ಬಳ್ಳಾರಿ

ಮರಳು ಪೂರೈಕೆಗೆ ಕ್ರಮ ಕೈಗೊಳ್ಳಲು ಆಗ್ರಹ

‘ಕಟ್ಟಡ ಕಾರ್ಮಿಕರಿಗೆ ಇಲಾಖೆ ನೀಡುವ ವಿವಾಹ ಧನಸಹಾಯವನ್ನು ₹1 ಲಕ್ಷಕ್ಕೆ ಏರಿಸಬೇಕು. ಪಿಂಚಣಿ ವಯೋ ಮಿತಿ 60 ವರ್ಷವಿದ್ದು, ಅದನ್ನು 50ಕ್ಕೆ ಇಳಿಸಬೇಕು.

ಬಳ್ಳಾರಿ: ಮರಳು ಸುಲಭವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

‘ಮರಳು ಸಮರ್ಪಕವಾಗಿ ಸಿಗುತ್ತಿಲ್ಲ. ಹೀಗಾಗಿ ಕಟ್ಟಡ ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತಿಲ್ಲ. ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಗುಳೆ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲೆಯಲ್ಲಿ 17 ಮರಳು ಬ್ಲಾಕ್‌ಗಳಿದ್ದರೂ ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಕೂಡಲೇ ಬೇರೆ ಜಿಲ್ಲೆಗೆ ಮರುಳು ಸಾಗಣೆ ಮಾಡುವುದನ್ನು ನಿಲ್ಲಿಸಬೇಕು’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಮಾರೆಣ್ಣ ಆಗ್ರಹಿಸಿದರು.

‘ಕಟ್ಟಡ ಕಾರ್ಮಿಕರಿಗೆ ಇಲಾಖೆ ನೀಡುವ ವಿವಾಹ ಧನಸಹಾಯವನ್ನು ₹1 ಲಕ್ಷಕ್ಕೆ ಏರಿಸಬೇಕು. ಪಿಂಚಣಿ ವಯೋ ಮಿತಿ 60 ವರ್ಷವಿದ್ದು, ಅದನ್ನು 50ಕ್ಕೆ ಇಳಿಸಬೇಕು. ಕಾರ್ಮಿಕ ಮಹಿಳೆಯರಿಗೆ ಹೆರಿಗೆ ಧನಸಹಾಯ ಹೆಚ್ಚಿಸಬೇಕು. ಆರೋಗ್ಯ ಸೇವೆಗಳ ಸೌಲಭ್ಯ ನೀಡಬೇಕು. ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಶೇಖರ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಶಿವಪ್ಪ, ರಾಮಾಂಜಿನಿ, ಬಾದಾಮಿ ಶಿವಲಿಂಗ ನಾಯಕ, ಟಿ.ಎಂ.ಪಂಪಾಪತಿ, ಈ.ಜಿ.ರೆಡ್ಡಿ, ಜಿ.ಬಸವರಾಜ, ಬಿ.ರಾಮುಡು, ವಿ.ಶ್ರೀನಿವಾಸುಲು, ವಿ.ರಾಮಾಂಜಿನೇಯ, ನಾಗಭೂಷಣ. ಬಿ, ವಿ.ಈರೇಶ್, ಬಸವರಾಜ, ವೀರಪ್ಪ, ನಾಗರಾಜ, ಸಿದ್ದನಗೌಡ, ಜಿಲಾನ್‌ ಬಾಷಾ, ಹೊನ್ನೂರ್‌ ಸ್ವಾಮಿ, ಆರ್.ಹುಲುಗೇಶ್, ಕೆ.ಎರ್ರಿಸ್ವಾಮಿ ಭಾಗವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ತಾಯಣ್ಣ ಮಗನಿಗೆ ಜೆಡಿಎಸ್‌ ಟಿಕೆಟ್‌!

ಬಳ್ಳಾರಿ
ತಾಯಣ್ಣ ಮಗನಿಗೆ ಜೆಡಿಎಸ್‌ ಟಿಕೆಟ್‌!

25 Apr, 2018

ಹೂವಿನಹಡಗಲಿ
ಓದೋ ಗಂಗಪ್ಪ ಹೊತ್ತು ಬಂದ ಬೆಂಬಲಿಗರು

ಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಓದೋ ಗಂಗಪ್ಪ ಮಂಗಳವಾರ ನಾಮಪತ್ರ ಸಲ್ಲಿಸಿದರು.

25 Apr, 2018

ಕಂಪ್ಲಿ
ಮೀನುಗಾರರಿಂದ ಕಠಿಣ ಹರಕೆ ಸಮರ್ಪಣೆ

ಕಂಪ್ಲಿ ಕೋಟೆ ತುಂಗಭದ್ರಾದೇವಿ ಮೀನುಗಾರರ ಕಾಲೊನಿ ಕಾಳಮ್ಮದೇವಿ ಗಂಗಾಸ್ಥಳ ಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಮೀನುಗಾರರು ವಿಶಿಷ್ಟ ಹರಕೆಗಳನ್ನು ಭಕ್ತಿ ಭಾವದಿಂದ ತೀರಿಸಿದರು.

25 Apr, 2018
ರಾಜಕಾರಣದಿಂದ ದೂರವಾಗಿದ್ದ ರಾಜಕುಮಾರ

ಬಳ್ಳಾರಿ
ರಾಜಕಾರಣದಿಂದ ದೂರವಾಗಿದ್ದ ರಾಜಕುಮಾರ

25 Apr, 2018

ಬಳ್ಳಾರಿ
‘ಪ್ಲಾಸ್ಟಿಕ್‌ ಹಾವಳಿ: ಶೀಘ್ರ ಕ್ರಮ’

ಬಳ್ಳಾರಿಯಲ್ಲಿ ಮಿತಿ ಮೀರಿದ ಪ್ಲಾಸ್ಟಿಕ್‌ ಕಸ ಕಂಡುಬರುತ್ತಿದ್ದು,ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಅರಣ್ಯಸಂರಕ್ಷಣಾಧಿಕಾರಿ ಡಾ.ಪಿ.ರಮೇಶಕುಮಾರ...

24 Apr, 2018