ಧಾರವಾಡ

ಗುರುರಾಜ ಹುಣಸಿಮರದ ಹೇಳಿಕೆ ದಾಖಲು

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ವರದಿ ನೀಡುವಂತೆ ಐಜಿಪಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ವರದಿ ಸಲ್ಲಿಸಲಾಗುವುದು’

ಧಾರವಾಡದ ಗಾಂಧಿನಗರದಲ್ಲಿರುವ ಗುರುರಾಜ ಹುಣಸೀಮರದ ಅವರ ಮನೆಗೆ ಭಾನುವಾರ ಸಂಜೆ ಭೇಟಿ ನೀಡಿ, ವಿಚಾರಣೆ ನಡೆಸಿದ ಬಳಿಕ ಹೊರಬಂದ ರವೀಂದ್ರ ಗಡಾದ.

ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಡಿವೈಎಸ್‌ಪಿಗಳು ರಾಜಿಗೆ ಯತ್ನಿಸಿದ್ದಾರೆ ಎಂಬ ಗುರುನಾಥಗೌಡ ಗೌಡರ ಆರೋಪಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಗೆ ನೇಮಕಗೊಂಡಿರುವ ಬೆಳಗಾವಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರವೀಂದ್ರ ಗಡಾದ, ಭಾನುವಾರ ಜೆಡಿಎಸ್‌ ಮುಖಂಡ ಗುರುರಾಜ ಹುಣಸಿಮರದ ಅವರ ಹೇಳಿಕೆ ದಾಖಲಿಸಿಕೊಂಡರು.

ಇಲ್ಲಿನ ಗಾಂಧಿನಗರದಲ್ಲಿರುವ ಹುಣಸಿಮರದ ಅವರ ಮನೆಗೆ ಭೇಟಿ ನೀಡಿದ ಗಡಾದ, ಒಂದೂವರೆ ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು.

ನಂತರ ಹೊರ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ವರದಿ ನೀಡುವಂತೆ ಐಜಿಪಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು

ನಂತರ ಮಾತನಾಡಿದ ಗುರುರಾಜ ಹುಣಸಿಮರದ, ‘ಮೊರಬದಲ್ಲಿ ಕಳೆದ ಹಲವು ವರ್ಷಗಳಿಂದ ಅಂತೆ, ಕಂತೆ ಆಧಾರದ ಮೇಲೆಯೇ ಹಲವು ಕೊಲೆಗಳು ನಡೆದಿವೆ. ಯೋಗೀಶಗೌಡ ಕೊಲೆಗೆ ಸಂಬಂಧಿಸಿದಂತೆ ಸಚಿವ ವಿನಯ ಕುಲಕರ್ಣಿ ಹಾಗೂ ಗುರುನಾಥಗೌಡ ಕುರಿತಂತೆ ಹೊರಗೆ ಇಲ್ಲಸಲ್ಲದ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಇಬ್ಬರಿಗೂ ಪರಸ್ಪರ ಅಪನಂಬಿಕೆ ಮೂಡದಿರಲಿ ಎಂದು ಈ ಸಭೆ ನಡೆಸಿದ್ದು ನಿಜ. ಆದರೆ, ಕೊಲೆ ಆರೋಪಿಗಳ ರಕ್ಷಣೆಗೆ ಸಂಧಾನದ ಮಾತುಕತೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನ.10 ರಂದು ನಾನು ಪಕ್ಷದ ಸಭೆಗಾಗಿ ಸರ್ಕೀಟ್‌ ಹೌಸ್‌ನಲ್ಲಿ ಇದ್ದೆ. ಅಲ್ಲಿಗೆ ಗುರುನಾಥ ಗೌಡ ಹಾಗೂ ಬೆಳಗಾವಿ ಐಜಿ ಕಚೇರಿಯ ಡಿವೈಎಸ್‌ಪಿ ತುಳಜಪ್ಪ ಸುಲ್ಫಿ ಬಂದರು. ಸಚಿವರ ಭೇಟಿಗೆ ಬರಹೇಳಿದ್ದಾರೆ ಎಂದರು. ಅಲ್ಲಿಗೆ ಹೋಟೆಲ್‌ ಉದ್ಯಮಿ ಮಹೇಶ ಶೆಟ್ಟಿ ಅವರೂ ಬಂದು ತಮ್ಮ ಮನೆಯಲ್ಲೇ ಸಭೆ ನಡೆಸೋಣ ಎಂದರು. ಸ್ಥಳಕ್ಕೆ ಧಾರವಾಡ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ ಹಾಗೂ ವಿನಯ ಕುಲಕರ್ಣಿ ಅವರು ಬಂದರು. ನಂತರ ಮಾತು ಆರಂಭಿಸಿದ ನಾನು, ಇಬ್ಬರ ನಡುವೆ ಪರಸ್ಪರ ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಮುಕ್ತವಾಗಿ ಚರ್ಚಿಸಿ ಗೊಂದಲ ನಿವಾರಿಸಿಕೊಳ್ಳಿ ಎಂದೆ. ತಡರಾತ್ರಿ 11.30ರವರೆಗೆ ಮಾತುಕತೆ ನಡೆಯಿತು’ ಎಂದು ಹೇಳಿದರು.

'ನಾನೊಬ್ಬ ವಕೀಲನಾಗಿ ಹಾಗೂ ಸಕ್ರಿಯ ರಾಜಕಾರಣದಲ್ಲಿರುವ ನನಗೆ ಯಾವ ವಿಷಯದಲ್ಲಿ ಪಾಲ್ಗೊಳ್ಳಬೇಕು ಎಂಬ ಜ್ಞಾನವಿದೆ. ಇದು ಜಿಲ್ಲೆಯ ಹಿತದೃಷ್ಟಿಯಿಂದ ಮಾಡಿದ ಕಾರ್ಯ. ಇಲ್ಲಿ ಯಾವುದೇ ಕೊಲೆ ಆರೋಪಿಗಳ ರಕ್ಷಣೆಗೆ ಪ್ರಯತ್ನ ನಡೆದಿಲ್ಲ’ ಎಂದು ಹುಣಸಿಮರದ ಸ್ಪಷ್ಟಪಡಿಸಿದರು.

* * 

ಎಎಸ್‌ಪಿ ಅವರಿಗೂ ಅಂದು ನಡೆದ ಘಟನೆಯನ್ನೇ ವಿವರಿಸಿದ್ದೇನೆ. ಈ ಮಾತುಕತೆ ನಡೆದಿದೆಯೇ ಹೊರತು, ಸಂಧಾನವಲ್ಲ
ಗುರುರಾಜ ಹುಣಸಿಮರದ
ಜೆಡಿಎಸ್‌ ಮುಖಂಡ

Comments
ಈ ವಿಭಾಗದಿಂದ ಇನ್ನಷ್ಟು

ಹುಬ್ಬಳ್ಳಿ
ಎಟಿಎಂಗಳಿಗೂ ತಟ್ಟಿದ ಚುನಾವಣಾ ಬಿಸಿ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಚೆಕ್‌ ಪೋಸ್ಟ್‌ಗಳನ್ನು ಹಾಕಿರುವ ಕಾರಣ ಎಟಿಎಂಗಳಿಗೆ ಹಣ ಸಾಗಿಸಲು ಭದ್ರತಾ ಸಿಬ್ಬಂದಿ ಮತ್ತು ಬ್ಯಾಂಕ್‌ ಅಧಿಕಾರಿಗಳು ನಿತ್ಯ...

20 Apr, 2018
ಪಾಟೀಲ ಬೆಂಬಲಿಗನಿಂದ ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ
ಪಾಟೀಲ ಬೆಂಬಲಿಗನಿಂದ ಆತ್ಮಹತ್ಯೆಗೆ ಯತ್ನ

20 Apr, 2018

ಧಾರವಾಡ
ಮದ್ಯ ನಿಷೇಧ ಅಭಿಯಾನ

‘ಪ್ರಸಕ್ತ ಚುನಾವಣೆ ಸಂದರ್ಭದಲ್ಲಿ ಕೆಲ ಅಭ್ಯರ್ಥಿಗಳಿಂದ ಬರಬಹುದಾದ ಮದ್ಯದ ಆಮಿಷ ತಡೆಯುವ ನಿಟ್ಟಿನಲ್ಲಿ ಮದ್ಯ ವ್ಯಸನದಿಂದ ಮುಕ್ತರಾದವರೇ ಜಾಗೃತಿ ಜಾಥಾ ನಡೆಸುತ್ತಿದ್ದಾರೆ’ ಎಂದು ಅಖಿಲ...

20 Apr, 2018

ಧಾರವಾಡ
ಮೂರನೇ ದಿನ ಮೂರು ನಾಮಪತ್ರ ಸಲ್ಲಿಕೆ

ಬಿಜೆಪಿಯ ಅಮೃತ ದೇಸಾಯಿ ಗುರುವಾರ ಧಾರವಾಡ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು.

20 Apr, 2018
ವಿನಯ ಕುಲಕರ್ಣಿ ವಿರುದ್ಧ ಬಂಡಾಯ

ಧಾರವಾಡ
ವಿನಯ ಕುಲಕರ್ಣಿ ವಿರುದ್ಧ ಬಂಡಾಯ

18 Apr, 2018