ಕೋಸ್ಟರಿಕಾದಲ್ಲಿ ಸ್ಕೂಬಾ ಡೈವಿಂಗ್‌

ಕೋಸ್ಟರಿಕಾದಲ್ಲಿ ಮಂಗಳೂರು ಮೂಲದ ಮಹಿಳೆ ಸಾವು

ಮಂಗಳೂರಿನ ರೋಹಿಣಾ ಭಂಡಾರಿ (49) ಎಂಬವರು ಅಮೆರಿಕ ಕೋಸ್ಟರಿಕಾದಲ್ಲಿ ಸ್ಕೂಬಾ ಡೈವಿಂಗ್‌ ಮಾಡುವಾಗ ಟೈಗರ್‌ ಶಾರ್ಕ್‌ ಮೀನಿನ ದಾಳಿಗೆ ಬಲಿಯಾಗಿದ್ದಾರೆ.

ಕೋಸ್ಟರಿಕಾದಲ್ಲಿ ಮಂಗಳೂರು ಮೂಲದ ಮಹಿಳೆ ಸಾವು

ಮಂಗಳೂರು: ಮಂಗಳೂರಿನ ರೋಹಿಣಾ ಭಂಡಾರಿ (49) ಎಂಬವರು ಅಮೆರಿಕ ಕೋಸ್ಟರಿಕಾದಲ್ಲಿ ಸ್ಕೂಬಾ ಡೈವಿಂಗ್‌ ಮಾಡುವಾಗ ಟೈಗರ್‌ ಶಾರ್ಕ್‌ ಮೀನಿನ ದಾಳಿಗೆ ಬಲಿಯಾಗಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಸೇಲ್ಸ್ ಮತ್ತು ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವರು ನ.30ರಂದು ಸ್ನೇಹಿತರೊಡನೆ ಕೋಸ್ಟರಿಕಾದಲ್ಲಿ ಸ್ಕೂಬಾ ಡೈವಿಂಗ್‌ ಮಾಡುತ್ತಿದ್ದಾಗ ಅವರ ಕಾಲುಗಳನ್ನು ಟೈಗರ್‌ ಶಾರ್ಕ್‌ ಕಚ್ಚಿದೆ. ತಮ್ಮ ಮಾರ್ಗದರ್ಶನಕರೊಂದಿಗೆ ಕೋಕೋಸ್‌ ದ್ವೀಪದಲ್ಲಿ ಡೈವ್‌ ಹೊಡೆದು ಮೇಲೆ ಬರುವ ವೇಳೆಗೆ ಮೀನು ಅವರ ಕಾಲುಗಳನ್ನು ಕಚ್ಚಿದೆ ಎಂದು ಹೇಳಲಾಗುತ್ತಿದೆ.

ತಕ್ಷಣವೇ ಅವರನ್ನು ವೈದ್ಯರಲ್ಲಿಗೆ ಕೊಂಡೊಯ್ದರೂ ಚಿಕಿತ್ಸೆ ಫಲಿಸಲಿಲ್ಲ. ಡೈವಿಂಗ್‌ ಮಾರ್ಗದರ್ಶಕ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ನ್ಯೂಯಾರ್ಕ್‌ ಅಧಿಕಾರಿಗಳು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರೋಹಿಣಾ ಭಂಡಾರಿ ಅವರು ಮಂಗಳೂರಿನವರಾಗಿದ್ದರೂ ಶಿಕ್ಷಣವನ್ನು ಜಾರ್ಜ್‌ ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲೇ ಪಡೆದಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಬೆಂಗಳೂರು ಉಳಿವಿಗಾಗಿ ’ವಿರಳ ಸಂಚಾರ ದಿನ’ ಅಭಿಯಾನ

ಪ್ರತಿ ತಿಂಗಳ ಎರಡನೇ ಭಾನುವಾರ ಸ್ವಂತ ವಾಹನಗಳಿಗೆ ನಿರ್ಬಂಧ
ಬೆಂಗಳೂರು ಉಳಿವಿಗಾಗಿ ’ವಿರಳ ಸಂಚಾರ ದಿನ’ ಅಭಿಯಾನ

13 Dec, 2017
ವಿದ್ಯುತ್ ಪ್ರವಹಿಸಿ ಬಾಲಕ ದುರ್ಮರಣ

ತುಂಡಾಗಿದ್ದ ತಂತಿ
ವಿದ್ಯುತ್ ಪ್ರವಹಿಸಿ ಬಾಲಕ ದುರ್ಮರಣ

13 Dec, 2017
17 ಹಳ್ಳಿಗಳಿಗೆ ಬರುವ ತಿಂಗಳಲ್ಲೇ ಕಾವೇರಿ ನೀರು

ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌
17 ಹಳ್ಳಿಗಳಿಗೆ ಬರುವ ತಿಂಗಳಲ್ಲೇ ಕಾವೇರಿ ನೀರು

13 Dec, 2017

₹17 ಸಾವಿರ ಲಂಚ
ಲಂಚ: ಸಹಾಯಕ ನಿರ್ದೇಶಕ ಎಸಿಬಿಗೆ ಬಲೆಗೆ

ಹೆಬ್ಬಾಳದಲ್ಲಿರುವ ರೆಸ್ಟೋರೆಂಟ್‌ವೊಂದರ ಮಾಲೀಕರು ನೀರಿನ ಬಾಟಲಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಈ ಬಗ್ಗೆ, ರೆಸ್ಟೋರೆಂಟ್‌ಗೆ ಇಲಾಖೆ ನೋಟಿಸ್ ನೀಡಿತ್ತು. ನಂತರ, ಕ್ರಮ ಕೈಗೊಳ್ಳದಿರಲು...

13 Dec, 2017
ಸ್ವಾಧೀನಾನುಭವ ಪತ್ರ: ಪಾಲಿಕೆ ನಿಯಮ ಪಾಲನೆ

ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಸ್ಪಷ್ಟನೆ
ಸ್ವಾಧೀನಾನುಭವ ಪತ್ರ: ಪಾಲಿಕೆ ನಿಯಮ ಪಾಲನೆ

13 Dec, 2017