ಕೊಪ್ಪಳ

ಮಣ್ಣಿನ ಫಲವತ್ತತೆಗೆ ಜೈವಿಕ ಗೊಬ್ಬರ ಬಳಸಿ

ಕೃಷಿಯಲ್ಲಿ ಯಥೇಚ್ಛವಾಗಿ ಹಸಿರೆಲೆ ಹಾಗೂ ಜೈವಿಕ ಗೊಬ್ಬರಗಳ ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ನಿರಂತರವಾಗಿ ಕಾಪಾಡಿಕೊಳ್ಳಬಹುದು

ಕೊಪ್ಪಳ: ಕೃಷಿಯಲ್ಲಿ ಯಥೇಚ್ಛವಾಗಿ ಹಸಿರೆಲೆ ಹಾಗೂ ಜೈವಿಕ ಗೊಬ್ಬರಗಳ ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ನಿರಂತರವಾಗಿ ಕಾಪಾಡಿಕೊಳ್ಳಬಹುದು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಂ.ಚಿತ್ತಾಪುರ ಹೇಳಿದರು.

ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಮಂಗಳವಾರ ಕೃಷಿ ಇಲಾಖೆ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರಿಗೆ ಮಣ್ಣಿನ ಫಲವತ್ತತೆಯ ಜಾಗೃತಿ ಮೂಡಿಸುವುದಕ್ಕಾಗಿ ಈ ದಿನಾಚರಣೆ ಆಚರಿಸಲಾಗುತ್ತದೆ. ಹಾಗೆಯೇ, ಕಲ್ಲಿನಿಂದ ಮಣ್ಣುರಚನೆ ಆಗಬೇಕಾದರೆ ಒಂದು ಸಾವಿರ ವರ್ಷಗಳು ಬೇಕಾಗುತ್ತದೆ. ಆದ್ದರಿಂದ ಮಣ್ಣಿನ ರಚನೆ ಮತ್ತು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಪ್ರತಿಯೊಬ್ಬ ರೈತರು ಮಣ್ಣು ಆರೋಗ್ಯ ಕಾರ್ಡ್‌ ಪಡೆದು ಅದರಲ್ಲಿ ಶಿಫಾರಸು ಮಾಡಿರುವ ಪ್ರಮಾಣದಷ್ಟು ರಾಸಾಯನಿಕ ಬಳಕೆಯನ್ನು ಉಪಯೋಗಿಸಬೇಕು ಎಂದರು.

ಕೃಷಿಕ ಸಮಾಜದ ತಾಲ್ಲೂಕಾಧ್ಯಕ್ಷ ಎನ್.ವಿರೂಪಾಕ್ಷಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಣ್ಣು ಪರೀಕ್ಷೆ ಮಾಡಿ, ತಮ್ಮ ಜಮೀನಿನಲ್ಲಿ ವಿಜ್ಞಾನಿಗಳು ಶಿಫಾರಸು ಮಾಡಿದಷ್ಟು ರಾಸಾಯನಿಕ ಗೊಬ್ಬರ ಮಾತ್ರ ಉಪಯೋಗಿಸಬೇಕು. ಇಂದಿನ ಕೃಷಿಯನ್ನು ನಾವು ವೈಜ್ಞಾನಿಕವಾಗಿ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು ಮತ್ತು ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.

ರಾಜ್ಯ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶಂಕರಪ್ಪ ಚೌಡ್ಕಿ ಮಾತನಾಡಿ, 'ರೈತರು ಒಕ್ಕಲುತನದಲ್ಲಿ ಲಾಭವಿಲ್ಲ ಎಂದು ಹಳ್ಳಿಗಳಿಂದ ನಗರಗಳಿಗೆ ಮುಖ ಮಾಡುತ್ತಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿದರೆ ಒಕ್ಕಲುತನದಲ್ಲಿ ತುಂಬಾ ಲಾಭವಿದೆ. ನಂತರ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಿ ರೈತರೊಂದಿಗೆ ಮಣ್ಣು ಮತ್ತು ಮಣ್ಣಿನ ಆರೋಗ್ಯದ ಬಗ್ಗೆ ಸಂವಾದ ಆಯೋಜಿಸಬೇಕು' ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ದ್ಯಾಮಣ್ಣ, ಕೃಷಿ ವಿಸ್ತರಣಾ ಮುಂದಾಳು ಎಂ.ಬಿ.ಪಾಟೀಲ್‌, ಪ್ರಗತಿಪರ ರೈತ ವೆಂಕನಗೌಡ್ರ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ವೆಂಕಣ್ಣ, ಪ್ರಭಾರ ಕೃಷಿ ನಿರ್ದೇಶಕ ರಾಮಚಂದ್ರ ಜೋಷಿ ಇದ್ದರು. ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥ ಬಿ.ಎಂ.ಗೊಬ್ಬರಗುಂಪಿ ವಂದಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ರಾಜ್ಯದಲ್ಲಿ ಕಾಂಗ್ರೆಸ್‌ ತಲೆ ಎತ್ತದಂತೆ ಮಾಡಿ: ಬಂಡಾರು ದತ್ತಾತ್ರೇಯ ಹೇಳಿಕೆ

ಕುಷ್ಟಗಿ
ರಾಜ್ಯದಲ್ಲಿ ಕಾಂಗ್ರೆಸ್‌ ತಲೆ ಎತ್ತದಂತೆ ಮಾಡಿ: ಬಂಡಾರು ದತ್ತಾತ್ರೇಯ ಹೇಳಿಕೆ

17 Mar, 2018
ವಿವಿಧ ಮಹನೀಯರ ಜಯಂತಿ ಆಚರಣೆಗೆ ನಿರ್ಧಾರ

ಕೊಪ್ಪಳ
ವಿವಿಧ ಮಹನೀಯರ ಜಯಂತಿ ಆಚರಣೆಗೆ ನಿರ್ಧಾರ

17 Mar, 2018

ಲಿಂಗಸುಗೂರು
‘ಸಾಹಿತ್ಯಕ್ಕೆ ದಲಿತ ವಚನಕಾರರ ಕೊಡುಗೆ ಅಪಾರ’

‘ಸಾಹಿತ್ಯ ಕ್ಷೇತ್ರಕ್ಕೆ ದಲಿತ ವಚನಕಾರರ ಕೊಡುಗೆ ಸಹ ಅಪಾರ’ ಎಂದು ಉಪ ವಿಭಾಗಾಧಿಕಾರಿ ಎಂ.ಪಿ. ಮಾರುತಿ ಹೇಳಿದರು.

17 Mar, 2018

ಮಸ್ಕಿ
ಹೆದ್ದಾರಿ ತಡೆ: ತಹಶೀಲ್ದಾರ್‌ಗೆ ಮನವಿ

ತುಂಗಭದ್ರಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಬಿಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ 5 (ಎ) ಕಾಲುವೆ ಹೋರಾಟ...

17 Mar, 2018
ಕುಷ್ಟಗಿ: ಕೂಲಿಕಾರರ ಪ್ರತಿಭಟನೆ

ಕುಷ್ಟಗಿ
ಕುಷ್ಟಗಿ: ಕೂಲಿಕಾರರ ಪ್ರತಿಭಟನೆ

16 Mar, 2018