ಶಿವಮೊಗ್ಗ

ಶ್ರೀರಾಮ ಸೇನೆ ನಿಷೇಧಕ್ಕೆ ಒತ್ತಾಯ

ಕೆಲವು ವರ್ಷಗಳಿಂದ ದತ್ತ ಮಾಲೆಯ ನೆಪದಲ್ಲಿ ಶ್ರೀರಾಮ ಸೇನೆ ಹಾಗೂ ಕೋಮುವಾದಿ ಸಂಘಟನೆಗಳ ಜತೆಯಲ್ಲಿ ಬಿಜೆಪಿ ಸೇರಿಕೊಂಡು ಬಾಬಾಬುಡನ್‌ ಗಿರಿಯಲ್ಲಿ ಶಾಂತಿಭಂಗ ಉಂಟು ಮಾಡುತ್ತಿದೆ.

ಶಿವಮೊಗ್ಗ: ಶ್ರೀರಾಮ ಸೇನೆ ಹಾಗೂ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಸದಸ್ಯರು ಸೋಮವಾರ ಪ್ರತಿಭಟಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಶ್ರೀರಾಮ ಸೇನೆ ಹಾಗೂ ಕೋಮ ವಾದಿ ಸಂಘಟನೆಗಳ ಕಾರ್ಯಕರ್ತರು ಡಿ.3ರಂದು ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯಲ್ಲಿ ದತ್ತಮಾಲೆ ಧರಿಸಿ ಪಾದುಕೆ ದರ್ಶನ ಪಡೆದಿದ್ದಾರೆ. ಇದೇ ನೆಪದಲ್ಲಿ ಕೆಲವರು ನೂರಾರು ವರ್ಷದ ಹಳೆ ಗೋರಿಗಳನ್ನು ಅಲ್ಪಸಂಖ್ಯಾತರ ಆಸ್ತಿಗಳನ್ನು ಹಾನಿಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ. ಈ ಮೂಲಕ ಎಲ್ಲ ಸಮುದಾಯದವರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದು ಹೇಳಿದರು.

ಕೆಲವು ವರ್ಷಗಳಿಂದ ದತ್ತ ಮಾಲೆಯ ನೆಪದಲ್ಲಿ ಶ್ರೀರಾಮ ಸೇನೆ ಹಾಗೂ ಕೋಮುವಾದಿ ಸಂಘಟನೆಗಳ ಜತೆಯಲ್ಲಿ ಬಿಜೆಪಿ ಸೇರಿಕೊಂಡು ಬಾಬಾಬುಡನ್‌ ಗಿರಿಯಲ್ಲಿ ಶಾಂತಿಭಂಗ ಉಂಟು ಮಾಡುತ್ತಿದೆ. ಇಂತಹ ಸಂಘಟನೆಗಳಿಂದ ಸಮಾಜದ ನೆಮ್ಮದಿ ಹಾಳಾಗುತ್ತಿದೆ. ಹಾಗಾಗಿ, ಶೀಘ್ರವೇ ಶ್ರೀರಾಮ ಸೇನೆ ಹಾಗೂ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಬೇಕು. ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆರೀಫ್ ಉಲ್ಲಾ, ನಗರ ಘಟಕದ ಅಧ್ಯಕ್ಷ ಮೊಹಮ್ಮದ್ ನಿಹಾಲ್, ಸಯ್ಯದ್ ವಾಹಿದ್, ಮಹಮ್ಮದ್ ಆಸೀಫ್, ಮಜರ್, ಆಸೀಫ್ ಮಸೂದ್, ಶೇಖ್ ಮಹಮ್ಮದ್, ಮಹಮ್ಮದ್ ಹುಸೇನ್, ಅನ್ಸರ್ ಆಹಮ್ಮದ್,
ಹೈದರ್ ಹುಸೇನ್ ಅವರೂ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಇದ್ದು ಇಲ್ಲದಂತಾಗಿರುವ ಸ್ವಾಗತ ಕಮಾನುಗಳು

ಶಿವಮೊಗ್ಗ
ಇದ್ದು ಇಲ್ಲದಂತಾಗಿರುವ ಸ್ವಾಗತ ಕಮಾನುಗಳು

23 Apr, 2018

ಶಿಕಾರಿಪುರ
ಹೆಲಿಕಾಪ್ಟರ್‌ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ರಾಜಾವತ್‌

ವಿದ್ಯಾರ್ಥಿ ಸಂಘಟನೆ ರಾಜ್ಯ ಘಟಕ ಅಧ್ಯಕ್ಷ ವಿನಯ್‌ ಕೆ.ಸಿ. ರಾಜಾವತ್‌ ಪಕ್ಷೇತರ ಅಭ್ಯರ್ಥಿಯಾಗಿ ಕಣಕಿಳಿದಿದ್ದು, ನಾಮಪತ್ರ ಸಲ್ಲಿಸಲು ಶನಿವಾರ ಬೆಂಗಳೂರಿನಿಂದ ಹೆಲಿಕಾಪ್ಟರ್‌ ಮೂಲಕ ಪಟ್ಟಣಕ್ಕೆ...

23 Apr, 2018

ಶಿವಮೊಗ್ಗ
ನಾಮಪತ್ರ ಸಲ್ಲಿಸಿದವರು; ಸಲ್ಲಿಸುವವರು

ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಹಲವು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

22 Apr, 2018

ಶಿವಮೊಗ್ಗ
ಧರ್ಮದ ಹೆಸರಿನಲ್ಲಿ ಮತಯಾಚನೆ

ಬಿಜೆಪಿಯವರಿಗೆ ಹೇಳಿ ಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲದಿರುವುದರಿಂದ ದೇವರು, ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತೀ.ನಾ.ಶ್ರೀನಿವಾಸ್‌ ವ್ಯಂಗ್ಯವಾಡಿದರು. ...

22 Apr, 2018

ಶಿವಮೊಗ್ಗ
ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ

ಕುಮಾರಸ್ವಾಮಿ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆ ಎಂದು ಜೆಡಿಎಸ್‌ ಮುಖಂಡ ಹಾಗೂ ಮೇಯರ್‌ ನಾಗರಾಜ್‌ ಕಂಕಾರಿ ಅಭಿಪ್ರಾಯಪಟ್ಟರು.

22 Apr, 2018