ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ ಅಂತ್ಯಕ್ಕೆ ಎಲ್ಲ ಘಟಕ ಆರಂಭಿಸಿ

Last Updated 5 ಡಿಸೆಂಬರ್ 2017, 5:16 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಡಿಸೆಂಬರ್‌ ಅಂತ್ಯಕ್ಕೆ ಕಾರ್ಯಾರಂಭ ಮಾಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಗತಿ ಪರಿ ಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2016–17ರಲ್ಲಿ ಗ್ರಾಮೀಣ ಕುಡಿ ಯುವ ನೀರು ಮತ್ತು ನೈರ್ಮಲ್ಯ ವಿಭಾಗಕ್ಕೆ ಒಟ್ಟು 70 ಘಟಕಗಳು ಮಂಜೂರಾಗಿದ್ದು, ಅದರಲ್ಲಿ 28 ಕಾಮಗಾರಿ ಪೂರ್ಣಗೊಂಡಿವೆ. 18 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅಗತ್ಯತೆ ಇಲ್ಲದೇ ಇರುವುದರಿಂದ 29 ಘಟಕಗಳನ್ನು ಕೈಬಿಡಲಾಗಿದೆ. ಇನ್ನೂ 23 ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಆರ್‌. ರವಿ ತಿಳಿಸಿದರು.

ಕೆಆರ್‌ಐಡಿಎಲ್‌ಗೆ 157 ಘಟಕಗ ಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 56 ಘಟಕಗಳು ಕಾರ್ಯನಿ ರ್ವಹಿಸುತ್ತಿವೆ. 7 ಘಟಕಗಳು ಸ್ಥಗಿತವಾ ಗಿವೆ. 15 ಘಟಕಗಳನ್ನು ಕೈಬಿಡಲಾಗಿದ್ದು, 72 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಘಟಕಗಳ ಆರಂಭಕ್ಕೆ ವಿಳಂಬ ಆಗು ತ್ತಿರುವುದರ ಕುರಿತು ವಿವರಣೆ ನೀಡಿದ ಅಧಿಕಾರಿಗಳು, ಕೆಲವೆಡೆ ನಿವೇಶನದ ಸಮಸ್ಯೆ ಎದುರಾಗಿದೆ. ಗ್ರಾಮಸ್ಥರು ತಕರಾರು ಮಾಡುತ್ತಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನಂಜಯ್ಯ ನಮಠ, ನಿವೇಶನದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿ ಕಾರಿಗಳ ಜತೆ ಚರ್ಚೆ ಮಾಡಬೇಕು. ಗ್ರಾಮ ಪಂಚಾಯಿತಿ ಪಿಡಿಒಗಳ ಜತೆ ಸೇರಿ, ಗ್ರಾಮಸ್ಥರಿಗೆ ತಿಳಿವಳಿಕೆ ನೀಡುವ ಮೂಲಕ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಾರ್ವಜನಿಕ ಶೌಚಾಲಯ: ಜಿಲ್ಲೆ ಯಲ್ಲಿ ಒಟ್ಟು 25 ಕಡೆಗಳಲ್ಲಿ ಸಾರ್ವಜ ನಿಕ ಶೌಚಾಲಯ ನಿರ್ಮಾಣ ಮಾಡ ಲಾಗುತ್ತಿದ್ದು, ಕೇವಲ ಎರಡು ಶೌಚಾಲಯಗಳ ಅನುದಾನ ಬಿಡುಗಡೆ ಯಾಗಿವೆ. ಉಳಿದ ಶೌಚಾಲಯಗಳಿಗೆ ಅನುದಾನ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.

ಈ ಹಂತದಲ್ಲಿ ಮಾತನಾಡಿದ ಡಾ. ಎಂ.ಆರ್‌. ರವಿ, ಶೌಚಾಲಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಅನುದಾನ ಸಿಕ್ಕಿಲ್ಲ. ಆದರೆ, ಸ್ವಚ್ಛ ಭಾರತ ತಿಳಿವಳಿಕೆ ಕಾರ್ಯಕ್ರಮಕ್ಕೆ ₹2 ಕೋಟಿ ನೀಡಲಾಗಿದೆ. ಅದೇ ಅನುದಾನವನ್ನು ಶೌಚಾಲಯಕ್ಕೆ ವರ್ಗಾಯಿಸಿದಲ್ಲಿ, ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿದೆ. ಈ ಕುರಿತು ಇಲಾಖೆಯ ಆಯುಕ್ತರಿಗೆ ಮನವರಿಕೆ ಮಾಡುವಂತೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಘನ ತ್ಯಾಜ್ಯ ಮತ್ತು ದ್ರವ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿ ಸಿದ ಸಮಿತಿ ಸದಸ್ಯರು, ಇತರ ಜಿಲ್ಲೆ ಗಳಲ್ಲೂ ಇಂತಹ ಘಟಕಗಳ ಸ್ಥಾಪನೆ ಅವಶ್ಯವಾಗಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿ ನೀಡುವಂತೆ ತಿಳಿಸಿದರು. ಸಮಿತಿ ಸದಸ್ಯರಾದ ರಾಜು ಮಿಡಿಗೇಶಿ, ನೇತಾಜಿ ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು.

ಪರಿಸರ ಎಂಜಿನಿಯರ್‌ ಬೇಕು
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವಂತೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲೂ ಆರೋಗ್ಯ ಶಾಖೆ ಹಾಗೂ ಪರಿಸರ ಶಾಖೆಗಳನ್ನು ಆರಂಭಿಸುವುದು ಅಗತ್ಯವಾಗಿದೆ ಎಂದು ಡಾ.ಎಂ.ಆರ್‌. ರವಿ ಹೇಳಿದರು.

ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿದೆ. ಆದರೆ, ಅದನ್ನು ಉಳಿಸಿಕೊಂಡು ಹೋಗಬೇಕಾಗಿದೆ. ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಾಂತ್ರಿಕ ನೈಪುಣ್ಯತೆಯುಳ್ಳ ಅಧಿಕಾರಿಗಳು ಅಗತ್ಯ. ಇದಕ್ಕಾಗಿ ತಾಲ್ಲೂಕು ಕೇಂದ್ರದಲ್ಲಾದರೂ ಒಬ್ಬರು ಪರಿಸರ ಎಂಜಿನಿಯರ್‌ ಹುದ್ದೆಗೆ ಅವಕಾಶ ಕಲ್ಪಿಸುವಂತೆ ಸಮಿತಿ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.

ಸಾಂಪ್ರದಾಯಿಕ ಕಟ್ಟ ನಿರ್ಮಾಣ
ಜಿಲ್ಲೆಯ ಅಂತರ್ಜಲ ವೃದ್ಧಿಗೆ ಈಗಾಗಲೇ ಸಾವಿರ ಕಿಂಡಿ ಅಣೆಕಟ್ಟೆಗಳ ನಿರ್ಮಾಣ ಆರಂಭಿಸಲಾಗಿದೆ. ಇದಕ್ಕೆ ಪೂರಕವಾಗಿ ಸಾಂಪ್ರದಾಯಿಕ ಕಟ್ಟ ನಿರ್ಮಾಣವೂ ಅವಶ್ಯವಾಗಿದೆ. ಪುತ್ತೂರು ತಾಲ್ಲೂಕಿನ ಮರಿಕೆಯಲ್ಲಿ ಪ್ರಗತಿಪರ ರೈತರು ನಿರ್ಮಿಸಿರುವ ಕಟ್ಟದ ಕುರಿತು ಅಧ್ಯಯನ ನಡೆಸಿ, ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದು ಡಾ. ಎಂ.ಆರ್‌. ರವಿ ತಿಳಿಸಿದರು.

ಮರಿಕೆ ಕಟ್ಟದಂತೆ ಇನ್ನುಳಿದ ಕಡೆಗಳಲ್ಲೂ ಕಟ್ಟ ನಿರ್ಮಾಣಕ್ಕೆ ಈಗಾಗಲೇ 500 ಅರ್ಜಿಗಳು ಬಂದಿವೆ. ಆದರೆ, ಮೇಲಧಿಕಾರಿಗಳಿಂದ ಇದಕ್ಕೆ ಇನ್ನೂ ಮಂಜೂರಾತಿ ದೊರೆತಿಲ್ಲ. ಇದಕ್ಕೆ ಅನುಮತಿ ಸಿಕ್ಕಲ್ಲಿ, ಕಟ್ಟಗಳ ನಿರ್ಮಾಣ ಮಾಡಿ, ಡಿಸೆಂಬರ್‌ ಅಂತ್ಯದಿಂದ ನೀರು ನಿಲ್ಲಿಸಲು ಅನುಕೂಲ ಆಗಲಿದೆ ಎಂದು ಹೇಳಿದರು.

* * 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯದ ಕುರಿತು ಪರಿಶೀಲಿಸಲು ಸಮಿತಿಯು ರಾಜ್ಯದ 30 ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿದೆ.
ಎಸ್‌.ಜಿ. ನಂಜಯ್ಯನಮಠ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT