ಪಾಂಡವಪುರ

ಪ್ರವಾಸಿ ತಾಣ ಕೆರೆತೊಣ್ಣೂರು ಅಭಿವೃದ್ಧಿಗೆ ಕ್ರಮ

ಪ್ರವಾಸಿ ತಾಣ ಕೆರೆತೊಣ್ಣೂರಿನ ಅಭಿವೃದ್ಧಿಗೆ ಕ್ರಮವಹಿಸಿದ್ದು, ಡಿ.7ರಂದು ₹ 8 ಕೋಟಿ ಅಂದಾಜು ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು

ಪಾಂಡವಪುರ: ತಾಲ್ಲೂಕಿನ ಪ್ರವಾಸಿ ತಾಣ ಕೆರೆತೊಣ್ಣೂರಿನ ಅಭಿವೃದ್ಧಿಗೆ ಕ್ರಮವಹಿಸಿದ್ದು, ಡಿ.7ರಂದು ₹ 8 ಕೋಟಿ ಅಂದಾಜು ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರೀಯ ರಸ್ತೆ ನಿಧಿಗೆ ಮನವಿ ಪತ್ರ ಸಲ್ಲಿಸಿ ₹ 8 ಕೋಟಿ ಬಿಡುಗಡೆಯಾಗಿದೆ. ಸಂಸದ ಸಿ.ಎಸ್.ಪುಟ್ಟರಾಜು ಇದು ತಮ್ಮ ಪ್ರಯತ್ನ ಎಂದು ಹೇಳಿಕೊಳ್ಳುವುದು ವಿಷಾದನೀಯ ಎಂದರು.

ಪ್ರವಾಸಿ ತಾಣ ಕೆರೆತೊಣ್ಣೂರಿನ ಸೌಂದರ್ಯದ ಅಭಿವೃದ್ದಿಗೂ ಕ್ರಮವಹಿಸಲಾಗಿದೆ ಎಂದರು. ಸಂಸದ ಸಿ.ಎಸ್.ಪುಟ್ಟರಾಜು ಅವರು ಕೆರೆತೊಣ್ಣೂರು ಗ್ರಾಮವನ್ನು ಆದರ್ಶ ಗ್ರಾಮವೆಂದು ಘೋಷಿಸಿ ಅಭಿವೃದ್ದಿಗೆ ಚಾಲನೆ ನೀಡಿ ಸುಮಾರು 3 ವರ್ಷಗಳೇ ಕಳೆದರೂ ಒಂದೇ ಒಂದು ಅಭಿವೃದ್ದಿ ಕಂಡಿಲ್ಲ ಎಂದು ಟೀಕಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಕೆರಗೋಡು
ತಂದೆಯ ಹೋರಾಟವೇ ಪ್ರೇರಣೆ: ದರ್ಶನ್

‘ರೈತರ ಬದುಕು ಸುಧಾರಣೆಗಾಗಿ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ; ಆಶೀರ್ವದಿಸಿ’ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸ್ವರಾಜ್ ಇಂಡಿಯಾ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ...

24 Apr, 2018
ಹಸಿರು ಟವಲ್‌ ಹಾಕಿದವರೆಲ್ಲ ರೈತ ನಾಯಕರಲ್ಲ

ಪಾಂಡವಪುರ
ಹಸಿರು ಟವಲ್‌ ಹಾಕಿದವರೆಲ್ಲ ರೈತ ನಾಯಕರಲ್ಲ

24 Apr, 2018

ಮಂಡ್ಯ
33 ಅಭ್ಯರ್ಥಿಗಳಿಂದ 50 ನಾಮಪತ್ರ ಸಲ್ಲಿಕೆ

ಮಂಡ್ಯ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ 33 ಅಭ್ಯರ್ಥಿಗಳು 50 ನಾಮಪತ್ರ ಸಲ್ಲಿಸಿದರು.

24 Apr, 2018

ಮಳವಳ್ಳಿ
ಸುಸಂಸ್ಕೃತ ಸಮಾಜ ನಿರ್ಮಾಣಕ್ಕೂ ಶಿಕ್ಷಣ ಬಳಸಿ

ಶಿಕ್ಷಣವನ್ನು ಜ್ಞಾನ ಸಂಪಾದನೆ ಜತೆಗೆ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೂ ಬಳಸಬೇಕು ಎಂದು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲ ಎಂ.ವಿ.ಕೃಷ್ಣ ತಿಳಿಸಿದರು.

23 Apr, 2018

ಶ್ರೀರಂಗಪಟ್ಟಣ
ಇತಿಹಾಸದ ಕುರುಹುಗಳ ದುಸ್ಥಿತಿಗೆ ಮರುಕ

ಶ್ರೀರಂಗಪಟ್ಟಣ ಹಾಗೂ ಆಸುಪಾಸಿನಲ್ಲಿ ಭಾನುವಾರ ಸ್ಮಾರಕಗಳ ಜತೆ ಮೌನ ಮಾತುಕತೆ ನಡೆಯಿತು.

23 Apr, 2018