ಗುಡಿಬಂಡೆ

ದೈಹಿಕ ದೌರ್ಬಲ್ಯ ಮೀರಿ ನಿಂತ ಸೀನಪ್ಪ

ಪ್ರತಿಭೆ, ಛಲ ಇದ್ದರೆ ದೈಹಿಕ ದುರ್ಬಲತೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅಂಗವಿಕಲರಾಗಿದ್ದರೂ ಹಸನ್ಮುಖಿಯಾಗಿ, ದಿನ ಪತ್ರಿಕೆಗಳ ಮಾರಾಟ ಹಾಗೂ ಪಾನ್ ಬೀಡಾ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಪಟ್ಟಣದ ಜಿ.ಶ್ರೀನಿವಾಸ್ (ಬೀಡಾ ಸೀನಪ್ಪ) ಇದಕ್ಕೆ ಉದಾಹರಣೆ.

ತಾಲ್ಲೂಕು ಕಚೇರಿ ಬಳಿಯ ಸ್ವಂತ ಅಂಗಡಿಯಲ್ಲಿ ದಿನ ಪತ್ರಿಕೆ ಹಾಗೂ ಬೀಡಾ ವ್ಯಾಪಾರ ಮಾಡುತ್ತಿರುವುದು

ಗುಡಿಬಂಡೆ: ಪ್ರತಿಭೆ, ಛಲ ಇದ್ದರೆ ದೈಹಿಕ ದುರ್ಬಲತೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅಂಗವಿಕಲರಾಗಿದ್ದರೂ ಹಸನ್ಮುಖಿಯಾಗಿ, ದಿನ ಪತ್ರಿಕೆಗಳ ಮಾರಾಟ ಹಾಗೂ ಪಾನ್ ಬೀಡಾ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಪಟ್ಟಣದ ಜಿ.ಶ್ರೀನಿವಾಸ್ (ಬೀಡಾ ಸೀನಪ್ಪ) ಇದಕ್ಕೆ ಉದಾಹರಣೆ.

ತಾಲ್ಲೂಕಿನ ಗರುಡಾಚರ್ಲಹಳ್ಳಿ ಗ್ರಾಮದಲ್ಲಿ ಹುಟ್ಟಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ ಇವರು, ಕೃಷಿಯಲ್ಲಿ ಯಾವುದೇ ಲಾಭವಿಲ್ಲದ್ದರಿಂದ ಗುಡಿಬಂಡೆ ಪಟ್ಟಣಕ್ಕೆ ಬಂದು ಸಣ್ಣ ಪುಟ್ಟ ವ್ಯಾಪಾರ ಪ್ರಾರಂಭಿಸಿದರು.

ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಈ ಭಾಗದಲ್ಲಿ ದಿನ ಪತ್ರಿಕೆಗಳನ್ನು ಮಾರಾಟ ಮಾಡುವ ಮೂಲಕ ಪತ್ರಿಕಾ ರಂಗಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ಗೋವಿಂದಪ್ಪ ಮತ್ತು ಸಾಕಮ್ಮ ಅವರ ನಾಲ್ಕನೇ ಮಗ ಇವರು ಮೊದಲು ಚೆನ್ನಾಗಿದ್ದು 7 ವರ್ಷದ ಮಗುವಾಗಿದ್ದಾಗ ರಾಗಿ ಯಂತ್ರಕ್ಕೆ ಸಿಲುಕಿ ಕೈ ಕಾಲುಗಳನ್ನು ಕಳೆದುಕೊಂಡರು.

ಶಾಲಾ ದಿನಗಳಲ್ಲಿ ಇವರಿಗೆ ಕ್ರೀಡೆಯ ಮೇಲೆ ಆಸಕ್ತಿ ಹೆಚ್ಚು. ಆಗಿನಿಂದಲೇ ಶಾಲಾ ಮಟ್ಟದಲ್ಲಿ ಕಬಡ್ಡಿ, ಗುಂಡು ಎಸೆತ, ಓಟದ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದ್ದಿದ್ದಾರೆ.

ಕೆಜಿಎಫ್‌ನ ದೈಹಿಕ ಶಿಕ್ಷಣ ಶಿಕ್ಷಕ ಆರ್.ನಂಜುಂಡ ಅವರ ಪ್ರೇರಣೆ ಪಡೆದು ಕ್ರೀಡೆಯಲ್ಲಿ ಪರಿಣತಿ ಸಾಧಿಸಿದರು. ಕ್ರೀಡೆಯಲ್ಲಿ 1999 ರಲ್ಲಿ ಕೋಲಾರ ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಗುಂಡು ಎಸೆತದಲ್ಲಿ ಪ್ರಥಮ, 2000ರಲ್ಲಿ 100ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 2003ರಲ್ಲಿ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ 100 ಮೀ ಓಟದಲ್ಲಿ ಪ್ರಥಮ, ಕಬಡ್ಡಿ 3ನೇ ಸ್ಥಾನ ಪಡೆದಿದ್ದಾರೆ.

2003ರಲ್ಲಿ ಮೈಸೂರಿನ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 100 ಮೀ ಓಟ ಹಾಗೂ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 2004ರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿಭಾಗ ಮಟ್ಟದ ಕ್ರೀಡಾ ಕೂಟದಲ್ಲಿ ಬರ್ಜಿ ಎಸೆತದಲ್ಲಿ ಪ್ರಥಮ, ಕಬಡ್ಡಿಯಲ್ಲಿ ದ್ವಿತೀಯ, ಗುಂಡು ಎಸೆತ ಮತ್ತು 400 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಯಾರೂ ಪ್ರೋತ್ಸಾಹ ನೀಡದ ಕಾರಣ ಕ್ರೀಡೆಯಲ್ಲಿ ಭಾಗವಹಿಸಲು ಆಗಲಿಲ್ಲ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಆಧಾರಾ ಯೋಜನೆಯಲ್ಲಿ ಅಂಗಡಿಯನ್ನು ನೀಡಿದ್ದು ಅದರಲ್ಲಿ ಬೀಡಾ ವ್ಯಾಪಾರ ಮತ್ತು ದಿನ ಪತ್ರಿಕೆಗಳ ಮಾರಾಟ ಮಾಡುವ ಮೂಲಕ ತಮ್ಮ ಕುಟುಂಬ ನಿರ್ವಹಣೆ ಮಾಡು
ತ್ತಿದ್ದಾರೆ. ಅಂಗವಿಕಲರ ವೇತನ ಸಹ ಪಡೆಯುತ್ತಿದ್ದಾರೆ. ತನ್ನ ಇಬ್ಬರು ಗಂಡು ಮಕ್ಕಳನ್ನು ಉನ್ನತ ಶಿಕ್ಷಣ ಮಾಡಿಸುತ್ತಿದ್ದು ಅಂಗವಿಕಲತೆಯ ನಡುವೆ ಸ್ವಾವಲಂಬಿ ಜೀವನ ನಡೆಸುತ್ತಿರುವ ಹೆಮ್ಮೆಯ ಬೀಡ .

 

Comments
ಈ ವಿಭಾಗದಿಂದ ಇನ್ನಷ್ಟು
ಕಸದ ರಾಶಿಗೆ ಕಂದಮ್ಮಗಳ ‘ಕಸಿವಿಸಿ’

ಚಿಕ್ಕಬಳ್ಳಾಪುರ
ಕಸದ ರಾಶಿಗೆ ಕಂದಮ್ಮಗಳ ‘ಕಸಿವಿಸಿ’

15 Jan, 2018
175 ಕ್ಷೇತ್ರಗಳಲ್ಲಿ ರಾಜ್ಯ ರೈತ ಸಂಘ ಸ್ಪರ್ಧೆ

ಗುಡಿಬಂಡೆ
175 ಕ್ಷೇತ್ರಗಳಲ್ಲಿ ರಾಜ್ಯ ರೈತ ಸಂಘ ಸ್ಪರ್ಧೆ

15 Jan, 2018
ವಿವೇಕ, ವಿವೇಚನೆ ಬೆಳೆಸಿಕೊಂಡರೆ ಯಶಸ್ಸು

ಶಿಡ್ಲಘಟ್ಟ
ವಿವೇಕ, ವಿವೇಚನೆ ಬೆಳೆಸಿಕೊಂಡರೆ ಯಶಸ್ಸು

15 Jan, 2018
ಒಗ್ಗಟ್ಟಿನ ಬದುಕೇ ನಿಜವಾದ ಧರ್ಮ

ಶಿಡ್ಲಘಟ್ಟ
ಒಗ್ಗಟ್ಟಿನ ಬದುಕೇ ನಿಜವಾದ ಧರ್ಮ

15 Jan, 2018
ಕುಕ್ಕುಟ ಉದ್ಯಮಕ್ಕೆ ಹಕ್ಕಿ ಜ್ವರದ ಬಿಸಿ

ಚಿಕ್ಕಬಳ್ಳಾಪುರ
ಕುಕ್ಕುಟ ಉದ್ಯಮಕ್ಕೆ ಹಕ್ಕಿ ಜ್ವರದ ಬಿಸಿ

14 Jan, 2018