿಟಿಷರ ವಿರುದ್ಧ ಹೋರಾಡಿ ಕನ್ನಡ ಮಣ್ಣಿಗಾಗಿ ಮಡಿದದವ ಟಿಪ್ಪು...’, ‘ಟಿಪ್ಪು ಮೈಸೂರು ಟೈಗರು...’, ‘ಕನ್ನಡ ಮಣ್ಣಿಗೆ ಹೆಮ್ಮೆ ಟಿಪ್ಪು...’ ಮೊದಲಾದ ಟಿಪ್ಪು ಸುಲ್ತಾನ್‌ ಗುಣಗಾನದ ಗೀತೆಗಳು ಧ್ವನಿವರ್ಧಕದಲ್ಲಿ ಮೊಳಗಿದವು. ಮುಸ್ಲಿಂ ಯುವಕರು ಆ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು. ಚಿಣ್ಣರು ಧ್ವಜಗಳನ್ನು ಹಿಡಿದು ಉತ್ಸಾಹ–ಉಲ್ಲಾಸ ಮೆರೆದರು.

ಆಜಾದ್‌ ಪಾರ್ಕ್‌ ವೃತ್ತ, ಮಾರುಕಟ್ಟೆ ರಸ್ತೆ, ಕೆ.ಎಂ.ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಅಂಡೇ ಛತ್ರಕ್ಕೆ ವಾಪಸಾಗಿ ಸಮಾಪನಗೊಂಡಿತು. ಮೆರವಣಿಗೆಯುದ್ದಕ್ಕೂ ಪೊಲೀಸ್‌ ಸರ್ಪಗಾವಲು, ಡ್ರೋಣ್‌ ‘ಡ್ರೋಣ್‌’ ಕಣ್ಗಾವಲು ಇತ್ತು. ಮೂರೂವರೆ ಗಂಟೆ ಕಾಲ ಮೆರವಣಿಗೆ ನಡೆಯಿತು.

ನಗರದ ಐಜಿ ರಸ್ತೆ, ಎಂ.ಜಿ.ರಸ್ತೆ ಮೊದಲಾದ ಕಡೆಗಳಲ್ಲಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸ ಲಾಗಿತ್ತು. ವಾಹನ ನಿಲುಗಡೆಗೆ (ಪಾರ್ಕಿಂಗ್‌) ನಿರ್ಬಂಧ ವಿಧಿಸಲಾಗಿತ್ತು. ಪ್ರತಿನಿತ್ಯ ವ್ಯಾಪಾರವಹಿವಾಟು, ವಾಹನ ಸಂಚಾರಗಳಿಂದ ಗಿಜಿಗುಡುತ್ತಿದ್ದ ನಗರದ ಹೃದಯಭಾಗದ ಈ ರಸ್ತೆಗಳು ಶನಿವಾರ ಸ್ಥಬ್ಧವಾಗಿದ್ದವು.

ಈದ್‌ ಮಿಲಾದ್‌ ಮೆರವಣಿಗೆ ಮತ್ತು ದತ್ತ ಜಯಂತಿ ಶೋಭಾಯಾತ್ರೆ ಒಂದೇ ದಿನ ಬಂದಿದ್ದರಿಂದ ಜಿಲ್ಲಾಡಳಿತವು ಬೆಳಿಗ್ಗೆ ಈದ್‌ಮಿಲಾದ್‌ ಮೆರವಣಿಗೆ ಹಾಗೂ ಶೋಭಾಯಾತ್ರೆಗೆ ಮಧ್ಯಾಹ್ನ ಅವಕಾಶ ಕಲ್ಪಿಸಿತ್ತು. ಮೆರವಣಿಗೆ ನಿಮಿತ್ತ ಕಟ್ಟೆಚ್ಚರ ವಹಿಸ ಲಾಗಿತ್ತು. ಮೆರವಣಿಗೆಯಲ್ಲಿ 6,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿ ದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಕಡೂರಿನಲ್ಲಿ ಕೃಷಿ ಚಟುವಟಿಕೆ ಚುರುಕು

ಚಿಕ್ಕಮಂಗಳೂರು
ಕಡೂರಿನಲ್ಲಿ ಕೃಷಿ ಚಟುವಟಿಕೆ ಚುರುಕು

22 Apr, 2018
ಸಿರಿಮನೆ ಜಲಪಾತದ ಸೊಬಗು

ಚಿಕ್ಕಮಗಳೂರು
ಸಿರಿಮನೆ ಜಲಪಾತದ ಸೊಬಗು

22 Apr, 2018

ಚಿಕ್ಕಮಗಳೂರು
ನಾಳೆ ಹಲವು ಅಭ್ಯರ್ಥಿಗಳಿಂದ ನಾಮಪತ್ರ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳು ಇದೇ 23ರಂದು ನಾಮಪತ್ರ ಸಲ್ಲಿಸುವರು ಎಂದು ಪಕ್ಷದ ಜಿಲ್ಲಾ ಘಟಕದ ವಕ್ತಾರ ಹೊಲದಗದ್ದೆ...

22 Apr, 2018
ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಚಿಕ್ಕಮಗಳೂರು
ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

22 Apr, 2018

ತರೀಕೆರೆ
ಮುಖಂಡರನ್ನು ಒಗ್ಗೂಡಿಸಲು ಪ್ರಯತ್ನ

ತರೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಗಳ ಜತೆಯಲ್ಲಿ ಮಾತನಾಡಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಸಹಕರಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ...

22 Apr, 2018