ಪುರಸಭೆಗೆ ಬೀಗ: ಮಹಿಳೆಯ ಘನತೆ ಕಾಪಾಡಿ–ಬಯಲು ಶೌಚಕ್ಕೆ ಮುಕ್ತಿ ನೀಡಲು ಮನವಿ

ಶೌಚಾಲಯ ನಿರ್ಮಾಣಕ್ಕಾಗಿ ಆಗ್ರಹ

ಧರಣಿ ನಿರತ ಪ್ರತಿಭಟನಾಕಾರರು ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಘೋಷಣೆ ಕೂಗಿ ಹಲಗೆ ಬಾರಿಸುತ್ತ, ಬೊಬ್ಬೆ ಹಾಕುವುದು ಸಾಮಾನ್ಯವಾಗಿತ್ತು.

ಶೌಚಾಲಯ ನಿರ್ಮಾಣಕ್ಕಾಗಿ ಆಗ್ರಹ

ಸಿಂದಗಿ: ನಗರದ 2,3,4,5 ಮತ್ತು 6 ಈ ಐದು ವಾರ್ಡ್‌ಗಳ ನೂರಾರು ಮಹಿಳಾ ನಿವಾಸಿಗಳು ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಪುರಸಭೆಗೆ ಬೀಗ ಹಾಕಿ ಎರಡು ಗಂಟೆ ಕಾಲ ಧರಣಿ ನಡೆಸಿದ ಅಪರೂಪದ ಘಟನೆ ಮಂಗಳವಾರ ನಡೆದಿದೆ.

ಧರಣಿ ನಿರತ ಪ್ರತಿಭಟನಾಕಾರರು ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಘೋಷಣೆ ಕೂಗಿ ಹಲಗೆ ಬಾರಿಸುತ್ತ, ಬೊಬ್ಬೆ ಹಾಕುವುದು ಸಾಮಾನ್ಯವಾಗಿತ್ತು.

ಮಹಿಳೆಯರು ಕೈಯಲ್ಲಿದ್ದ ಪೊರಕೆ ಯಿಂದ ಹೊಡೆಯುವ ಅಣುಕು ಪ್ರದರ್ಶನ ಮಾಡುತ್ತಿದ್ದರು. ಬಯಲು ಶೌಚಾಲಯಕ್ಕೆ ತೆಗೆದುಕೊಂಡು ಹೋಗುವ ತಂಬಿಗೆಯನ್ನೇ ಪುರಸಭೆಗೆ ತಂದು ತಮ್ಮ ಅಳಲು ಪ್ರದರ್ಶಿಸಿದರು. ಮಾನ, ಮರ್ಯಾದೆ ಬದಿಗಿಟ್ಟು ರಸ್ತೆಯ ಬದಿಯಲ್ಲಿ ಬಯಲಿನಲ್ಲಿ ಶೌಚ ಮಾಡಬೇಕಾದ ಕೆಟ್ಟ ಪರಿಸ್ಥಿತಿ ಬಂದಿದೆ. ಇದಕ್ಕೆಲ್ಲ ಕಾರಣ ಪುರಸಭೆ ಅಧಿಕಾರಿ ವರ್ಗ ಮತ್ತು ಸದಸ್ಯರು ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಎರಡು ಗಂಟೆಗಳ ಕಾಲ ಪುರಸಭೆ ಕಾರ್ಯಾಲಯಕ್ಕೆ ಬೀಗ ಹಾಕಿ ಧರಣಿ ನಡೆಸಿದರೂ ಮುಖ್ಯಾಧಿಕಾರಿ ಸುಳಿಯಲೇ ಇಲ್ಲ. ಕಾರ್ಯಾಲಯದ ಸಿಬ್ಬಂದಿ ಹೊರಗಡೆ ರಸ್ತೆಯಲ್ಲಿ ನಿಂತುಕೊಂಡು ಪ್ರೇಕ್ಷಕರಂತೆ ನೋಡುತ್ತಿದ್ದರು.

‘ನನ್ನ ಪಗಾರ ಒಂದು ವರ್ಷ ತಡಮಾಡಿ ಕೊಡಿ, ಮಹಿಳೆಯರು ಬಯಲಿಗೆ ಶೌಚಕ್ಕೆ ಹೋಗುವುದನ್ನು ತಡೆಗಟ್ಟುವ ದಿಸೆಯಲ್ಲಿ ಶೌಚಾಲಯ ನಿರ್ಮಿಸಿ ಎಂದು ‘ಡಿ’ ದರ್ಜೆ ನೌಕರರ ಮೇಲ್ವಿಚಾರಕ ಜಗದೀಶ ದೊಡಮನಿ ತುಂಬಾ ನೊಂದುಕೊಂಡು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು’.

ಎರಡು ಗಂಟೆಗಳ ಕಾಲ ಮಹಿಳೆಯರು ಘೋಷಣೆ ಕೂಗುತ್ತ ಪ್ರತಿಭಟನೆ ಮುಂದುವರೆಸಿದ್ದರು. ಆಗ 6ನೇ ವಾರ್ಡ್ ಸದಸ್ಯ ಹಣಮಂತ ಸುಣಗಾರ ಏನೇನೋ ಸಬೂಬು ಹೇಳಲು ಹೋದಾಗ ಮಹಿಳೆಯರು ಛೀಮಾರಿ ಹಾಕಿದರು. ಆಗ ನಾನೂ ನಿಮ್ಮ ಜೊತೆ ಹೋರಾಟದಲ್ಲಿ ಪಾಲ್ಗೊಳ್ಳುವೆ ಎಂದು ಹಿಂದಕ್ಕೆ ಸರಿದರು.

ಕೊನೆಗೂ ಪುರಸಭೆಗೆ ಸಂಬಂಧಿಸಿದ ಅಧಿಕಾರಿಗಳು ಬರದೇ ಇದ್ದಾಗ ಆಕ್ರೋಶಗೊಂಡ ಪ್ರತಿಭಟನಕಾರರು ರಸ್ತೆ ತಡೆ ಮಾಡಿ ಟೈರ್ ಗೆ ಬೆಂಕಿ ಹಚ್ಚುವ ನಿರ್ಧಾರಕ್ಕೆ ಬಂದಾಗ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತ ಉಪತಹಶೀಲ್ದಾರ ಸ್ಥಳಕ್ಕೆ ಧಾವಿಸಿ ಮನವಿ ಸ್ವೀಕರಿಸಿ ಪ್ರತಿಭಟನಕಾರರ ಮನವೊಲಿಸಿದರು.

ಪ್ರತಿಭಟನೆ ನೇತೃತ್ವವನ್ನು ಪುರಸಭೆ ಸದಸ್ಯ ಸಿದ್ದಪ್ಪ ಬೀರಗೊಂಡ, ಪ್ರಕಾಶ ಹಿರೇಕುರುಬರ, ಯಲ್ಲವ್ವ ಬೀರಗೊಂಡ, ಯಮನವ್ವ ಕೊಂಡಗೂಳಿ, ಸಾವಿತ್ರಿ ಜೇರಟಗಿ, ಜ್ಯೋತಿ ಬೀರಗೊಂಡ, ಮಾನಿಕಾ ಬೀರಗೊಂಡ, ಮಲಕವ್ವ ಬೀರಗೊಂಡ, ಶರಣವ್ವ ಭೂತಿ, ನೀಲಗಂಗವ್ವ ಭೂತಿ, ಲಕ್ಷ್ಮಿ ಜೇರಟಗಿ, ಕಸ್ತೂರಿ ಜಮಾದಾರ, ಶ್ರೀಶೈಲ ಬೀರಗೊಂಡ, ರವಿ ಹರನಾಳ, ಸಿದ್ದು ರೋಡಗಿ, ಕುಮಾರ ಹರವಾಳ, ಅಮೋಘಿ ಹೂಗಾರ, ಅನಿಲ ಕೊಂಡಗೂಳಿ, ದೌಲ ಹಿಪ್ಪರಗಿ, ಬೀರೂ ಹರವಾಳ, ವಿಕಾಸ ಬೀರಗೊಂಡ, ಭರತ ಜೇರಟಗಿ ವಹಿಸಿಕೊಂಡಿದ್ದರು.

**

ಐದು ವಾರ್ಡ್‌ಗಳಲ್ಲಿ ಮಹಿಳೆಯರಿಗೆ ರಸ್ತೆ ಬದಿಯಲ್ಲಿ ಬಯಲು ಶೌಚಾಲಯ ಅನಿವಾರ್ಯತೆ ಇದೆ
         -ಸಿದ್ದಪ್ಪ ಬೀರಗೊಂಡ
         3ನೇ ವಾರ್ಡ್ ಸದಸ್ಯ

Comments
ಈ ವಿಭಾಗದಿಂದ ಇನ್ನಷ್ಟು
ಮೈಸೂರು ಸೋಪ್‌ ಸಂತೆಗೆ ಜನಸಾಗರ!

ವಿಜಯಪುರ
ಮೈಸೂರು ಸೋಪ್‌ ಸಂತೆಗೆ ಜನಸಾಗರ!

20 Jan, 2018

ನಿಡಗುಂದಿ
ಕಲಗುರ್ಕಿಯಲ್ಲಿ ಜನಪದ ಸಂಸ್ಕೃತಿ ಉತ್ಸವ

ರಾಚಯ್ಯ ಸ್ವಾಮಿ ಹಿರೇಮಠ, ಡಾ.ವಿಶ್ವನಾಥ ಮಠ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀದೇವಿ ಐಹೊಳ್ಳಿ, ತಾಲ್ಲೂಕು ಪಂಚಾಯ್ತ ಸದಸ್ಯೆ ಲಕ್ಷ್ಮೀಬಾಯಿ ಕಸನಕ್ಕಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ...

20 Jan, 2018

ದೇವರಹಿಪ್ಪರಗಿ
ರಾಣಿ ಚನ್ನಮ್ಮ ಜಯಂತ್ತುತ್ಸವ, ಕಿತ್ತೂರು ವಿಜಯೋತ್ಸವ ಇಂದು

ಸಮೀಪದ ಮುಳಸಾವಳಗಿ ಗ್ರಾಮದಲ್ಲಿ ಜ. 20ರ ಶನಿವಾರ ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ, 194ನೇ ಕಿತ್ತೂರು ವಿಜಯೋತ್ಸವ ಹಾಗೂ ಸಂಗೊಳ್ಳಿ...

20 Jan, 2018
‘ಧರ್ಮ ಅರಿಯದವರಿಂದ ವಿಷಬೀಜ ಬಿತ್ತುವ ಕೆಲಸ’

ಮುದ್ದೇಬಿಹಾಳ
‘ಧರ್ಮ ಅರಿಯದವರಿಂದ ವಿಷಬೀಜ ಬಿತ್ತುವ ಕೆಲಸ’

19 Jan, 2018

ವಿಜಯಪುರ
ನಾಲತವಾಡದ ಹೋರಿ ಚಾಂಪಿಯನ್..!

ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ರಾಯನಗೌಡ ಮಲ್ಲನಗೌಡ ಚಿತ್ತಾಪುರ ಅವರ ಹಾಲು ಹಲ್ಲಿನ ಹೋರಿ ವಿಜಯಪುರ ಹೊರ ವಲಯದ ತೊರವಿಯಲ್ಲಿ ಸಿದ್ಧೇಶ್ವರ ಜಾತ್ರೆ ಅಂಗವಾಗಿ ನಡೆದ...

19 Jan, 2018