ಆಲಮೇಲ

ಹದಗೆಟ್ಟ ರಸ್ತೆ; ಮಕ್ಕಳು ಹೈರಾಣು

ಕಡಣಿ ಗ್ರಾಮದಲ್ಲಿ ವಾರ್ಡ್ ನಂ.1ರಲ್ಲಿನ ಅಂಗನವಾಡಿಗೆ ಹೋಗುವ ರಸ್ತೆ ಸಂಪೂರ್ಣ ನೀರು ತುಂಬಿಕೊಂಡು ಕೆಸರು ಗದ್ದೆಯಾಗಿರುವುದರಿಂದ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಆಲಮೇಲ ಸಮೀಪದ ಕಡಣಿ ಗ್ರಾಮದ ಪ್ರಮುಖ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ

ಆಲಮೇಲ: ಸಮೀಪದ ಕಡಣಿ ಗ್ರಾಮದಲ್ಲಿ ವಾರ್ಡ್ ನಂ.1ರಲ್ಲಿನ ಅಂಗನವಾಡಿಗೆ ಹೋಗುವ ರಸ್ತೆ ಸಂಪೂರ್ಣ ನೀರು ತುಂಬಿಕೊಂಡು ಕೆಸರು ಗದ್ದೆಯಾಗಿರುವುದರಿಂದ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಅಲ್ಲದೆ ಪ್ರಾಥಮಿಕ ಆರೋಗ್ಯದ ಉಪಕೇಂದ್ರವೂ ಸಹ ಇಲ್ಲಿಯೇ ಇರುವದರಿಂದ ಆಸ್ಪತ್ರೆಗೆ ಹೋಗಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಆಸ್ಪತ್ರೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಹತ್ತಿರದಲ್ಲಿಯೇ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿದ್ದು ನೀರು ಪೋಲಾಗಿ ರಸ್ತೆಯಲ್ಲಿ ತುಂಬಿಕೊಂಡು ಕೆಸರು ಗದ್ದೆಯಾಗಿ ರಸ್ತೆ ಮಾರ್ಪಾಡುತ್ತದೆ.

ಈ ಕುರಿತು ಹಲವಾರು ಸಲ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ರಸ್ತೆಯನ್ನು ಸುಧಾರಿಸಿ ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುವಂತೆ ಒತ್ತಾಯಿಸಿ ಬಸವರಾಜ ಪಡಶೆಟ್ಟಿ, ಮಲ್ಲಪ್ಪ ತಳವಾರ, ಮಾಂತಯ್ಯ ನಂದಿಕೋಲ, ನಾಗಣ್ಣ ವಡಗೇರಿ, ಭೋಗಪ್ಪ ತಾಂಬೆ, ಭೀಮರಾಯ ವಡಗೇರಿ ಸುಭಾಸ ಮಣೂರ ಮೊದಲಾದವರು ಆಗ್ರಹಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
₹ 2 ಕೋಟಿಗೂ ಹೆಚ್ಚಿನ ವಹಿವಾಟು.. ?

ವಿಜಯಪುರ
₹ 2 ಕೋಟಿಗೂ ಹೆಚ್ಚಿನ ವಹಿವಾಟು.. ?

22 Jan, 2018

ತಾಳಿಕೋಟೆ
ಯಂತ್ರಗಳ ಬಂದ ಮೇಲೆ ಸುಗ್ಗಿಯ ಸಂಭ್ರಮ ಕಣ್ಮರೆ

ರಾಶಿ ಮಾಡುವ ಯಂತ್ರಗಳು ಬಂದ ಮೇಲೆ ರೈತರ ಸುಗ್ಗಿಯ ಸಂಭ್ರಮ ಕಣ್ಮರೆಯಾಗುತ್ತಿದೆ ಎಂದು ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್.ನಾಡಗೌಡ(ಅಪ್ಪಾಜಿ) ವಿಷಾಧ ವ್ಯಕ್ತಪಡಿಸಿದರು. ...

22 Jan, 2018
ಮೈಸೂರು ಸೋಪ್‌ ಸಂತೆಗೆ ಜನಸಾಗರ!

ವಿಜಯಪುರ
ಮೈಸೂರು ಸೋಪ್‌ ಸಂತೆಗೆ ಜನಸಾಗರ!

20 Jan, 2018

ನಿಡಗುಂದಿ
ಕಲಗುರ್ಕಿಯಲ್ಲಿ ಜನಪದ ಸಂಸ್ಕೃತಿ ಉತ್ಸವ

ರಾಚಯ್ಯ ಸ್ವಾಮಿ ಹಿರೇಮಠ, ಡಾ.ವಿಶ್ವನಾಥ ಮಠ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀದೇವಿ ಐಹೊಳ್ಳಿ, ತಾಲ್ಲೂಕು ಪಂಚಾಯ್ತ ಸದಸ್ಯೆ ಲಕ್ಷ್ಮೀಬಾಯಿ ಕಸನಕ್ಕಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ...

20 Jan, 2018

ದೇವರಹಿಪ್ಪರಗಿ
ರಾಣಿ ಚನ್ನಮ್ಮ ಜಯಂತ್ತುತ್ಸವ, ಕಿತ್ತೂರು ವಿಜಯೋತ್ಸವ ಇಂದು

ಸಮೀಪದ ಮುಳಸಾವಳಗಿ ಗ್ರಾಮದಲ್ಲಿ ಜ. 20ರ ಶನಿವಾರ ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ, 194ನೇ ಕಿತ್ತೂರು ವಿಜಯೋತ್ಸವ ಹಾಗೂ ಸಂಗೊಳ್ಳಿ...

20 Jan, 2018