ಮೂಡಿಗೆರೆ

ಮೂಡಿಗೆರೆಯಲ್ಲಿ ಹುಲಿ ಪತ್ತೆ

15 ದಿನಗಳಿಂದ ಬೀಡು ಬಿಟ್ಟಿರುವ ಹುಲಿ, 8 ದಿನಗಳ ಹಿಂದೆ ಉದುಸೆ ಗ್ರಾಮದ ಮಂಜೇಗೌಡ ಅವರ ದನ ಹಾಗೂ ಯು.ಬಿ. ನಾಗೇಶ್‌ ಅವರ ಎರಡು ದನಗಳನ್ನು ಕೊಂದುಹಾಕಿತ್ತು.

ರವಿ ಎಂಬುವವರ ತೋಟದಲ್ಲಿ ಕಾಣಿಸಿಕೊಂಡ ಹುಲಿ

ಮೂಡಿಗೆರೆ: ತಾಲ್ಲೂಕಿನ ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದುಸೆ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಹುಲಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

15 ದಿನಗಳಿಂದ ಬೀಡು ಬಿಟ್ಟಿರುವ ಹುಲಿ, 8 ದಿನಗಳ ಹಿಂದೆ ಉದುಸೆ ಗ್ರಾಮದ ಮಂಜೇಗೌಡ ಅವರ ದನ ಹಾಗೂ ಯು.ಬಿ. ನಾಗೇಶ್‌ ಅವರ ಎರಡು ದನಗಳನ್ನು ಕೊಂದುಹಾಕಿತ್ತು. ಜನರಿಂದ ಒತ್ತಡ ಬಂದ ಮೇರೆಗೆ ಅರಣ್ಯ ಇಲಾಖೆ ಆಯಕಟ್ಟಿನ ಪ್ರದೇಶಗಳಲ್ಲಿ ನಾಲ್ಕು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿತ್ತು.

ಗ್ರಾಮದ ರವಿ ಅವರ ಕಾಫಿ ತೋಟದಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೋಮವಾರ ತಡ ರಾತ್ರಿ 4 ವರ್ಷ ಪ್ರಾಯದ ಹುಲಿ ಕಾಣಿಸಿಕೊಂಡಿದೆ. ರಾತ್ರಿ 9.25ಕ್ಕೆ ಕಾಫಿ ತೋಟದಲ್ಲಿರುವ ಪೊಟರೆಗೆ ಮಾಂಸದ ತುಂಡೊಂದನ್ನು ತಂದು ಇರಿಸಿಕೊಂಡಿರುವ 156 ಛಾಯಾಚಿತ್ರಗಳನ್ನು ಸಿಸಿ ಕ್ಯಾಮೆರಾ ಸೆರೆ ಹಿಡಿದಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಕಡೂರಿನಲ್ಲಿ ಕೃಷಿ ಚಟುವಟಿಕೆ ಚುರುಕು

ಚಿಕ್ಕಮಂಗಳೂರು
ಕಡೂರಿನಲ್ಲಿ ಕೃಷಿ ಚಟುವಟಿಕೆ ಚುರುಕು

22 Apr, 2018
ಸಿರಿಮನೆ ಜಲಪಾತದ ಸೊಬಗು

ಚಿಕ್ಕಮಗಳೂರು
ಸಿರಿಮನೆ ಜಲಪಾತದ ಸೊಬಗು

22 Apr, 2018

ಚಿಕ್ಕಮಗಳೂರು
ನಾಳೆ ಹಲವು ಅಭ್ಯರ್ಥಿಗಳಿಂದ ನಾಮಪತ್ರ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳು ಇದೇ 23ರಂದು ನಾಮಪತ್ರ ಸಲ್ಲಿಸುವರು ಎಂದು ಪಕ್ಷದ ಜಿಲ್ಲಾ ಘಟಕದ ವಕ್ತಾರ ಹೊಲದಗದ್ದೆ...

22 Apr, 2018
ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಚಿಕ್ಕಮಗಳೂರು
ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

22 Apr, 2018

ತರೀಕೆರೆ
ಮುಖಂಡರನ್ನು ಒಗ್ಗೂಡಿಸಲು ಪ್ರಯತ್ನ

ತರೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಗಳ ಜತೆಯಲ್ಲಿ ಮಾತನಾಡಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಸಹಕರಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ...

22 Apr, 2018