ನರಸಿಂಹರಾಜಪುರ

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಚ್ಐವಿ ಅರಿವು ಮೂಡಿಸಿ

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಏಡ್ಸ್ ಬಗ್ಗೆ ಅರಿವು ಮೂಡಿಸಲು ಸಮಾಜದ ಜನರು ಕೈಜೋಡಿಸಬೇಕು

ನರಸಿಂಹರಾಜಪುರ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಏಡ್ಸ್ ಬಗ್ಗೆ ಅರಿವು ಮೂಡಿಸಲು ಸಮಾಜದ ಜನರು ಕೈಜೋಡಿಸಬೇಕು ಎಂದು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕಿ ಆರ್.ಸುಮಂಗಲಾ ತಿಳಿಸಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಶುಕ್ರವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2002ರಿಂದ ಅಕ್ಟೋಬರ್ 2017 ರವರೆಗೆ ರಾಜ್ಯದಲ್ಲಿ ಎಚ್.ಐ.ವಿ ಸೋಂಕಿತರು 3,59,821 ಇದ್ದಾರೆ. ದೇಶದಲ್ಲಿ ಎಚ್‌ಐವಿ ಭಾದಿತರಲ್ಲಿ ರಾಜ್ಯ 8ನೇ ಸ್ಥಾನದಲ್ಲಿದ್ದು, 1,48,545 ಮಂದಿ ಎ.ಆರ್.ಟಿ ಪಡೆದು ಬದುಕುತ್ತಿದ್ದಾರೆ.

ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಲ್ದೋಸ್ ಟಿ ವರ್ಗೀಸ್  ಎಚ್.ಐ.ವಿ, ಏಡ್ಸ್ ನ ಇತಿಹಾಸ, ಮೂಲ ಮಾಹಿತಿ ಎಚ್.ಐ.ವಿ ಯ ಬಗ್ಗೆ ಸಮಾಜದಲ್ಲಿರುವ ಅಪನಂಬಿಕೆಗಳ ಬಗ್ಗೆ ದೃಶ್ಯ ಮಾಧ್ಯಮದ ಮೂಲಕ ವಿವರಿಸಿದರು.

ಶಿವಮೊಗ್ಗದ ಹಿರಿಯ ಆರೋಗ್ಯ ನಿರೀಕ್ಷಕ ಎಂ.ಪಿ ವರ್ಗೀಸ್ ಮಾತನಾಡಿ, ಎಚ್.ಐ.ವಿ ಸೋಂಕಿತರಿಗೆ ಸಮಾಜದಲ್ಲಿ ಉಂಟಾಗುವ ಕಳಂಕ, ತಾರತಮ್ಯದ ಬಗ್ಗೆ, ಪೋಷಕರಿಂದ ಮಕ್ಕಳಿಗೆ ಹರಡುವ ಸೋಂಕಿನ ಬಗ್ಗೆ, ಎಚ್.ಐ.ವಿ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ವೈ.ಎಂ.ಲಲಿತಾ , ಪಿ.ಪಿ.ಬೇಬಿ, ಪ್ರಯೋಗಶಾಲಾ ತಂತ್ರಜ್ಞ ಪ್ರಶಾಂತಕುಮಾರ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಕಿರಣ್ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷ ಪ್ರಭಾಕರ್, ನಾಗಲತಾ, ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಪುಷ್ಪ ನರ್ಸಿಂಗ್ ಶಾಲೆಯ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

ಎಚ್.ಐ.ವಿ ಸೋಂಕಿತರಿಗೆ, ಕ್ಷಯರೋಗಿಗಳಿಗೆ, ನಿರ್ಗತಿಕರಿಗೆ , ಬಡಮಕ್ಕಳಿಗೆ, ಮದ್ಯವ್ಯಸನಿಗಳಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸೋಷಿಯಲ್ ವೆಲ್‌ಫೇರ್‌ ಸೊಸೈಟಿಯ ಸಿಸ್ಟರ್ ಚಾರ್ಲ್ಸ್ ಅವರನ್ನು ರೋಟರಿ ಸಂಸ್ಥೆಯಿಂದ ಅಧ್ಯಕ್ಷ ಕೆ.ವಿ.ವಸಂತ್ ಕುಮಾರ್ ಸನ್ಮಾನಿಸಿದರು.

ಅಂಕಿ ಅಂಶ

ಜಿಲ್ಲೆಯಲ್ಲಿ 4.33 ಲಕ್ಷ ಮಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ.

5947 ಎಚ್‌ಐವಿ ಸೋಂಕಿರು

1945 ಜನ ಎ.ಆರ್.ಟಿ ಚಿಕಿತ್ಸೆ ಪಡೆಯುತ್ತಿರುವವರು ಎನ್.ಆರ್‌.ಪುರ ತಾಲ್ಲೂಕು

4,553 ಎಚ್.ಐ.ವಿ ಪರೀಕ್ಷೆಗೆ ಒಳಗಾದ ಪುರುಷರು

5,328 ಮಹಿಳೆಯರು ಪರೀಕ್ಷೆಗೆ ಒಳಗಾದವರು

109 ಜನ ಸೋಂಕಿತರು

11 ಸೋಂಕಿತ ಗರ್ಭೀಣಿಯರು

Comments
ಈ ವಿಭಾಗದಿಂದ ಇನ್ನಷ್ಟು

ಬಾಳೆಹೊನ್ನೂರು
ಕಾಂಗ್ರೆಸ್‌ನಿಂದ ಬಡವರ ಪರ ಯೋಜನೆ ಜಾರಿ

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರು, ನಿರ್ಗತಿಕರು, ಕೃಷಿಕರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಜನತೆ ಅದನ್ನು ಗುರುತಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿ ದ್ದಾರೆ’...

24 Apr, 2018
ಸಮಯ ಪ್ರಜ್ಞೆ ಮೆರೆದ ಅರಣ್ಯ ಸಿಬ್ಬಂದಿ

ಚಿಕ್ಕಮಗಳೂರು
ಸಮಯ ಪ್ರಜ್ಞೆ ಮೆರೆದ ಅರಣ್ಯ ಸಿಬ್ಬಂದಿ

24 Apr, 2018

ಚಿಕ್ಕಮಗಳೂರು
ಋಣ ತೀರಿಸಲು ಅವಕಾಶ ನೀಡಿ

‘ಅಭಿವೃದ್ಧಿಯನ್ನೇ ಕಾರ್ಯಸೂಚಿಯಾಗಿಟ್ಟುಕೊಂಡು ಈ ಬಾರಿ ಚುನಾವಣೆ ಎದುರಿಸುತ್ತಿದ್ದೇವೆ. ಜಿಲ್ಲೆಯ ಋಣ ತೀರಿಸುವ ಸಂಕಲ್ಪ ಮಾಡಿದ್ದು, ಅದಕ್ಕೆ ಅವಕಾಶ ನೀಡಿ’ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ...

24 Apr, 2018

ಚಿಕ್ಕಮಗಳೂರು
6 ಮಂದಿಯಿಂದ 11 ನಾಮಪತ್ರ ಸಲ್ಲಿಕೆ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಕಾಂಗ್ರೆಸ್‌ನ ಬಿ.ಎಲ್‌.ಶಂಕರ್‌ ಅವರು ನಾಲ್ಕು, ಜೆಡಿಎಸ್‌ನ ಬಿ.ಎಚ್‌.ಹರೀಶ್‌ ಅವರು ಮೂರು, ಪಕ್ಷೇತರ ಎರಡು, ಶಿವಸೇನೆಯ ಬಿ.ವಿ.ರಂಜಿತ್‌, ಎಂಇಪಿಯ ನೂರುಲ್ಲಾಖಾನ್‌...

24 Apr, 2018
ಜೆಡಿಎಸ್‌ ಗೆಲುವಿಗೆ ಶ್ರಮಿಸಿ: ಧರ್ಮೇಗೌಡ

ಚಿಕ್ಕಮಗಳೂರು
ಜೆಡಿಎಸ್‌ ಗೆಲುವಿಗೆ ಶ್ರಮಿಸಿ: ಧರ್ಮೇಗೌಡ

24 Apr, 2018