ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಚಾರ್ಯರ ಅವಹೇಳನ ಸಲ್ಲದು: ಯತ್ನಾಳ

Last Updated 4 ಡಿಸೆಂಬರ್ 2017, 5:40 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ಪಂಚಪೀಠಗಳ ಪಂಚಾಚಾರ್ಯರು ಸೇರಿದಂತೆ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಚಾರ್ಯರು ಹಿಂದೂ ಧರ್ಮದ ಆಧಾರ ಸ್ತಂಭರೆನಿಸಿದ್ದು, ಯಾವುದೇ ಕಾರಣಕ್ಕೂ ಇವರ ಸ್ಥಾನಕ್ಕೆ ಅಪಚಾರ, ಅಪಮಾನ, ಅಗೌರವ ಸಲ್ಲದು ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪಟ್ಟಣದ ಕಲ್ಮೇಶ್ವರ ದೇವಸ್ಥಾನದಲ್ಲಿ ನಡೆದ ದೇವರ ಹಿಪ್ಪರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪಂಚಮಸಾಲಿ ಸಮುದಾಯದ ಸಹಯೋಗದಲ್ಲಿ ನಡೆದ ವೀರಮಾತೆ ಕಿತ್ತೂರ ಚನ್ನಮ್ಮಳ 239ನೇ ಜಯಂತ್ಯುತ್ಸವ ಹಾಗೂ ವಿಜಯೋತ್ಸವ ನಿಮಿತ್ತ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪಂಚಮಸಾಲಿ ಗುರುಗಳು ಸಮಾಜವನ್ನು ತಿದ್ದಿ, ಮುನ್ನಡೆಸುವ ಕಾರ್ಯ ಮಾಡಲಿ ಅದಕ್ಕೆ ನನ್ನನ್ನು ಸೇರಿದಂತೆ ಸಮಾಜದ ಎಲ್ಲ ನಾಯಕರ ಬೆಂಬಲವಿದೆ. ಅದನ್ನು ಬಿಟ್ಟು ಪ್ರಾಚೀನ ಪೀಠಗಳ ಬಗ್ಗೆ ಪಂಚಾಚಾರ್ಯರ ಬಗ್ಗೆ ಅಗೌರವವಾಗಿ ಮಾತನಾಡುವುದು ಅವರ ಸ್ಥಾನಕ್ಕೆ ತಕ್ಕದಾದುದಲ್ಲ ನಮ್ಮ ಸಂಸ್ಕೃತಿ, ಆಚಾರ ವಿಚಾರ ನಮ್ಮನ್ನು ಒಂದೂಗೂಡಿಸಬೇಕು ವಿನಾ ನಮ್ಮ ಏಕತೆಯನ್ನು ಒಡೆಯುವಂತಾಗಬಾರದು ಎಂದು ಮಾರ್ಮಿಕವಾಗಿ ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ ಹಾಗೂ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಮಾಜಿ ಸಚಿವ ಎಂ.ಸಿ.ಮನಗೂಳಿ ವಹಿಸಿದ್ದರು. ಲಿಂಗಸೂರಿನ ಚನ್ನಮ್ಮ ಬಳಗದ ಶ್ವೇತಾ ಮೇಟಿ ಉಪನ್ಯಾಸ ನೀಡಿದರು.

ಸಮಾವೇಶದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಿಂಗನಗೌಡ ಪಾಟೀಲ, ಎಂ.ಆರ್. ಪಾಟೀಲ ಬಳ್ಳೋಳ್ಳಿ, ಬಿ.ಎಸ್.ಪಾಟೀಲ ನಾಗರಾಳಹುಲಿ, ಬಸನಗೌಡ ಪಾಟೀಲ ಜಿಡ್ಡಿಮನಿ, ನಾನಾಗೌಡ ಯಾಳಗಿ, ಚನ್ನವೀರ ಕುದರಿ, ಪ್ರಕಾಶ ದಾನಗೊಂಡ, ವಿನೋದ ಪಾಟೀಲ ಸೇರಿದಂತೆ ಪಂಚಮಸಾಲಿ ಸಮುದಾಯದ ಎಲ್ಲ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT