ಶಹಾಪುರ

ಭರದಿಂದ ಸಾಗಿದ ಭತ್ತ ಕಟಾವು

‘ತ್ವರಿತವಾಗಿ ರಾಶಿ ಮಾಡಿಕೊಂಡು ಬೇಸಿಗೆ ಹಂಗಾಮಿನ ಎರಡನೇಯ ಅವಧಿಗೆ ಭತ್ತ ನಾಟಿ ಮಾಡಲು ಹಿಂದೇಟು ಹಾಕುವಂತಾಗಿದೆ.

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಭತ್ತದ ಉತ್ತಮ ಫಸಲು ಬಂದಿದೆ. ಯಂತ್ರದ ಮೂಲಕ ಕಟಾವು ಕಾರ್ಯ ಸಾಗಿದೆ. ‘ಯಂತ್ರಗಳನ್ನು ಬಳಿಸುತ್ತಿರುವುದರಿಂದ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಪ್ರತಿ ಗಂಟೆಗೆ ₹2,400ದಂತೆ ತೆಗೆದುಕೊಳ್ಳು

ತ್ತಾರೆ. ಆದರೆ ಕಾಳು ಕಟ್ಟಿದ ಮೇಲೆ ರಸ ಹೀರುವ ಸೊಳ್ಳೆಗಳು ಕಾಣಿಸಿಕೊಂಡಿದ್ದರಿಂದ ಇಳುವರಿ ಗಣನೀಯವಾಗಿ ಕುಸಿತವಾಗಿದೆ. ಸದ್ಯ ಧಾರಣಿ ಪ್ರತಿ ಕ್ವಿಂಟಲ್‌ಗೆ ₹1,380 ಇದೆ’ ಎನ್ನುತ್ತಾರೆ ರೈತ ಶಿವಪ್ಪ.

‘ತ್ವರಿತವಾಗಿ ರಾಶಿ ಮಾಡಿಕೊಂಡು ಬೇಸಿಗೆ ಹಂಗಾಮಿನ ಎರಡನೇಯ ಅವಧಿಗೆ ಭತ್ತ ನಾಟಿ ಮಾಡಲು ಹಿಂದೇಟು ಹಾಕುವಂತಾಗಿದೆ. ವಾರಬಂದಿಯು ಕಟ್ಟುನಿಟ್ಟಾಗಿ ಜಾರಿಯಾದರೆ ಕಾಲುವೆ ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುವುದಿಲ್ಲ.

ಅಲ್ಲದೆ ಭತ್ತವು ನಿಷೇಧಿತ ಬೆಳೆಯಾಗಿದ್ದರಿಂದ ಬೆಳೆ ನಷ್ಟವನ್ನು ನಾವು ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ರೈತ ಅಮರಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈಗಾಗಲೇ ಆಂಧ್ರವಲಸಿಗರು ಎರಡನೇಯ ಅವಧಿಯ ಭತ್ತದ ಲೀಸ್‌ ಮೊತ್ತವನ್ನು ನೀಡಲು ಒಪ್ಪುತ್ತಿಲ್ಲ. ನೀರಿನ ಸಮಸ್ಯೆ ಉಂಟಾಗುವ ಆತಂಕ ಇದ್ದು, ಜಮೀನು ಮಾಲೀಕರು ಕಂಗಾಲಾಗಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಕಲಬುರ್ಗಿ
ವಿವಿಧ ಬೇಡಿಕೆ: ಸಂಘಟನೆಗಳ ಪ್ರತಿಭಟನೆ

ಗುತ್ತಿಗೆ ಪದ್ಧತಿಯಿಂದ ಪೌರ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಬೆಂಗಳೂರು, ಮೈಸೂರಿನಲ್ಲಿ ಗುತ್ತಿಗೆ ಪೌರ ಕಾರ್ಮಿಕರನ್ನು ಈಗಾಗಲೇ ಕಾಯಂಗೊಳಿಸಲಾಗಿದೆ.

23 Jan, 2018
ಕಲಬುರ್ಗಿ ಚಿತ್ರಸಂತೆಯಲ್ಲಿ ಕಲೆಯ ಬಲೆ

ಕಲಬುರ್ಗಿ
ಕಲಬುರ್ಗಿ ಚಿತ್ರಸಂತೆಯಲ್ಲಿ ಕಲೆಯ ಬಲೆ

22 Jan, 2018

ಕಲ್ಬುರ್ಗಿ
‘ಗೌರವಾದರ ವರ್ತಮಾನಕ್ಕೆ ಅನ್ವಯಿಸಲಿ’

‘ಬುದ್ಧಿ ಜೀವಿಗಳು ಮತ್ತು ಸಮಾಜ‘ ಕುರಿತು ಮಾತನಾಡಿದ ಸಾಹಿತಿ ಮಹಾದೇವ ಬಡಿಗೇರ, ‘ಬುದ್ಧಿ ಜೀವಿಗಳು ಎಂದರೆ ಬರಹಗಾರರು, ಸಾಹಿತಿಗಳು ಹಾಗೂ ಇತಿಹಾಸಕಾರರು ಎಂಬ ಭಾವನೆ ಇದೆ. ...

22 Jan, 2018
ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭೀಕರ ದಾಳಿ: ದಂಡೆ

ಕಲಬುರ್ಗಿ
ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭೀಕರ ದಾಳಿ: ದಂಡೆ

21 Jan, 2018
ರಾಜ್ಯದಲ್ಲಿ ಜೆಡಿಎಸ್‌ಗೆ ಅವಕಾಶ ನೀಡಿ: ಕುಮಾರಸ್ವಾಮಿ ಮನವಿ

ಜೇವರ್ಗಿ
ರಾಜ್ಯದಲ್ಲಿ ಜೆಡಿಎಸ್‌ಗೆ ಅವಕಾಶ ನೀಡಿ: ಕುಮಾರಸ್ವಾಮಿ ಮನವಿ

21 Jan, 2018