ರಾಯಚೂರು

ಸರ್ಕಾರದಿಂದ ಮೇದಾರ ಕೇತಯ್ಯ ದಿನಾಚರಣೆ

‘ಕಾಯಕನಿಧಿ ಮೇದಾರ ಕೇತಯ್ಯ ಅವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು’

ರಾಯಚೂರು:‘ಕಾಯಕನಿಧಿ ಮೇದಾರ ಕೇತಯ್ಯ ಅವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಭರವಸೆ ನೀಡಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಮೇದಾರ ಸಂಘ, ತಾಲ್ಲೂಕು ಘಟಕ ಭಾನುವಾರ ಹಮ್ಮಿಕೊಂಡಿದ್ದ ಕಾಯಕನಿಧಿ ಮೇದಾರ ಕೇತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ಸಾಮಾಜಿಕ ನ್ಯಾಯ ಬಹಳ ಮುಖ್ಯವಾದುದು. ಎಲ್ಲ ಜಾತಿಯವರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಮುಖ್ಯಮಂತ್ರಿಯವರು ಜಯಂತಿಗಳನ್ನು ಸರ್ಕಾರದಿಂದ ಆಚರಣೆ ಮಾಡಲು ಅವಕಾಶ ನೀಡಿದ್ದಾರೆ. ಆದ್ದರಿಂದ, ಕೇತಯ್ಯ ಅವರ ಜಯಂತಿ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಸರ್ಕಾರದಿಂದ ಆಚರಣೆ ಮಾಡಲು ಪ್ರಯತ್ನ ಮಾಡ ಲಾಗುವುದು ಎಂದರು.

ಬಸವಣ್ಣನವರ ತತ್ವಗಳ ಆಧಾರದ ಮೇಲೆ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರು ಸರ್ವರಿಗೆ ಸಮಪಾಲು– ಸಮಬಾಳು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ತಿಳಿಸಿದರು.

ಸಂಸದ ಬಿ.ವಿ.ನಾಯಕ ಮಾತ ನಾಡಿ, ಸರ್ಕಾರ ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಹೆಚ್ಚಿನ ಅನುದಾನವೂ ಒದಸಿದೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಮೇದಾರ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಸಣ್ಣ ಸಮಾಜಗಳು ಸಂಘಟಿತರಾದಾಗ ಸರ್ಕಾರಗಳು ಜನರ ಬಳಿಗೆ ಬಂದು ಕೆಲಸ ಮಾಡುತ್ತವೆ ಎಂದು ತಿಳಿಸಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಸ್ಮಿತಾ ಮಾತನಾಡಿ, ಜಾತಿ ಹಾಗೂ ಧರ್ಮಗಳು ಸಮಾಜದಲ್ಲಿನ ವ್ಯವಸ್ಥೆಗಳಾಗಿದ್ದು, ಜ್ಞಾನ ಸಂಪಾದನೆ ಮಾಡುವ ಮೂಲಕ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.

ದೇವದುರ್ಗದ ಅರವಿನ ಮನೆಯ ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ. ಪಂ. ಸದಸ್ಯ ಎನ್.ಕೇಶವರೆಡ್ಡಿ, ಸಾಹಿತಿ ವೀರ ಹನುಮಾನ್‌, ನಗರಸಭೆ ಸದಸ್ಯ ಶಾಲಂ, ರವೀಂದ್ರ ಜಲ್ದಾರ್‌, ಜಯವಂತರಾವ್‌ ಪತಂಗೆ, ಮೇದಾರ ಸಮಾಜದ ಮುಖಂಡರಾದ ಎಂ.ಲಕ್ಷ್ಮಣ್, ಗೋವಿಂದ, ಶಂಕರ, ಮಹಾದೇವ ಇದ್ದರು.

ಮೆರವಣಿಗೆ
ಕಾಯಕನಿಧಿ ಮೇದಾರ ಕೇತಯ್ಯ ಅವರ ಭಾವಚಿತ್ರ ಮೆರವಣಿಗೆ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ನಗರದ ವಿವಿಧ ರಸ್ತೆಗಳ ಮೂಲಕ ರಂಗಮಂದಿರದವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಕಲಾ ತಂಡಗಳು ಹಾಗೂ ಕುಂಭ–ಕಳಸ ಹೊತ್ತ ಮಹಿಳೆಯರು ಮೆರಗು ತಂದರು.

* * 

ಸಮಾಜದವರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸರ್ಕಾರ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು.
ಎನ್‌.ಎಸ್.ಬೋಸರಾಜು ವಿಧಾನ ಪರಿಷತ್‌ ಸದಸ್ಯ

Comments
ಈ ವಿಭಾಗದಿಂದ ಇನ್ನಷ್ಟು
ಮಾದಿಗರಿಗೆ ತಪ್ಪಿದ ಕೈ ಟಿಕೇಟ್; ಪ್ರತಿಭಟನೆ

ಮಸ್ಕಿ
ಮಾದಿಗರಿಗೆ ತಪ್ಪಿದ ಕೈ ಟಿಕೇಟ್; ಪ್ರತಿಭಟನೆ

18 Apr, 2018

ಜಾಲಹಳ್ಳಿ
‘ಉತ್ತಮ ಸಮಾಜ ನಿರ್ಮಾಣಕ್ಕೆ ಮತದಾನ ಅಗತ್ಯ’

ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಬೇಕು ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.

18 Apr, 2018

ರಾಯಚೂರು
ಪ್ರಮುಖ ಪಕ್ಷಗಳಿಗೆ ಸವಾಲಾದ ಮಹಿಳಾ ನಾಯಕಿಯರು

ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭೆ ಕ್ಷೇತ್ರ ಹಾಗೂ ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳ ವಿರುದ್ಧ ಸಿಡಿದೆದ್ದಿರುವ ಇಬ್ಬರು ಮಹಿಳೆಯರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ...

18 Apr, 2018

ಸಿಂಧನೂರು
ಅತ್ಯಾಚಾರ ನಿಯಂತ್ರಿಸಲು ದಿಟ್ಟ ಕ್ರಮಕ್ಕೆ ಆಗ್ರಹ

ಕಾಶ್ಮೀರ, ಉತ್ತರಪ್ರದೇಶ, ಗುಜರಾತ್ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಸಂಜೆ ಮಹಿಳೆಯರು, ಯುವಕರು ಮತ್ತು...

18 Apr, 2018

ಕವಿತಾಳ
ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಕಾಶ್ಮೀರದಲ್ಲಿ ಬಾಲಕಿ ಮೇಲೆ ಮತ್ತು ಉತ್ತರಪ್ರದೇಶ ಉನ್ನಾವದಲ್ಲಿ ನಡೆದ ಅತ್ಯಾಚಾರ ಖಂಡಿಸಿ ಎಸ್ಎಫ್ಐ ಮತ್ತು ಡಿವೈಎಫ್ಐ ಪದಾಧಿಕಾರಿಗಳು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು.

17 Apr, 2018