ಕುತೂಹಲ

ಭಟ್ಟರ ಹೊಸ ಅಡುಗೆ ತಯಾರಿ

ಇದೇನು ಭಟ್ಟರು ಸಿನಿಮಾ ಮಾಡುವುದು ಬಿಟ್ಟು ಕೆಟರಿಂಗ್‌ ಸರ್ವೀಸ್‌ ಶುರುಮಾಡಿದ್ದಾರೆಯೇ ಎಂದು ಹುಬ್ಬೇರಿಸಬೇಡಿ. ಅವರು ಈಗ ಮಾಡುತ್ತಿರುವುದೂ ಸಿನಿಮಾ ರಸಪಾಕವೇ...

ಯೋಗರಾಜ ಭಟ್ಟ

ಯೋಗರಾಜ ಭಟ್ಟರ ಅಡುಗೆಮನೆಯಲ್ಲಿ ಪಾತ್ರೆಗಳು ಸದ್ದು ಮಾಡುತ್ತಿವೆ. ಹಳೆಯ ಕೊಳೆ ತೊಳೆದುಕೊಂಡು ಮಿರಮಿರ ಮಿಂಚುತ್ತಿರುವ ಅವು ಹೊಸ ಅಡುಗೆಯ ತಯಾರಿಗೆ ಮೈಕೊಡುವಿಕೊಂಡ ಸಂಭ್ರಮದಲ್ಲಿವೆ.

ಇದೇನು ಭಟ್ಟರು ಸಿನಿಮಾ ಮಾಡುವುದು ಬಿಟ್ಟು ಕೆಟರಿಂಗ್‌ ಸರ್ವೀಸ್‌ ಶುರುಮಾಡಿದ್ದಾರೆಯೇ ಎಂದು ಹುಬ್ಬೇರಿಸಬೇಡಿ. ಅವರು ಈಗ ಮಾಡುತ್ತಿರುವುದೂ ಸಿನಿಮಾ ರಸಪಾಕವೇ.

ಶಿವರಾಜ್‌ ಕುಮಾರ್‌ ಜತೆ ಭಟ್ಟರು ಸಿನಿಮಾ ಮಾಡುತ್ತಿರುವುದು ಈಗಾಗಲೇ ಸುದ್ದಿಯಾಗಿತ್ತು. ಅದು ಫೆಬ್ರುವರಿಯಲ್ಲಿ ಶುರುವಾಗಬೇಕಾಗಿತ್ತು. ಆದರೆ ಆ ಚಿತ್ರ ಈಗ ಕೊಂಚ ಮುಂದಕ್ಕೆ ಹೋಗಿದೆ. ಅದಕ್ಕೆ ಕಾರಣ ಭಟ್ಟರ ಮನಸನ್ನು ಹೊಕ್ಕಿ ಗುಂಗಿ ಹುಳದಂತೆ ಎಡಬಿಡದೇ ಕಾಡಿದ ಇನ್ನೊಂದು ಕಥೆ.

ಈ ಕಾರಣಕ್ಕಾಗಿಯೇ ಶಿವಣ್ಣನ ಜತೆಗಿನ ಸಿನಿಮಾವನ್ನು ಕೊಂಚ ಮುಂದಕ್ಕೆ ಹಾಕಿ ಅವರು ತಮ್ಮ ತಲೆಯನ್ನು ಕೊರೆಯುತ್ತಿರುವ ಇನ್ನೊಂದು ಕಥೆಗೆ ಸಿನಿಮಾ ರೂಪ ಕೊಡಲು ನಿರ್ಧರಿಸಿದ್ದಾರೆ. ಇದು ಪೂರ್ತಿ ಹೊಸಬರ ಜತೆಗೇ ಮಾಡುತ್ತಿರುವ ಸಿನಿಮಾ.

ನಾಲ್ಕು ಮುಖ್ಯಪಾತ್ರಗಳ ಸುತ್ತ ಕಥೆ ಸುತ್ತುತ್ತದಂತೆ. ಪಾತ್ರಗಳಿಗೆ ನಟರ ಆಯ್ಕೆ ಇನ್ನೂ ಆಗಬೇಕಿದೆ. ಆದರೆ ನಾಲ್ಕೂ ಪ್ರಮುಖ ಪಾತ್ರಗಳಿಗೆ ಹೊಸಪ್ರತಿಭೆಗಳಿಗೆ ಅವಕಾಶ ನೀಡುವುದಂತೂ ಖಾತ್ರಿ.

ಕಥೆಯೊಂದಕ್ಕೆ ಸಿನಿಮಾ ರೂಪಕೊಡುವ ಸೃಜನಶೀಲ ಒತ್ತಡ ಯೋಗರಾಜ ಭಟ್ ಅವರನ್ನು ಚಿತ್ರ ನಿರ್ಮಾಣಕ್ಕೂ ಮುಂದಾಗುವಂತೆ ಮಾಡಿದೆ. ಈ ಚಿತ್ರ ‘ಯೋಗರಾಜ್‌ ಸಿನಿಮಾಸ್‌’ ಅಡಿಯಲ್ಲಿಯೇ ನಿರ್ಮಾಣವಾಗುತ್ತಿದೆ. ಉಳಿದಂತೆ ಹರಿಕೃಷ್ಣ ಸಂಗೀತ, ಸುಜ್ಞಾನ್‌ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ. ಉಳಿದ ಪಾತ್ರಗಳಿಗೆ ನಟರ ಆಯ್ಕೆ ಇನ್ನೂ ನಡೆಯಬೇಕಿದೆ.

ಡಿ. 6ರಂದು ಚಿತ್ರದ ಮುಹೂರ್ತ. 20ರಿಂದ ಚಿತ್ರೀಕರಣ ಶುರು.

Comments
ಈ ವಿಭಾಗದಿಂದ ಇನ್ನಷ್ಟು
ಇರ್ಫಾನ್‌ ಖಾನ್‌ಗೆ ‘ಅತ್ಯುತ್ತಮ ನಟ’ ಪ್ರಶಸ್ತಿ: ಇರ್ಫಾನ್‌ ಪಠಾಣ್‌ಗೆ ಶುಭ ಕೋರಿದ ಫೆಮಿನಾ ಇಂಡಿಯಾ

ಟ್ವಿಟರ್‌ನಲ್ಲಿ ಯಡವಟ್ಟು
ಇರ್ಫಾನ್‌ ಖಾನ್‌ಗೆ ‘ಅತ್ಯುತ್ತಮ ನಟ’ ಪ್ರಶಸ್ತಿ: ಇರ್ಫಾನ್‌ ಪಠಾಣ್‌ಗೆ ಶುಭ ಕೋರಿದ ಫೆಮಿನಾ ಇಂಡಿಯಾ

22 Jan, 2018
ಕನ್ನಡ ಚಿತ್ರ ನಿರ್ಮಾಪಕ ನವೀನ್‌ ಜತೆಗೆ ಮಲಯಾಳಂ ನಟಿ ಭಾವನಾ ವಿವಾಹ

ತ್ರಿಶ್ಶೂರ್‌
ಕನ್ನಡ ಚಿತ್ರ ನಿರ್ಮಾಪಕ ನವೀನ್‌ ಜತೆಗೆ ಮಲಯಾಳಂ ನಟಿ ಭಾವನಾ ವಿವಾಹ

22 Jan, 2018
ನಿರ್ಮಾಪಕರು ನನ್ನನ್ನು ಹಂಚಿಕೊಳ್ಳಲು ಬಯಸಿದ್ದರು: ನಟಿ ಶ್ರುತಿ ಹರಿಹರನ್

‘ಕ್ಯಾಸ್ಟಿಂಗ್ ಕೌಚ್’
ನಿರ್ಮಾಪಕರು ನನ್ನನ್ನು ಹಂಚಿಕೊಳ್ಳಲು ಬಯಸಿದ್ದರು: ನಟಿ ಶ್ರುತಿ ಹರಿಹರನ್

21 Jan, 2018
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

ಚರ್ಚಾ ಕಾರ್ಯಕ್ರಮ
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

19 Jan, 2018
‘ಮೂಕನಾಯಕ’ಕ್ಕೆ ‘ಯು’ ಪ್ರಮಾಣಪತ್ರ

ಕಲೆ ಮತ್ತು ಸಮಾಜ
‘ಮೂಕನಾಯಕ’ಕ್ಕೆ ‘ಯು’ ಪ್ರಮಾಣಪತ್ರ

19 Jan, 2018