ಬಾಲಿವುಡ್‌

ಮತ್ತೆ ಧಕ್‌ ಧಕ್‌ ಧಮಾಲ್‌

‘ಧಮಾಲ್‌’ ಚಿತ್ರದಲ್ಲಿ ಮತ್ತೆ ಮಾಧುರಿ ಅನಿಲ್‌ ಜೋಡಿ ಮೋಡಿ ಮಾಡಲಿದೆ. ತಾರಾಗಣದಲ್ಲಿ ಅಜಯ್‌ ದೇವಗನ್‌, ರಿತೇಶ್‌ ದೇಶಮುಖ್‌, ಅರ್ಷದ್‌ ವರ್ಸಿ, ಜಾವೇದ್‌ ಜಾಫ್ರಿ ಸಹ ಇದ್ದಾರೆ...

ಮಾಧುರಿ ದೀಕ್ಷಿತ್‌

ಧಕ್‌ ಧಕ್‌ ಸುಂದರಿ ಮಾಧುರಿ ದೀಕ್ಷಿತ್‌ ಮತ್ತು ನಟ ಅನಿಲ್‌ ಕಪೂರ್‌ ‘ಧಮಾಲ್‌’ ಚಿತ್ರದ ಮೂಲಕ ಮತ್ತೆ ಜೊತೆಯಾಗುತ್ತಿದ್ದಾರೆ. ಈ ಜೋಡಿ 2000ದಲ್ಲಿ ತೆರೆ ಕಂಡ ‘ಪುಕಾರ್‌’ ಚಿತ್ರದಲ್ಲಿ ಇವರು ಒಟ್ಟಿಗೆ ನಟಿಸಿದ್ದೇ ಕೊನೆಯಾಗಿತ್ತು.

ಈ ಚಿತ್ರಕ್ಕೂ ಮೊದಲು, ಏಕ್‌ ದೊ ತೀನ್‌ ಖ್ಯಾತಿಯ ‘ತೇಜಾಬ್‌’, ಧಕ್‌ ಧಕ್‌ ಕರನೆ ಲಗಾ ಹಾಡಿನ ‘ಬೇಟಾ’, ಕೇ ಸೆರಾ ಸೆರಾ ಖ್ಯಾತಿಯ ‘ಪುಕಾರ್‌’ ಮತ್ತು ‘ಪರಿಂದಾ’ ಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು.

‘ಧಮಾಲ್‌’ ಚಿತ್ರದಲ್ಲಿ ಮತ್ತೆ ಮಾಧುರಿ ಅನಿಲ್‌ ಜೋಡಿ ಮೋಡಿ ಮಾಡಲಿದೆ. ತಾರಾಗಣದಲ್ಲಿ ಅಜಯ್‌ ದೇವಗನ್‌, ರಿತೇಶ್‌ ದೇಶಮುಖ್‌, ಅರ್ಷದ್‌ ವರ್ಸಿ, ಜಾವೇದ್‌ ಜಾಫ್ರಿ ಸಹ ಇದ್ದಾರೆ.

‘ಅನಿಲ್‌ ಜಿ ಜೊತೆಗೆ ಹದಿನೇಳು ವರ್ಷಗಳ ನಂತರ ನಟಿಸುತ್ತಿರುವೆ. ಇದು ಸಂಪೂರ್ಣವಾಗಿ ಮನರಂಜನೆ ನೀಡುವ ಕಾಮಿಡಿ ಚಿತ್ರ. ನಾನೂ ಇದರ ಭಾಗವಾಗಿರುವುದು ಸಹಜವಾಗಿಯೇ ಸಂತೋಷ ತಂದಿದೆ’ ಎನ್ನುವುದು ಮಾಧುರಿ ಉಲಿ.

ಮದುವೆಯ ನಂತರ ಅವರು ಅಮೆರಿಕದಲ್ಲಿಯೇ ವಾಸವಾಗಿದ್ದ ಅವರು, ಒಂದು ದಶಕದ ನಂತರ (2011ರಲ್ಲಿ) ಭಾರತಕ್ಕೆ ಮರಳಿದರು. ‘ಯೇ ಜವಾನಿ ಹೈ ದಿವಾನಿ’ ಚಿತ್ರದಲ್ಲಿ ರಣಬೀರ್‌ ಕಪೂರ್‌ ಜೊತೆಗೆ ಹೆಜ್ಜೆ ಹಾಕಿದ್ದರು. ’ದೇಢ್‌ ಇಷ್ಕಿಯಾಂ’ ಚಿತ್ರದಲ್ಲಿ ನಾಸಿರುದ್ದಿನ್‌ ಶಾ ಜೊತೆಗೆ ನಟಿಸಿ ಸುದ್ದಿ ಮಾಡಿದ್ದರು.

ಇದೀಗ ಅನಿಲ್‌ ಕಪೂರ್‌ ಜೊತೆಗೆ 17 ವರ್ಷಗಳ ನಂತರ ನಟಿಸುತ್ತಿರುವುದು ವಿಶೇಷ ಎನಿಸಿದೆ.

Comments
ಈ ವಿಭಾಗದಿಂದ ಇನ್ನಷ್ಟು
‘ರಾಜು ಕನ್ನಡ ಮೀಡಿಯಂ’ಗೆ ಯಶಸ್ಸಿನ ಖುಷಿ

ಸಿನಿಮಾ
‘ರಾಜು ಕನ್ನಡ ಮೀಡಿಯಂ’ಗೆ ಯಶಸ್ಸಿನ ಖುಷಿ

23 Jan, 2018
ಇರ್ಫಾನ್‌ ಖಾನ್‌ಗೆ ‘ಅತ್ಯುತ್ತಮ ನಟ’ ಪ್ರಶಸ್ತಿ: ಇರ್ಫಾನ್‌ ಪಠಾಣ್‌ಗೆ ಶುಭ ಕೋರಿದ ಫೆಮಿನಾ ಇಂಡಿಯಾ

ಟ್ವಿಟರ್‌ನಲ್ಲಿ ಯಡವಟ್ಟು
ಇರ್ಫಾನ್‌ ಖಾನ್‌ಗೆ ‘ಅತ್ಯುತ್ತಮ ನಟ’ ಪ್ರಶಸ್ತಿ: ಇರ್ಫಾನ್‌ ಪಠಾಣ್‌ಗೆ ಶುಭ ಕೋರಿದ ಫೆಮಿನಾ ಇಂಡಿಯಾ

22 Jan, 2018
ಕನ್ನಡ ಚಿತ್ರ ನಿರ್ಮಾಪಕ ನವೀನ್‌ ಜತೆಗೆ ಮಲಯಾಳಂ ನಟಿ ಭಾವನಾ ವಿವಾಹ

ತ್ರಿಶ್ಶೂರ್‌
ಕನ್ನಡ ಚಿತ್ರ ನಿರ್ಮಾಪಕ ನವೀನ್‌ ಜತೆಗೆ ಮಲಯಾಳಂ ನಟಿ ಭಾವನಾ ವಿವಾಹ

22 Jan, 2018
ನಿರ್ಮಾಪಕರು ನನ್ನನ್ನು ಹಂಚಿಕೊಳ್ಳಲು ಬಯಸಿದ್ದರು: ನಟಿ ಶ್ರುತಿ ಹರಿಹರನ್

‘ಕ್ಯಾಸ್ಟಿಂಗ್ ಕೌಚ್’
ನಿರ್ಮಾಪಕರು ನನ್ನನ್ನು ಹಂಚಿಕೊಳ್ಳಲು ಬಯಸಿದ್ದರು: ನಟಿ ಶ್ರುತಿ ಹರಿಹರನ್

21 Jan, 2018
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

ಚರ್ಚಾ ಕಾರ್ಯಕ್ರಮ
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

19 Jan, 2018