ಬೀದರ್‌

ಜನಪದದಲ್ಲಿ ಬಸವಣ್ಣನ ಚರಿತ್ರೆ

ಬಸವಣ್ಣನವರ ಜೀವನ ವೃತ್ತಾಂತ ಜನಪದ ಸಂಸ್ಕೃತಿಯಲ್ಲಿ ಕಾಣಸಿಗುತ್ತದೆ. ಜನಪದದಲ್ಲಿ 950 ವರ್ಷಗಳಿಂದ ಹಾಡುಗಳಿವೆ. ಬಸವಣ್ಣನವರು ವೇದಾಗಮ, ಶಾಸ್ತ್ರ ಎಲ್ಲವನ್ನೂ ತಮ್ಮ ವಚನಗಳಲ್ಲಿ ತೆಗೆದುಕೊಂಡಿದ್ದಾರೆ.

ಬೀದರ್‌: ಬಸವಣ್ಣನವರನ್ನು ಸಂಪೂರ್ಣವಾಗಿ ಎಲ್ಲ ರಂಗಗಳಲ್ಲೂ ಕಾಣಲು ಸಾಧ್ಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಸವಣ್ಣನವರ ಬಗೆಗೆ 400 ಮೌಲಿಕ ಗ್ರಂಥಗಳಿವೆ. ಅವರನ್ನು ಪುರಾಣ, ಕಾವ್ಯ, ರಗಳೆ, ವಚನಗಳಲ್ಲಿ ನೋಡುತ್ತೇವೆ. ಲಿಂಗಾಯತ ಧರ್ಮ ಬಸವಣ್ಣನವರಿಂದಲೇ ಪ್ರಾರಂಭವಾಗಿದೆ ಎನ್ನುವುದಕ್ಕೆ ಜನಪದದಲ್ಲಿ ಆಧಾರಗಳಿವೆ.

ಬಸವಣ್ಣನವರ ಜೀವನ ವೃತ್ತಾಂತ ಜನಪದ ಸಂಸ್ಕೃತಿಯಲ್ಲಿ ಕಾಣಸಿಗುತ್ತದೆ. ಜನಪದದಲ್ಲಿ 950 ವರ್ಷಗಳಿಂದ ಹಾಡುಗಳಿವೆ. ಬಸವಣ್ಣನವರು ವೇದಾಗಮ, ಶಾಸ್ತ್ರ ಎಲ್ಲವನ್ನೂ ತಮ್ಮ ವಚನಗಳಲ್ಲಿ ತೆಗೆದುಕೊಂಡಿದ್ದಾರೆ. ವೇದದೊಳಗಣ ಹುಸಿಯ, ಭೇದವನ್ನು ಬಹಿರಂಗಗೊಳಿಸಿದರು.

ಜನಪದಕ್ಕೆ ತೇದುಂಡ ಜೀವಿ ಎನ್ನುವ ಮೂಲಕ ವೇದದೊಳಗಿರುವ ಸುಳ್ಳನ್ನು ಬಿಚ್ಚಿಟ್ಟರು. ಗೋವುಗಳಲ್ಲಿ 38 ಕೋಟಿ ದೇವರೆಂಬುದು ಸುಳ್ಳು. ಅದು ರೈತನ ಒಡನಾಡಿ. ಪ್ರವಚನವೆಂದರೆ ಪ್ರಸಾದವೇ ಹೊರತು ವ್ಯವಹಾರವಲ್ಲ. ದೇವರಿಗೋಸ್ಕರ ಖರ್ಚು ಮಾಡುವ ದುಡ್ಡನ್ನು ಮನೆ ಖರ್ಚಿಗೆ ಬಳಸಬೇಕು. ಯುವಕರು ವ್ಯಸನಮುಕ್ತರಾಗಿ ಜೀವನವನ್ನು ಆನಂದದಿಂದ ಅನುಭವಿಸಬೇಕು. ಕಾಯಕ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ಪರಸ್ತ್ರೀಯರನ್ನು ಅಕ್ಕ ತಂಗಿಯರಂತೆ ಭಾವಿಸಿದರೆ ಈ ದೇಶದಲ್ಲಿ ಅತ್ಯಾಚಾರಗಳು ನಡೆಯುವುದಿಲ್ಲ.

12ನೇ ಶತಮಾನದಲ್ಲಿ ನಾವೆಲ್ಲರೂ ಅಸ್ಪೃಶ್ಯರಾಗಿದ್ದೇವು. ಪೇಜಾವರ ಶ್ರೀಗಳು ದಲಿತರ ಜತೆ ಊಟ ಮಾಡುವುದು ದೊಡ್ಡದಲ್ಲ, ಲಿಂಗಾಯತ ಗುರುಗಳ ಜತೆ ಊಟ ಮಾಡಬೇಕು. ಅಸ್ಪೃಶ್ಯತೆ ನಿವಾರಣೆ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಮನೆಗೆ ಬಂದವರ ಜಾತಿ ಕೇಳದೆ ಪ್ರೀತಿಯಿಂದ ಕಾಣಬೇಕು. ದಲಿತರೂ ಬದಲಾಗಬೇಕು. ಅಂದಾಗ ಮಾತ್ರ ಈ ದೇಶ ಉಳಿಯುತ್ತದೆ. ಭಾರತವು ಬಹು ಸಂಸ್ಕೃತಿ, ಬಹುಜನಾಂಗದ ದೇಶ. ನಾವು ಧರ್ಮ, ಜಾತಿ ಆಧಾರಿತ ಹಿಂದೂ ರಾಷ್ಟ್ರ ಕಟ್ಟುವುದು ಬೇಡ, ಭಾವೈಕ್ಯದ ತಳಹದಿಯಲ್ಲಿ ಅಭಿವೃದ್ಧಿಪಥದ ಮೇಲೆ ರಾಷ್ಟ್ರ ಕಟ್ಟಬೇಕು. ನಮಗೆ ರಾಮರಾಜ್ಯ ಬೇಡ, ಅಭಿವೃದ್ಧಿಪರ ಕಲ್ಯಾಣ ರಾಜ್ಯ ಬೇಕು.

Comments
ಈ ವಿಭಾಗದಿಂದ ಇನ್ನಷ್ಟು
ಅಂಕ ಪಡೆಯಲು ಸ್ವಚ್ಛತಾ ಕಾರ್ಯದ ಕಸರತ್ತು

ಬೀದರ್‌
ಅಂಕ ಪಡೆಯಲು ಸ್ವಚ್ಛತಾ ಕಾರ್ಯದ ಕಸರತ್ತು

22 Jan, 2018
ಸಮಾನತೆಯಿಂದ ಬಲಿಷ್ಠ ಸಮಾಜ ನಿರ್ಮಾಣ

ಬೀದರ್
ಸಮಾನತೆಯಿಂದ ಬಲಿಷ್ಠ ಸಮಾಜ ನಿರ್ಮಾಣ

22 Jan, 2018
ನಿಟ್ಟೂರ (ಬಿ): ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಗರಿ

ಭಾಲ್ಕಿ
ನಿಟ್ಟೂರ (ಬಿ): ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಗರಿ

21 Jan, 2018
770 ಖ್ಯಾತನಾಮರ ಸೇರಿಸಲು ನಿರ್ಣಯ

ಬೀದರ್‌
770 ಖ್ಯಾತನಾಮರ ಸೇರಿಸಲು ನಿರ್ಣಯ

20 Jan, 2018
ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

ಬೀದರ್‌
ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

19 Jan, 2018