ಯಮಕನಮರಡಿ

ಠಾಣೆ ಪಕ್ಕ ಅಕ್ರಮ ಗಣಿಗಾರಿಕೆ

ಪೊಲೀಸ್ ಠಾಣೆಯ ಪಕ್ಕದಲ್ಲೇ ಕಲ್ಲು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದರೂ ಪೊಲೀಸರು ಮೌನರಾಗಿರುವುದು ಸಂಶಯಕ್ಕೆ ಎಡೆಯಾಗಿದೆ ಎಂದು ಬಿಜೆಪಿ ಮುಖಂಡ ಮಾರುತಿ ಅಷ್ಠಗಿ ಆರೋಪಿಸಿದರು.

ಯಮಕನಮರಡಿ: ಇಲ್ಲಿಯ ಪೊಲೀಸ್ ಠಾಣೆಯ ಪಕ್ಕದಲ್ಲೇ ಕಲ್ಲು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದರೂ ಪೊಲೀಸರು ಮೌನರಾಗಿರುವುದು ಸಂಶಯಕ್ಕೆ ಎಡೆಯಾಗಿದೆ ಎಂದು ಬಿಜೆಪಿ ಮುಖಂಡ ಮಾರುತಿ ಅಷ್ಠಗಿ ಆರೋಪಿಸಿದರು.

ಪೊಲೀಸ ಠಾಣೆಯ ಪಕ್ಕದಲ್ಲಿಯೇ ನಡೆದ ಗಣಿಗಾರಿಕೆ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಅವರು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ಗುತ್ತಿಗೆದಾರ ಈರಣ್ಣಾ ಬಿಸಿರೊಟ್ಟಿ ಅವರು ಸರ್ಕಾರಕ್ಕೆ ತೆರಿಗೆ ತುಂಬದೆ, ಕಲ್ಲು ಗಣಿಗಾರಿಕೆ ಮಾಡಲು ಮುಂದಾಗಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮಾಸ್ತಿಹೊಳಿ ರಸ್ತೆ ಕಾಮಗಾರಿಯು ಕಳಪೆ ಗುಣಮಟ್ಟದಿಂದ ನಡೆಯುತ್ತಿದ್ದರೂ, ಕ್ಷೇತ್ರದ ಶಾಸಕರು ಗಮನ ಹರಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸಹ ಇಂತಹ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈರಣ್ಣ ಹಾಲದೇವರಮಠ, ಪಾರೇಶ ಮಲಾಜಿ, ಪ್ರದೀಪ ಪತ್ತಾರ, ಕಲ್ಲಪ್ಪಾ ಕರಡಿ ಹಾಗೂ ಅಮೀತ ಕುಲಕರ್ಣಿಸಂತೋಷ ಮಲಾಜಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಲಕ್ಷ್ಮಿಗೆ ಟಿಕೆಟ್ ತಪ್ಪಿಸಲು ಯಾರಿಂದಲೂ ಆಗದು

ಬೆಳಗಾವಿ
ಲಕ್ಷ್ಮಿಗೆ ಟಿಕೆಟ್ ತಪ್ಪಿಸಲು ಯಾರಿಂದಲೂ ಆಗದು

22 Jan, 2018
ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ಬೆಳಗಾವಿ
ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

22 Jan, 2018
ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

ಬೆಳಗಾವಿ
ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

21 Jan, 2018
ಜಾಗತಿಕ ಪೈಪೋಟಿ: ಗುಣಮಟ್ಟದ ಶಿಕ್ಷಣ ಅಗತ್ಯ

ಬೆಳಗಾವಿ
ಜಾಗತಿಕ ಪೈಪೋಟಿ: ಗುಣಮಟ್ಟದ ಶಿಕ್ಷಣ ಅಗತ್ಯ

20 Jan, 2018
ಬೆಳಗಾವಿ ವಿಭಾಗಕ್ಕೂ ‘ಬಸ್‌ ಆಂಬುಲೆನ್ಸ್‌’

ಬೆಳಗಾವಿ
ಬೆಳಗಾವಿ ವಿಭಾಗಕ್ಕೂ ‘ಬಸ್‌ ಆಂಬುಲೆನ್ಸ್‌’

20 Jan, 2018