ಸಾವಳಗಿ

ಜತ್ತಿ ಸ್ವಗ್ರಾಮದಲ್ಲಿ ಬಸ್‌ ನಿಲ್ದಾಣವೇ ಇಲ್ಲ!

ಗ್ರಾಮದ ಬಹುದಿನಗಳ ಬೇಡಿಕೆಯಾಗಿರುವ ಬಸ್‌ ನಿಲ್ದಾಣದ ಕನಸಾಗಿಯೇ ಉಳಿದಿದೆ. ಸುಮಾರು ವರ್ಷಗಳಿಂದ ಗ್ರಾಮಸ್ಥರು ಈ ಕುರಿತು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಸಾವಳಗಿಯಲ್ಲಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ನೀಡಿರುವ ಜಾಗದಲ್ಲಿ ಕಂಟಿಗಳು ಬೆಳದಿರುವುದು

ಸಾವಳಗಿ: ಗ್ರಾಮದ ಬಹುದಿನಗಳ ಬೇಡಿಕೆಯಾಗಿರುವ ಬಸ್‌ ನಿಲ್ದಾಣದ ಕನಸಾಗಿಯೇ ಉಳಿದಿದೆ. ಸುಮಾರು ವರ್ಷಗಳಿಂದ ಗ್ರಾಮಸ್ಥರು ಈ ಕುರಿತು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಮುಖ್ಯಮಂತ್ರಿ ಹಾಗೂಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಸಿದ ಬಿ.ಡಿ. ಜತ್ತಿ ಅವರ ಸ್ವಗ್ರಾಮದಲ್ಲಿ ಇಂದಿಗೂ ಬಸ್‌ ನಿಲ್ದಾಣ ಇಲ್ಲದಿರುವುದು ವಿಪರ್ಯಾಸದ ಸಂಗತಿ.

ಇಲ್ಲಿಗೆ ಬರುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದೆ ಪರದಾಡುವಂತಾಗಿದೆ. ಜಮಖಂಡಿ, ಅಥಣಿ, ವಿಜಯಪುರ, ಮಹಾರಾಷ್ಟ್ರದ ಜತ್ತ, ಗುಡ್ಡಾಪುರಕ್ಕೆ ಹೋಗುವ ಬಸ್‌ಗಳು ಇಲ್ಲಿಗೆ ಬಂದು ಹೋಗುತ್ತವೆ. ಹೀಗಾಗಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಭೇಟಿ ನೀಡುತ್ತಾರೆ. ಬಸ್‌ಗಳಿಗಾಗಿ ಬಿಸಿಲಿನಲ್ಲಿಯೇ ನಿಲ್ಲಬೇಕಾಗುತ್ತದೆ ಎಂದು ನಾಗರಿಕರು ದೂರುತ್ತಾರೆ.

ಶಾಸಕರ ನಿರ್ಲಕ್ಷ್ಯ: ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಮಾಡುವುದಾಗಿ ಶಾಸಕ ಸಿದ್ದು ನ್ಯಾಮಗೌಡ ಅವರು ಭರವಸೆ ನೀಡಿದ್ದರು. ಆದರೆ ಜಾಗದ ಸಮಸ್ಯೆ ನೆಪ ಹೇಳುತ್ತಿದ್ದರು. ಸದ್ಯ ಗ್ರಾಮ ಪಂಚಾಯ್ತಿಯಿಂದ 2 ಎಕರೆ ಜಾಗವನ್ನು ನೀಡಲಾಗಿದೆ. ಶಾಸಕರು ಮಾತ್ರ ತಮ್ಮ ಭರವಸೆಯನ್ನು ಮುಂದೂಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

* * 

ಬಸ್‌ ನಿಲ್ದಾಣಕ್ಕೆ ಸೂಕ್ತ ಜಾಗವನ್ನು ಗ್ರಾಮ ಪಂಚಾಯ್ತಿಯಿಂದ ನೀಡಲಾಗಿದೆ. ಕೆಲವೇ ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸುವುದಾಗಿ ಶಾಸಕ ಸಿದ್ದು ನ್ಯಾಮಗೌಡ ತಿಳಿಸಿದ್ದಾರೆ
ಸುಭಾಷ ಪಾಟೋಳಿ, ಅಧ್ಯಕ್ಷ, ಸಾವಳಗಿ ಗ್ರಾಮ ಪಂಚಾಯ್ತಿ

Comments
ಈ ವಿಭಾಗದಿಂದ ಇನ್ನಷ್ಟು

ಬಾಗಲಕೋಟೆ
ಯಮಕನಮರಡಿ ಚೆಕ್‌ಪೋಸ್ಟ್‌: 72 ಚೀಲ ಗೋಧಿ ವಶ

ಪರವಾನಗಿ ಇಲ್ಲದೇ, ಲಾರಿಯೊಂದರಲ್ಲಿ ಸಾಗಿಸುತ್ತಿದ್ದ 72 ಚೀಲ ಗೋಧಿಯನ್ನು ಗ್ರಾಮದ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ವಶಪಡಿಸಿಕೊಳ್ಳಲಾಗಿದೆ.

23 Apr, 2018

ಮುಧೋಳ
ಕಾಂಗ್ರೆಸ್ ಸಭೆ: ಒಗ್ಗಟ್ಟಿನ ಮಂತ್ರ ಜಪ

‘ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ನುಡಿದಂತೆ ನಡೆದಿದೆ. ಪ್ರಣಾಳಿಕೆಯಲ್ಲಿ ತಿಳಿಸಿದ ಶೇ 98ರಷ್ಟು ಆಶ್ವಾಸನೆ ಪೂರೈಸಿದೆ. ದೀನ ದಲಿತರಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ...

23 Apr, 2018
ಹುಡ್ಕೊ ಕಾಲೊನಿ: ನೀರಿನ ಸಮಸ್ಯೆ ಉಲ್ಬಣ

ಬಾಗಲಕೋಟೆ
ಹುಡ್ಕೊ ಕಾಲೊನಿ: ನೀರಿನ ಸಮಸ್ಯೆ ಉಲ್ಬಣ

23 Apr, 2018

ಇಳಕಲ್
ಮಾಧುರ್ಯಕ್ಕೆ ಮತ್ತೊಂದು ಹೆಸರು ಪಿಬಿಎಸ್‌

ಗಾನ ಗಂಧರ್ವ ಪಿ.ಬಿ. ಶ್ರೀನಿವಾಸ ಅಸಾಮಾನ್ಯ ಗಾಯಕ. ಕರ್ನಾಟಕ ಮಾತ್ರವಲ್ಲ. ಇಡೀ ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಸಾಧಾರಣ ಸಾಧನೆ ಮಾಡಿ, ಛಾಪು ಮೂಡಿಸಿದ ಮೇರು...

23 Apr, 2018

ಬಾದಾಮಿ
ಸಿದ್ದರಾಮಯ್ಯ ಗೆಲ್ಲಿಸಲು ಪಣ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಬಾದಾಮಿ ಮತಕ್ಷೇತ್ರದಿಂದ ಸ್ಪರ್ಧಿಸಲಿದ್ದು, 24ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅವರನ್ನು ಗೆಲ್ಲಿಸಲು ಎಲ್ಲರೂ ಸಿದ್ಧರಾಗಬೇಕು’ ಎಂದು ಕೆಪಿಸಿಸಿ...

23 Apr, 2018