ಖುಷಿ ಕೊಟ್ಟ ಲೇಖನಗಳು

ತೆರೆದ ಅಂಚೆ

‘ಈತ ವಾನರ ಸೇನೆಯ ಕರ್ನಲ್’ನ ಚಿತ್ರಗಳು ಕೂಡ ಬಹಳ ಸುಂದರವಾಗಿವೆ. ಅದೇ ರೀತಿ ಅಪರೂಪದ ಮಾಲೆ ಪೋಣಿಸುವ ಶಾಂತವ್ವ ಅವರ ಕಾಯಕವನ್ನು ಕಂಡು ಸಂತೋಷವಾಯಿತು.

ಖುಷಿ ಕೊಟ್ಟ ಲೇಖನಗಳು
ನ. 21ರಂದು ಕರ್ನಾಟಕ ದರ್ಶನದಲ್ಲಿ ಪ್ರಕಟವಾದ ‘ಕೊರಡು ಅರಳಿ ಹೂವಾಗಿ’‍, ‘ಈತ ವಾನರ ಸೇನೆಯ ಕರ್ನಲ್’ ಹಾಗೂ ‘ಹಿತ್ತಲಲ್ಲಿ ಕಂಡ ಕೆಂಪು ಸುಂದರಿ’ ಲೇಖನಗಳು ಒಂದಕ್ಕಿಂತ ಒಂದು ಸೊಗಸಾಗಿ ಮೂಡಿಬಂದಿವೆ.
‘ಈತ ವಾನರ ಸೇನೆಯ ಕರ್ನಲ್’ನ ಚಿತ್ರಗಳು ಕೂಡ ಬಹಳ ಸುಂದರವಾಗಿವೆ. ಅದೇ ರೀತಿ ಅಪರೂಪದ ಮಾಲೆ ಪೋಣಿಸುವ ಶಾಂತವ್ವ ಅವರ ಕಾಯಕವನ್ನು ಕಂಡು ಸಂತೋಷವಾಯಿತು.
–ಎ.ಕೆ. ಅನಂತಮೂರ್ತಿ, ಬೆಂಗಳೂರು

*
ಸೋಜಿಗವೆನಿಸಿತು
ಮರದ ತೊಗಟೆಯಿಂದ ತಯಾರಾಗುವ ಸುಂದರ ಹಾರಗಳು ಹುಡುಗಿಯರ ಅಲ್ಪ ಆದಾಯಕ್ಕೆ ಅನುಕೂಲವಾಗುತ್ತಿರುವುದನ್ನು ಓದಿ ಸಂತೋಷವಾಯಿತು. ಗದಗಿನ ಖಾದಿ ಭಂಡಾರಗಳಲ್ಲಿ ಗಂಧದ ಹಾರಗಳೊಂದಿಗೆ ಇಂಥ ಹಾರಗಳೂ ಸಿಗುತ್ತವೆ.

ತಾರಸಿ ತೋಟದ ಬಗ್ಗೆ ಬಹಳಷ್ಟು ಕೇಳಿದ್ದೇನೆ. ಆದರೆ ಲೇಖನ ಓದಿ ತಾರಸಿಯಲ್ಲಿ ಭತ್ತ ಬೆಳೆಯುವುದು ಸಾಧ್ಯವೇ ಎನ್ನುವಷ್ಟು ಸೋಜಿಗವಾಯಿತು.

ಕೆಂಪು ಮೂತಿಯ ಮಂಗಗಳಿಗಿಂತ ಈ ಕಪ್ಪು ಮುಸವಗಳು ಹೆಚ್ಚು ಅಪಾಯಕಾರಿ. ಹಾಗಿದ್ದೂ ಈ ವಾನರಗಳು ಬಾಲಕನೊಂದಿಗೆ ಸ್ನೇಹದಿಂದಿರುವುದು ಕುತೂಹಲವೆನಿಸಿತು.
–ಬಸವರಾಜ ಗಣಪ್ಪನವರ, ಗದಗ

*
ಉಪಕಾರವೇ ಜೀವನ‌
‘ಕೊರಡು ಅರಳಿ ಹೂವಗಿ’ ಲೇಖನ ಉಪಯುಕ್ತವಾಗಿದೆ. ಮನುಷ್ಯ ಜೀವನದಲ್ಲಿ ಉಪಕಾರಿಯಾಗಿ ಬಾಳಬೇಕು. ಇನ್ನೊಬ್ಬರಿಗೆ ದಾರಿ ದೀಪವಾಗಿ ಬದುಕು ಸಾಗಿಸುವಂತೆ ಮಾಡುವುದೇ ಒಂದು ಸಾರ್ಥಕ ಜೀವನ ಎಂಬುದನ್ನು ಈ ಲೇಖನ ಪ್ರತಿಬಿಂಬಿಸಿದೆ.
–ರವಿ ಶಿವಪ್ಪ ಬೀಳಗಿ, ಗೊಡಚಪ್ಪ ಚೂಟಿ, ತೇರದಾಳ

*
ಮಂಗಗಳಿಂದ ದೂರವಿಡಿ
‘ಈತ ವಾನರ ಸೇನೆಯ ಕರ್ನಲ್‌’ ಲೇಖನ ಓದಿದೆ. ಮಂಗನ ಮನಸ್ಸು ಯಾವ ಕ್ಷಣದಲ್ಲಿ ಯಾವ ರೀತಿ ಬದಲಾಗುತ್ತದೆ ಎಂಬುದನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ. ಒಂದಲ್ಲಾ ಒಂದು ದಿನ ಮಂಗಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ. ಮಗುವನ್ನು ಮಂಗಗಳಿಂದ ದೂರವಿಡಲಿ.
–ಎಸ್ಸೆನ್ಕೆ, ಕಡೂರು

*
ಬೇಸರವೂ ಆಯಿತು
ಕೆಂದಳಿಲು ಲೇಖನ ಓದಿ ಖುಷಿ ,ದುಃಖ ಎರಡೂ ಒಟ್ಟಿಗೇ ಆದವು. ಅಳಿವಿನಂಚಿಗೆ ಸರಿಯುತ್ತಿರುವ ಜೀವಸಂಕುಲವನ್ನು ರಕ್ಷಿಸುವ ಜವಾಬ್ದಾರಿ ಮಾನವನದ್ದು. ಬೆಳೆ ಹಾಳು ಮಾಡುವ ಒಂದೇ ಉದ್ದೇಶಕ್ಕೆ ಜೀವ ಸಂಕುಲದ ನಾಶ, ಮಾರಣಹೋಮ ಸಲ್ಲದು. ಅದಕ್ಕಾಗಿ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.
–ಡಾ. ಕೆ.ವಿ. ಸಂತೋಷ್‌, ಹೊಳಲ್ಕೆರೆ

Comments
ಈ ವಿಭಾಗದಿಂದ ಇನ್ನಷ್ಟು
ವಸಿ ನೋಡಿ, ಇದು ಹಸೆ!

ಕಲೆ
ವಸಿ ನೋಡಿ, ಇದು ಹಸೆ!

23 Apr, 2018
ಕವಡೆಗೂ ಬಂತು ಕಿಮ್ಮತ್ತು

ಸಂಪಾದನೆ
ಕವಡೆಗೂ ಬಂತು ಕಿಮ್ಮತ್ತು

23 Apr, 2018
ಸೆಳೆಯುವ ಸೂಜಿಗಲ್ಲು ಈ ಗಡಾಯಿಕಲ್ಲು!

ಬೃಹತ್ ಬೆಟ್ಟ
ಸೆಳೆಯುವ ಸೂಜಿಗಲ್ಲು ಈ ಗಡಾಯಿಕಲ್ಲು!

23 Apr, 2018
ಕಡಲ ಕಾಗೆಗೀಗ ಕಾವಿನ ಸಮಯ...

ಹಕ್ಕಿ ಬದುಕು
ಕಡಲ ಕಾಗೆಗೀಗ ಕಾವಿನ ಸಮಯ...

23 Apr, 2018
ಹಿನ್ನೀರಲಿ ತೇಲುವ ಭವಿಷ್ಯದ ದೋಣಿ!

ಕರ್ನಾಟಕ ದರ್ಶನ
ಹಿನ್ನೀರಲಿ ತೇಲುವ ಭವಿಷ್ಯದ ದೋಣಿ!

17 Apr, 2018