ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸು–ದೇಹದ ಮಧುರ ಬಂಧನ

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನುಷ್ಯನ ಮನಸ್ಸು ನಿರ್ಮಲವಾಗಿದ್ದರೆ, ದೇಹವೂ ನಿರ್ಮಲವಾಗಿರುತ್ತದೆ. ಮನುಷ್ಯನ ಮನಸ್ಸು ಹಾಗೂ ದೇಹದ ನಡುವೆ ಒಂದು ಕೊಂಡಿ ಇದೆ. ಆ ಕೊಂಡಿಯನ್ನು ಎಂದಿಗೂ ತುಂಡರಿಸಲು ಬಿಡಬಾರದು. ಮನಸ್ಸನ್ನು ಸಿಟ್ಟು, ದ್ವೇಷ, ಹೊಟ್ಟೆಕಿಚ್ಚಿನಂತಹ ಕಲ್ಮಶ ತುಂಬಿದ ಕಸದ ತೊಟ್ಟಿ ಎಂದುಕೊಂಡು ಬದುಕುಬಾರದು. ಅದನ್ನು ಎಂದರೆ ಸುಂದರವಾದ ಹಾಗೂ ಬೆಲೆಬಾಳುವ ಆಭರಣಗಳನ್ನು ತುಂಬಿಕೊಳ್ಳುವ ಆಭರಣದ ಡಬ್ಬಿ ಎಂದುಕೊಳ್ಳಬೇಕು. ಅದರಲ್ಲಿ ಯಾವಾಗಲೂ ಪ್ರೀತಿ, ಆತ್ಮೀಯತೆ, ಸ್ವೀಕಾರ ಮನೋಭಾವ, ಶಾಂತಿ ಹಾಗೂ ಸೌಹಾರ್ದವೆಂಬ ಆಭರಣಗಳನ್ನು ತುಂಬಿಸಿ ಇಡಬೇಕು.

ಹತ್ತನೇ ಶತಮಾನದಲ್ಲಿ ತನ್ನ ಬುದ್ಧಿವಂತಿಕೆಯಿಂದ ಹೆಸರು ಗಳಿಸಿದ್ದ ಇಸ್ರೇಲ್‌ನ ರಾಜ ಸೋಲೊಮನ್ ‘ನಿಮ್ಮ ಆತ್ಮವೂ ನಿಮ್ಮ ದಯೆ ಹಾಗೂ ಕರುಣೆಯಿಂದಲೇ ನಿಮ್ಮನ್ನು ಪೋಷಿಸುತ್ತದೆ’ ಎನ್ನುತ್ತಾನೆ. ‘ನಮ್ಮ ಮೊದಲ ಹೆಜ್ಜೆಯನ್ನು ಒಳ್ಳೆಯ ಆಲೋಚನೆಯಿಂದ ಪ್ರಾರಂಭಿಸಬೇಕು, ಎರಡನೆಯದ್ದು ಒಳ್ಳೆಯ ಮಾತು. ಮೂರನೆಯದ್ದು ಕರಾರು ಪತ್ರ, ಹೀಗೆ ನಾನು ಸ್ವರ್ಗಕ್ಕೆ ಪ್ರವೇಶಿಸಿದೆ’ ಎನ್ನುತ್ತಾರೆ ಹಿರಿಯರೊಬ್ಬರು. ಇವರೆಲ್ಲರೂ ಹೇಳುವಂತೆ ಮನುಷ್ಯನ ದಯೆಯೇ ಬದುಕನ್ನು ಸುಂದರವಾಗಿಸುವುದು.

ಯಾವಾಗ ಮನಸ್ಸು ಭಯದಿಂದ ಬೇಸರಗೊಳ್ಳುತ್ತದೋ, ಆಗ ದೇಹದಲ್ಲಿನ ಜೀವಕೋಶಗಳೆಲ್ಲವೂ ನಡುಗಲು ಶುರುವಿಟ್ಟುಕೊಳ್ಳುತ್ತವೆ. ಈ ಭಯವೇ ಮನುಷ್ಯನ ದೇಹದೊಳಗೆ ಕಾಯಿಲೆಯ ಬಾಗಿಲನ್ನು ತೆರೆದುಕೊಳ್ಳುವಂತೆ ಮಾಡುತ್ತದೆ. ಇದೇ ರೀತಿ ಜುಗುಪ್ಸೆ, ಭಯ, ದ್ವೇಷ, ಹೊಟ್ಟೆಕಿಚ್ಚುಗಳು ಕಾಯಿಲೆಗೆ ಬೆಂಬಲ ನೀಡುತ್ತವೆ.

ಅಂತೆಯೇ ಋಣಾತ್ಮಕ ಭಾವನೆಗಳು ಮನಸ್ಸಿನ ಸಮತೋಲನವನ್ನು ಹಾಳು ಮಾಡುತ್ತವೆ. ನಿನ್ನೆ ಖುಷಿಯಿಂದ ನಗುನಗುತ್ತಾ ಎಲ್ಲಾ ಕಡೆ ಸುತ್ತಾಡಿಕೊಂಡಿದ್ದ ವ್ಯಕ್ತಿ ಇಂದು ಒಮ್ಮಿಂದೊಮ್ಮೆಲೆ ಕಾಯಿಲೆಯಿಂದಾಗಿ ಹಾಸಿಗೆ ಹಿಡಿಯುತ್ತಾನೆ. ಭಯ ಮತ್ತು ಜುಗುಪ್ಸೆ ಜೀವಕೋಶಗಳನ್ನು ಬಿಗಿಗೊಳಿಸಿ, ಜೀವಕೋಶಗಳ ಚೈತನ್ಯವನ್ನು ಹಿಮ್ಮೆಟ್ಟುವಂತೆ ಮಾಡುತ್ತದೆ. ದೇಹದ ನೋವಿಗೆ ಮನಸ್ಸು ತಲ್ಲಣಗೊಳ್ಳುತ್ತದೆ.

ಸಿಟ್ಟು ಬಂದಾಗ ಜೀವಕೋಶಗಳು ಬಿಗಿಗೊಳ್ಳುತ್ತವೆ. ಆಗ ನಮಗೇ ತಿಳಿಯದಂತೆ ನಮ್ಮ ಮುಷ್ಟಿಯೂ ಬಿಗಿಯಾಗುತ್ತದೆ. ಇದು ರಕ್ತದ ಹರಿವನ್ನು ಕುಂಠಿತಗೊಳಿಸುತ್ತದೆ. ಅದು ರಕ್ತದದೊತ್ತಡ, ಸ್ಟ್ರೋಕ್, ಹೃದಯಸಂಬಂಧಿ ಕಾಯಿಲೆ, ಜ್ವರ ಮುಂತಾದ ತೊಂದರೆಗಳಿಗೆ ಕಾರಣವಾಗುತ್ತದೆ. ಹೀಗೆ ಮನಸ್ಸಿಗೆ ನಾವು ಒತ್ತಡ ನೀಡಿದಷ್ಟು ದೈಹಿಕ ಕಾಯಿಲೆಗಳು ವೃದ್ಧಿಯಾಗುತ್ತವೆ.

ಹೊಟ್ಟೆಕಿಟ್ಟು ಮತ್ತು ದ್ವೇಷದಿಂದ ಮಾನಸಿಕ ಕ್ಷೋಭೆ ಉಂಟಾಗಬಹುದು. ಇದು ದೇಹದ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಬೀರಬಹುದು. ಗೊಂದಲ, ಕತ್ತಲು, ನನ್ನ ಮುಂದೆ ಏನು ಇಲ್ಲ ಎಂಬ ಭಾವನೆ ಬೆಳೆಯುವಂತಹ ಕೆಟ್ಟ ಪರಿಣಾಮಗಳು ಇದರಿಂದ ಉಂಟಾಗಬಹುದು. ಅದು ಹೇಗೆಂದರೆ ಗಾಢ ಕತ್ತಲಿನಿಂದ ಕೂಡಿದ ನೀರಿನಲ್ಲಿ ಉಸಿರಾಡಲು ಕಷ್ಟಪಟ್ಟು ಈಜಿದಂತೆ. ಅದು ಮನಸ್ಸಿನ ಸುತ್ತಲೂ ಕೆಡುಕನ್ನೇ ಸುತ್ತಿಕೊಂಡು ನೀರಿಗೆ ಹಾರಿದಂತೆ. ಇದರಿಂದ ತೊಂದರೆ ಅನುಭವಿಸುವವರು ನಾವೇ. ಅದರೊಂದಿಗೆ ಉಸಿರಾಟದ ಸಮಸ್ಯೆಯಿಂದ ಅಸ್ತಮಾ, ಶ್ವಾಸಕೋಶ ಮತ್ತು ಗಂಟಲು ಸೋಂಕುಗಳಿಗೂ ಕಾರಣವಾಗಬಹುದು.

ಹೀಗೆ ನಮ್ಮೊಳಗೆ ಕೆಟ್ಟದ್ದನ್ನು ಪ್ರೇರೇಪಿಸುವ ಋಣಾತ್ಮಕ ಭಾವನೆಗಳು ನಮ್ಮ ಮನಸ್ಸನ್ನು ಹಾಳು ಮಾಡುತ್ತಿವೆ ಎಂದು ನಮಗೆ ಅನ್ನಿಸಿದಾಗ ನಾವು ಸ್ವಯಂಪ್ರೇರಿತರಾಗಿ ಒಳ್ಳೆಯತನದ ಕಡೆಗೆ ಹೆಜ್ಜೆ ಇರಿಸಬೇಕು. ಅದರ ಜೊತೆಗೆ ಶಿಫಾರಸ್ಸು ಮಾಡಿದ ಔಷಧಗಳನ್ನು ತೆಗೆದುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಅದರ ಜೊತೆಗೆ ನಮ್ಮ ಮನಸ್ಸಿಗೆ ಇಷ್ಟವಾಗುವ ಕಡೆಗೆ ಪಯಣ ಬೆಳೆಸಬೇಕು. ಜೊತೆಗೆ ಮನಸ್ಸು ಮತ್ತು ದೇಹಕ್ಕೆ ಸಭ್ಯವಾಗಿ ಹೇಳಿ ‘ಇವೆಲ್ಲ ಆಗಿರುವುದಕ್ಕೆ ನನ್ನನ್ನು ಕ್ಷಮಿಸಿಬಿಡಿ.

ಇಂದಿನಿಂದ ನಾನು ನಿಮ್ಮಿಬ್ಬರಿಗೂ ಯಾವುದೇ ರೀತಿ ಕೆಟ್ಟದ್ದಾಗದಂತೆ ನೋಡಿಕೊಳ್ಳುತ್ತೇನೆ’ ಎನ್ನಿ. ಮತ್ತೆ ಭರವಸೆ ತುಂಬುವುದೇ ಮನಸ್ಸು ಮತ್ತು ದೇಹಕ್ಕೆ ನೀವು ನೀಡುವ ಉತ್ತಮ ವೈದ್ಯಕೀಯ ಚಿಕಿತ್ಸೆ. ನೀವು ನಿಮ್ಮೊಳಗೆ ಹೀಗೆ ಅಂದುಕೊಂಡಾಗ ಸುಂದರವಾದ ಒಂದು ಕಂಪನ ಮನದೊಳಗೆ ಹುಟ್ಟಿಕೊಳ್ಳುತ್ತದೆ. ಮಹತ್ವಾಕಾಂಕ್ಷೆ ಎನ್ನುವುದು ಎಲ್ಲಾ ಸಂದರ್ಭದಲ್ಲೂ, ಪರಿಸ್ಥಿತಿಯಲ್ಲೂ ಮತ್ತು ಎಲ್ಲಾ ಮನುಷ್ಯರಲ್ಲೂ ಉತ್ತಮವಾದ ಪ್ರತಿಕ್ರಿಯೆಯನ್ನೇ ತೋರುತ್ತದೆ.

ಯಾವಾಗ ಮಹತ್ವಾಕಾಂಕ್ಷೆ ದೃಢವಾಗಿರುತ್ತದೋ ಆಗ ನೀವು ಧನಾತ್ಮಕ ಯೋಚನೆಗಳಿಂದ ನಿಮ್ಮ ಹೆಜ್ಜೆಯನ್ನು ಹಿಂದೆ ಸರಿಸಿಕೊಳ್ಳಬಹುದು. ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಸಾಹಸವೇ. ಅದಕ್ಕಾಗಿ ಯಾವಾಗಲೂ ಮನಸ್ಸನ್ನು ಶಾಂತವಾಗಿಸಿ, ವಿಶ್ರಾಂತಿಯಿಂದ, ಸಮತೋಲನದಿಂದ ಇರಿಸಿಕೊಳ್ಳಬೇಕು. ಧನಾತ್ಮಕ ಯೋಚನೆಗಳ ಮೇಲೆ ಋಣಾತ್ಮಕ ಯೋಚನೆಗಳು ದಾಳಿ ಇಡದಂತೆ ನೋಡಿಕೊಳ್ಳಬೇಕು. ಯಾವಾಗಲೂ ಧನಾತ್ಮಕ ಯೋಚನೆಗಳ ಬಗ್ಗೆ ಬರೆದ ಪುಸ್ತಕಗಳನ್ನು ಓದಿ. ಅದನ್ನು ಇತರರೊಂದಿಗೆ ಹಂಚಿಕೊಳ್ಳಿ. ಇತರರನ್ನು ನೋಯಿಸಬೇಡಿ. ಅವರಿಗೆ ಸಹಾಯ ಮಾಡಿ.

ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೂ ತೊಂದರೆಯಿಲ್ಲ; ಇನ್ನೊಬ್ಬರನ್ನು ನೋಯಿಸಬೇಡಿ. ಸದಾ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು, ಬೇರೆಯವರನ್ನು ಹೀಯಾಳಿಸುವುದನ್ನು ನಿಲ್ಲಿಸಿ. ನಿಮ್ಮ ದೇಹದಲ್ಲಿರುವ ಪ್ರತಿ ಅಂಗಾಂಶಗಳು ನಿಮ್ಮ ಗೂಬೆ ಕೂರಿಸುವ ಹಾಗೂ ನೋಯಿಸುವ ಮನೋಭಾವವನ್ನು ಬೇರೆ ಅಂಗಾಂಶಗಳಿಗೆ ವರ್ಗಾಯಿಸುತ್ತದೆ. ಆಗ ಹಾರ್ಮೋನುಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ, ಯಾವಾಗ ಪ್ರತಿ ಅಂಗಾಂಶವೂ ಬೇರೆ ಅಂಗಾಂಶಗಳಿಗೆ ಎಚ್ಚರಿಕೆ ನೀಡಿದಾಗ ದೇಹ ದೌರ್ಬಲ್ಯಗೊಳ್ಳುವ ಜೊತೆಗೆ ಕಾಯಿಲೆಗಳ ಗೂಡಾಗುತ್ತದೆ. 

**

ಸಿಟ್ಟು ಬಂದಾಗ ಜೀವಕೋಶಗಳು ಬಿಗಿಗೊಳ್ಳುತ್ತದೆ. ಆಗ ನಮಗೇ ತಿಳಿಯದಂತೆ ನಮ್ಮ ಮುಷ್ಟಿಯೂ ಬಿಗಿಯಾಗುತ್ತದೆ. ಇದು ರಕ್ತದ ಹರಿವನ್ನು ಕುಂಠಿತಗೊಳಿಸುತ್ತದೆ. ಅದು ರಕ್ತದದೊತ್ತಡ, ಸ್ಟ್ರೋಕ್, ಹೃದಯಸಂಬಂಧಿ ಕಾಯಿಲೆ, ಜ್ವರ ಮುಂತಾದ ತೊಂದರೆಗಳಿಗೆ ಕಾರಣವಾಗುತ್ತದೆ. ಹೀಗೆ ಮನಸ್ಸಿಗೆ ನಾವು ಒತ್ತಡ ನೀಡಿದಷ್ಟು ದೈಹಿಕ ಕಾಯಿಲೆಗಳು ವೃದ್ಧಿಯಾಗುತ್ತವೆ.

**

ಇತರರನ್ನು ನೋಯಿಸಬೇಡಿ. ಅವರಿಗೆ ಸಹಾಯ ಮಾಡಿ. ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೂ ತೊಂದರೆಯಿಲ್ಲ; ಇನ್ನೊಬ್ಬರನ್ನು ನೋಯಿಸಬೇಡಿ. ಸದಾ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು, ಬೇರೆಯವರನ್ನು ಹೀಯಾಳಿಸುವುದನ್ನು ನಿಲ್ಲಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT