ಔರಾದ್

ಅಂಗವೈಕಲ್ಯ ಮೆಟ್ಟಿ ನಿಂತ ಸಹೋದರರು

ಕನಕ ಗಲ್ಲಿಯ ಸಹೋದರರಿಬ್ಬರು ಅಂಗವಿಕಲತೆ ಮತ್ತು ಬಡತನವನ್ನು ಮೆಟ್ಟಿ ನಿಂತು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಔರಾದ್ ಪಟ್ಟಣದ ಕನಕ ಗಲ್ಲಿಯ ಅಂಗವಿಕಲ ಸಹೋದರರ ಜತೆ ತಾಯಿ ತೇಜಾಬಾಯಿ

ಔರಾದ್: ಇಲ್ಲಿಯ ಕನಕ ಗಲ್ಲಿಯ ಸಹೋದರರಿಬ್ಬರು ಅಂಗವಿಕಲತೆ ಮತ್ತು ಬಡತನವನ್ನು ಮೆಟ್ಟಿ ನಿಂತು ಸಮಾಜಕ್ಕೆ ಮಾದರಿಯಾಗಿದ್ದಾರೆ. ಕೂಲಿ ಕಾರ್ಮಿಕ ಶಾಮರಾವ ರಾವಣಗಾವೆ ಅವರ ಪುತ್ರರಿಬ್ಬರು ಹುಟ್ಟು ಅಂಗವಿಕಲರು. ಆದರೆ ಅವರು ಕುಟುಂಬಕ್ಕಾಗಲಿ, ಸಮಾಜಕ್ಕಾಗಲಿ ಭಾರವಾಗದೆ ಜೀವನ ಸಾಗಿಸುತ್ತಿದ್ದಾರೆ.

ಅಣ್ಣ ಪಂಢರಿ ರಾವಣಗಾವೆ ಜನಿಸಿದಾಗಿನಿಂದ ಎರಡೂ ಕಾಲುಗಳಲ್ಲಿ ಶಕ್ತಿ ಕಳೆದುಕೊಂಡವರು. ತಮ್ಮ ಮಾರುತಿ ರಾವಣಗಾವೆ ಹುಟ್ಟುತ್ತಲೇ ಎರಡೂ ಕಣ್ಣಿನಿಂದ ಕುರುಡರು. ಆದರೂ ಪೋಷಕರು ಬಡತನದ ನಡುವೆ ಇಬ್ಬರಿಗೂ ಓದಿಸಿದ್ದಾರೆ. ಪಂಢರಿ 8ನೇ ತರಗತಿ ವರೆಗೆ ಕಲಿತು ಈಗ ತ್ರಿಚಕ್ರ ಸೈಕಲ್ ಮೇಲೆ ಐಸ್‌ಕ್ರಿಮ್ ಮತ್ತು ಬಿಸ್ಕೆಟ್‌ ಮಾರಿ ತನ್ನ ಖರ್ಚು ತಾವೇ ನೋಡಿಕೊಳ್ಳುತ್ತಾರೆ. ‘ನಾನು ಮದುವೆ ಮಡಿಕೊಂಡು ಬೇರೆಯವರಿಗೆ ಕಷ್ಟ ಕೊಡಲು ಬಯಸುವುದಿಲ್ಲ. ಹೀಗಾಗಿ ತಂದೆ–ತಾಯಿ ಜೊತೆ ಬದುಕುವುದರಲ್ಲೇ ನನಗೆ ಸಂತೋಷವಿದೆ’ ಎನ್ನುತ್ತಾರೆ ಪಂಢರಿ.

ಆದರೆ ತಮ್ಮ ಮಾರುತಿ ಹುಟ್ಟು ಕುರುಡನಾದರೂ ಪಿಯುಸಿ ವರೆಗೆ ಓದಿದ್ದಾರೆ. ಮಹಾರಾಷ್ಟ್ರದಲ್ಲಿ ಸಂಗೀತ ವಿಶಾರದ ಪರೀಕ್ಷೆ ಪಾಸು ಮಾಡಿದ್ದಾರೆ. ಹಾಡುವುದು, ತಬಲಾ ಮತ್ತು ಹಾರ್ಮೋನಿಯಂ ನುಡಿಸುವುದರಲ್ಲಿ ಪರಿಣತಿ ಪಡೆದಿದ್ದಾರೆ. ಕಸ್ತೂರಬಾ ಶಾಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ಇವರ ಮದುವೆ ಆಗಿದ್ದು, ಎರಡು ಆರೋಗ್ಯವಂತ ಮಕ್ಕಳು ಇದ್ದಾರೆ. ಸರ್ಕಾರ ಕೊಡುವ ₹ 1,200 ಮಾಸಾಶನ ಹಾಗೂ ಶಿಕ್ಷಕ ವೃತ್ತಿಯಿಂದ ಬರುವ ₹ 4,000 ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ. ‘ಕುರುಡ ಎಂಬ ಕೀಳರಿಮೆ ನನಗಿಲ್ಲ. ಜನ ನನ್ನ ಮನೆ ತನಕ ಬಂದು ಸಂಗೀತ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಿ ಗೌರವ ಕೊಡುತ್ತಾರೆ. ಇದೇ ನನ್ನ ಬದುಕಿಗೆ ಪ್ರೇರಣೆ ಆಗುತ್ತಿದೆ’ ಎಂದು ಮಾರುತಿ ರಾವಣಗಾವೆ ಹೇಳುತ್ತಾರೆ.

‘ನನಗೆ ಹುಟ್ಟಿದ ನಾಲ್ಕು ಮಕ್ಕಳ ಪೈಕಿ ಮಾರುತಿ ಮತ್ತು ಪಂಢರಿ ಇಬ್ಬರೂ ಹುಟ್ಟು ಅಂಗವಿಕಲರು. ಇಂತಹ ಮಕ್ಕಳು ಇಟ್ಟುಕೊಂಡು ಏನು ಮಾಡುವುದು ಎಂದು ಜನ ಆಡಬಾರದ ಮಾತು ಆಡಿದರು. ಆದರೆ, ಅಂತಹದ್ದಕ್ಕೆ ಕಿವಿಗೊಡದೆ ಹಗಲಿರುಳು ಕಷ್ಟಪಟ್ಟು ಮಕ್ಕಳನ್ನು ದೊಡ್ಡವರಾಗಿ ಮಾಡಿದ್ದೇವೆ. ಈಗ ಅವರು ಕಷ್ಟಪಟ್ಟು ದುಡಿಯುತ್ತಿದ್ದಾರೆ. ಸರ್ಕಾರ ಒಂದಿಷ್ಟು ಅವರ ನೆರವಿಗೆ ಬಂದರೆ ನಮ್ಮಂತಹ ಹೆತ್ತ ಕರುಳಿಗೂ ಆನಂದವಾಗುತ್ತದೆ’ ಎಂದು ತಾಯಿ ತೇಜಾಬಾಯಿ ಕಷ್ಟದ ದಿನಗಳು ನೆನಪಿಸಿ ಕಣ್ಣೀರು ಹಾಕುತ್ತಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಬಸ್‌ ಸೌಲಭ್ಯ ಇಲ್ಲದೆ ಪರದಾಟ

ಭಾಲ್ಕಿ
ಬಸ್‌ ಸೌಲಭ್ಯ ಇಲ್ಲದೆ ಪರದಾಟ

16 Jan, 2018

ಬೀದರ್
ಕಾಯಕ ಪ್ರೀತಿ ಜಾಗೃತಗೊಳಿಸಿದ ಸಿದ್ಧರಾಮೇಶ್ವರ

‘ಇಷ್ಟಲಿಂಗ ಕಟ್ಟಿಕೊಂಡರೆ ಸಮಾಜದಲ್ಲಿ ದೊಡ್ಡವರಾಗಲು ಸಾಧ್ಯವಿಲ್ಲ. ಶರಣರ ತತ್ವ ಹಾಗೂ ವಿಚಾರಗಳನ್ನು ಅನುಷ್ಠಾನ ಗೊಳಿಸಿದವರು ಮಾತ್ರ ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ

16 Jan, 2018
ಒಂದು ಕಾಲೇಜಿಗೆ ಪ್ರವೇಶ, ಮೂರು ಕಾಲೇಜಿಗೆ ಸುತ್ತಾಟ

ಬೀದರ್‌
ಒಂದು ಕಾಲೇಜಿಗೆ ಪ್ರವೇಶ, ಮೂರು ಕಾಲೇಜಿಗೆ ಸುತ್ತಾಟ

15 Jan, 2018
ರಾಜಕೀಯ ಅಧಿಕಾರ ಪಡೆಯಲು ಒಗ್ಗಟ್ಟಾಗಿ

ಬೀದರ್‌
ರಾಜಕೀಯ ಅಧಿಕಾರ ಪಡೆಯಲು ಒಗ್ಗಟ್ಟಾಗಿ

15 Jan, 2018
ಊರಿನವರಿಗೆ ಮುಖ ತೋರಿಸಲು ಆಗುತ್ತಿಲ್ಲ

ಬೀದರ್‌
ಊರಿನವರಿಗೆ ಮುಖ ತೋರಿಸಲು ಆಗುತ್ತಿಲ್ಲ

14 Jan, 2018