ಹೊನಲು ಬೆಳಕಿನ ಆ್ಯಷಸ್‌ ಟೆಸ್ಟ್‌

ಆಸ್ಟ್ರೇಲಿಯಾ ಉತ್ತಮ ಮೊತ್ತ

ತಾಳ್ಮೆಯ ಬ್ಯಾಟಿಂಗ್ ಮಾಡಿದ ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಶಾನ್‌ ಮಾರ್ಷ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಅವರ ಅಮೋಘ ಆಟದ ನೆರವಿನಿಂದ ಆ್ಯಷಸ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ  ಆಸ್ಟ್ರೇಲಿಯಾ ಉತ್ತಮ ಮೊತ್ತ ಕಲೆ ಹಾಕಿದೆ.

ಶತಕ ಗಳಿಸಿದ ಆಸ್ಟ್ರೇಲಿಯಾದ ಶಾನ್ ಮಾರ್ಷ್‌ ಬ್ಯಾಟಿಂಗ್ ವೈಖರಿ ಎಎಫ್‌ಪಿ ಚಿತ್ರ

ಅಡಿಲೇಡ್‌, ಆಸ್ಟ್ರೇಲಿಯಾ: ತಾಳ್ಮೆಯ ಬ್ಯಾಟಿಂಗ್ ಮಾಡಿದ ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಶಾನ್‌ ಮಾರ್ಷ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಅವರ ಅಮೋಘ ಆಟದ ನೆರವಿನಿಂದ ಆ್ಯಷಸ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ  ಆಸ್ಟ್ರೇಲಿಯಾ ಉತ್ತಮ ಮೊತ್ತ ಕಲೆ ಹಾಕಿದೆ.

ಆ್ಯಷಸ್‌ ಸರಣಿಯ ಚೊಚ್ಚಲ ಹಗಲು ರಾತ್ರಿ ಪಂದ್ಯದ ಮೊದಲ ದಿನವಾದ ಶನಿವಾರ 4 ವಿಕೆಟ್‌ಗಳಿಗೆ 209 ರನ್ ಗಳಿಸಿದ್ದ ಆತಿಥೇಯರು ಭಾನುವಾರ ಎರಡು ವಿಕೆಟ್‌ ಕಳೆದುಕೊಂಡು 442 ರನ್‌ ಗಳಿಸಿದ್ದಾಗ ಇನಿಂಗ್ಸ್ ಡಿಕ್ಲೇರ್‌ ಮಾಡಿಕೊಂಡಿತು. ಮಳೆಯಿಂದಾಗಿ ದಿನದಾಟ ಬೇಗನೇ ಮುಕ್ತಾಯಗೊಂಡಾಗ ಇಂಗ್ಲೆಂಡ್‌ ಒಂದು ವಿಕೆಟ್ ಕಳೆದುಕೊಂಡು 29 ರನ್‌ ಗಳಿಸಿದೆ. ತಂಡ ಇನ್ನೂ 413 ರನ್‌ಗಳಿಂದ ಹಿಂದೆ ಉಳಿದಿದೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌ (ಶನಿವಾರದ ಅಂತ್ಯಕ್ಕೆ 81 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 209): 149 ಓವರ್‌ಗಳಲ್ಲಿ 8ಕ್ಕೆ 442 (ಶಾನ್‌ ಮಾರ್ಷ್‌ 126, ಟಿಮ್ ಪೈನೆ 57, ಪ್ಯಾಟ್‌ ಕಮಿನ್ಸ್‌ 44; ಸ್ಟುವರ್ಟ್‌ ಬ್ರಾಡ್‌ 72ಕ್ಕೆ2, ಕ್ರೇಗ್ ಓವರ್ಟನ್‌ 105ಕ್ಕೆ3);

ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 9.1 ಓವರ್‌ಗಳಲ್ಲಿ 1 ವಿಕೆಟ್‌ಗೆ 29 (ಮಾರ್ಕ್ ಸ್ಟೋನ್‌ ಮ್ಯಾನ್‌ 18; ಮಿಚೆಲ್‌ ಸ್ಟಾರ್ಕ್‌ 13ಕ್ಕೆ1).

Comments
ಈ ವಿಭಾಗದಿಂದ ಇನ್ನಷ್ಟು
ಹೆಣ್ಣು ಮಗುವಿನ ತಂದೆಯಾದ ಚೇತೇಶ್ವರ್‌ ಪೂಜಾರ

ಖುಷಿಯ ಕ್ಷಣ...
ಹೆಣ್ಣು ಮಗುವಿನ ತಂದೆಯಾದ ಚೇತೇಶ್ವರ್‌ ಪೂಜಾರ

23 Feb, 2018
ಮಿಂಚಿನಂತೆ ಓಡಿ ರನ್‌ ಗಳಿಸಲು ಮನೀಷ್‌ಗೆ ಬಿಸಿ ಮುಟ್ಟಿಸಿದ ದೋನಿ: ವಿಡಿಯೊ ವೈರಲ್

ಟ್ವೆಂಟಿ–20 ಕ್ರಿಕೆಟ್‌
ಮಿಂಚಿನಂತೆ ಓಡಿ ರನ್‌ ಗಳಿಸಲು ಮನೀಷ್‌ಗೆ ಬಿಸಿ ಮುಟ್ಟಿಸಿದ ದೋನಿ: ವಿಡಿಯೊ ವೈರಲ್

23 Feb, 2018
ಹಂಗೇರಿಗೆ ಮೊದಲ ಚಿನ್ನದ ಸಂಭ್ರಮ

ಕ್ರೀಡೆ
ಹಂಗೇರಿಗೆ ಮೊದಲ ಚಿನ್ನದ ಸಂಭ್ರಮ

23 Feb, 2018
ಭಾರತಕ್ಕೆ ಪುಟಿದೇಳುವ ಭರವಸೆ

ಬೆಂಗಳೂರು
ಭಾರತಕ್ಕೆ ಪುಟಿದೇಳುವ ಭರವಸೆ

23 Feb, 2018

ಬೆಂಗಳೂರು
ರಾಹುಲ್–ಬಿಎಫ್‌ಸಿ ಒಪ್ಪಂದ ವಿಸ್ತರಣೆ

ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ರಾಹುಲ್ ಬೆಕೆ ಅವರ ಒಪ್ಪಂದವನ್ನು 2021ರವರೆಗೆ ವಿಸ್ತರಿಸಿದೆ ಎಂದು ತಂಡದ ಪ್ರಕಟಣೆ ತಿಳಿಸಿದೆ.

23 Feb, 2018