ಧಾರವಾಡ

ಅಂಗವಿಕಲರ ಪಾಲಿನ ಅಪದ್ಭಾಂದವ ಮಂಜಪ್ಪ

ಅಂಗವಿಕಲರಿಗೆ ಸರ್ಕಾರದಿಂದ ದೊರಕುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಜೊತೆಗೆ ಅವುಗಳನ್ನು ಒದಗಿಸುವ ಕಾಯಕದಲ್ಲಿ ತಮ್ಮನ್ನೇ ತಾವು ಅರ್ಪಿಸಿಕೊಂಡವರು ಕುಂದಗೋಳ ತಾಲ್ಲೂಕಿನ ದೇವನೂರು ಗ್ರಾಮದ ಮಂಜಪ್ಪ ಹುಬ್ಬಳ್ಳಿ.

ಮಂಜಪ್ಪ ಹುಬ್ಬಳ್ಳಿ

ಧಾರವಾಡ: ಅಂಗವಿಕಲರಿಗೆ ಸರ್ಕಾರದಿಂದ ದೊರಕುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಜೊತೆಗೆ ಅವುಗಳನ್ನು ಒದಗಿಸುವ ಕಾಯಕದಲ್ಲಿ ತಮ್ಮನ್ನೇ ತಾವು ಅರ್ಪಿಸಿಕೊಂಡವರು ಕುಂದಗೋಳ ತಾಲ್ಲೂಕಿನ ದೇವನೂರು ಗ್ರಾಮದ ಮಂಜಪ್ಪ ಹುಬ್ಬಳ್ಳಿ.

ಪಿಯುಸಿವರೆಗೂ ವ್ಯಾಸಂಗ ಮಾಡಿರುವ ಮಂಜಪ್ಪ, ಪೋಲಿಯೊದಿಂದ ಬಾಲ್ಯದಲ್ಲೇ ಬಲಗಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಆದರೆ, ಅವರಲ್ಲಿರುವ ಸೇವಾ ಮನೋಭಾವ ಅವರನ್ನು ಹಲವು ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುವಂತೆ ಮಾಡಿದೆ. ಹೀಗಾಗಿ ಜನಮುಖಿ ಹಾಗೂ ಎಕ್ವಿಪ್‌ ಇಂಡಿಯಾದಂಥ ಸಂಸ್ಥೆಯಲ್ಲಿ ಕೆಲಸ ಮಾಡುವಂತೆ ಇವರನ್ನು ಪ್ರೇರೇಪಿಸಿತು. ನಂತರ ತನ್ನ ತಾಲ್ಲೂಕಿನಲ್ಲಿರುವ ಸೌಲಭ್ಯ ವಂಚಿತರಿಗೆ ನೆರವಾಗುವ ಉದ್ದೇಶದಿಂದ ಕಳೆದ ಕೆಲವು ವರ್ಷಗಳಿಂದ ದೇವನೂರಿನಲ್ಲೇ ನೆಲೆಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ಅಂಗವಿಕಲರ ಮಕ್ಕಳನ್ನು ಶಾಲೆಗೆ ಸೇರಿಸುವುದು, ಅಂಗವಿಕಲರ ಮಕ್ಕಳು ಓದು ಮುಂದುವರೆಯಲು ವಿವಿಧ ಇಲಾಖೆಗಳ ಸೌಲಭ್ಯಗಳು ಲಭ್ಯವಾಗುವಂತೆ ಜವಾಬ್ದಾರಿ ತೆಗೆದುಕೊಳ್ಳುವುದು, ಪೋಷಣಭಾಗ್ಯ ದೊರಕಿಸಿಕೊಡುವುದು, ಗಾಲಿ ಕುರ್ಚಿ ಕೊಡಿಸುವುದು, ಬುದ್ಧಿಮಾಂದ್ಯ ಮಕ್ಕಳಿಗೆ ಎಂಆರ್‌ ಕಿಟ್ ಸೌಲಭ್ಯ ನೀಡುವುದು, ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಸಿಕೊಡುವುಲ್ಲಿ ಮಂಜಪ್ಪ ನೆರವಾಗುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಸೌಲಭ್ಯ ಕೊಡಿಸುವುದು, ಮಾಸಾಶನ, ವಿದ್ಯಾರ್ಥಿ ವೇತನ ಕೊಡಿಸುವ ಜೊತೆಗೆ ಅಗತ್ಯ ಇರುವವರಿಗೆ ಸರ್ಕಾರ ಅಥವಾ ದಾನಿಗಳಿಂದ ಸೌಲಭ್ಯ ಕೊಡಿಸುವುದು ಇವರಿಗೆ ರೂಢಿ. ಇದುವರೆಗೆ ಕುಂದಗೋಳ ತಾಲ್ಲೂಕಿನ 200ಕ್ಕೂ ಅಧಿಕ ಜನರಿಗೆ ಮಂಜಪ್ಪ ನೆರವಾಗಿದ್ದಾರೆ.

‘ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ನನ್ನಂತೆ ಈ ಸಮಾಜದಲ್ಲಿ ಹಲವರು ಇದ್ದಾರೆ. ಅವರಿಗೆ ನೆರವಾಗುವುದೇ ನನ್ನ ಉದ್ದೇಶ. ಇದಕ್ಕಾಗಿ ನಾನು ಯಾರಿಂದಲೂ ಯಾವುದೇ ಫಲಾಪೇಕ್ಷೆ ಬೇಡುತ್ತಿಲ್ಲ. ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನಾನೂ ಪಡೆಯುತ್ತಿದ್ದೇನೆ. ಸಿಗದವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ. ಇದರಿಂದ ನನಗೆ ಸಂತೃಪ್ತಿ ಇದೆ’ ಎಂದು ಮಂಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ನವಲಗುಂದ
ಕಳಸಾ ಬಂಡೂರಿ ಹೋರಾಟಗಾರ ಹೆಬಸೂರ ನಾಮಪತ್ರ ಸಲ್ಲಿಕೆ

ಕಳೆದ ಒಂದು ಸಾವಿರ ದಿನದಿಂದ ಮಹದಾಯಿ ಹಾಗು ಕಳಸಾ ಬಂಡೂರಿ ಯೋಜನೆ ಜಾರಿಗಾರಿ ಹೋರಾಟ ನಡೆಸುತ್ತಿರುವ ಪಕ್ಷಾತೀತ ರೈತ ಹೋರಾಟ ಸಮಿತಿಯ ಅಧ್ಯಕ್ಷ ಲೋಕನಾಥ...

21 Apr, 2018

ಹುಬ್ಬಳ್ಳಿ
ಮಹದಾಯಿ ನೀರಿಗಾಗಿ ದೆಹಲಿ ಚಲೋ 25ರಂದು

ಮಹದಾಯಿ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರು ಮತ್ತು ರೈತರು ಏ. 25ರಂದು ದೆಹಲಿ ಚಲೋ ಕಾರ್ಯಕ್ರಮ...

21 Apr, 2018

ಹುಬ್ಬಳ್ಳಿ
‘ಸೇಫ್ಎಕ್ಸ್‌ಪ್ರೆಸ್’ ಲಾಜಿಸ್ಟಿಕ್ಸ್‌ ಆರಂಭ

ಸರಕು ಸಾಗಾಟ ಕಂಪನಿಯಾದ ‘ಸೇಫ್‌ ಎಕ್ಸ್‌ಪ್ರೆಸ್‌’ನ 33ನೇ ಅತ್ಯಾಧುನಿಕ ಲಾಜಿಸ್ಟಿಕ್ಸ್‌ ಪಾರ್ಕ್‌ ಹುಬ್ಬಳ್ಳಿಯಲ್ಲಿ ಶುಕ್ರವಾರದಿಂದ ಕಾರ್ಯಾರಂಭಿಸಿದೆ.

21 Apr, 2018

ಧಾರವಾಡ
ಸೆಂಟ್ರಲ್ ಜೈಲಿನಲ್ಲಿ ಮೊಬೈಲ್‌, ಹಣ ಪತ್ತೆ

ಧಾರವಾಡದ ಕೇಂದ್ರ ಕಾರಾಗೃಹದಲ್ಲಿ  ಮೊಬೈಲ್, ಗಾಂಜಾ ಸೇರಿದಂತೆ ಮಾದಕವಸ್ತು ಹೊಂದಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಉಪ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್ ನೇತೃತ್ವದಲ್ಲಿ ಶುಕ್ರವಾರ...

21 Apr, 2018

ಹುಬ್ಬಳ್ಳಿ
ಎಟಿಎಂಗಳಿಗೂ ತಟ್ಟಿದ ಚುನಾವಣಾ ಬಿಸಿ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಚೆಕ್‌ ಪೋಸ್ಟ್‌ಗಳನ್ನು ಹಾಕಿರುವ ಕಾರಣ ಎಟಿಎಂಗಳಿಗೆ ಹಣ ಸಾಗಿಸಲು ಭದ್ರತಾ ಸಿಬ್ಬಂದಿ ಮತ್ತು ಬ್ಯಾಂಕ್‌ ಅಧಿಕಾರಿಗಳು ನಿತ್ಯ...

20 Apr, 2018