ಕುಷ್ಟಗಿ

ಕಡಲೆ ಬೆಳೆಗೆ ‘ಪಲ್ಸ್‌ ಮ್ಯಾಜಿಕ್‌’ ಉಪಯುಕ್ತ

ಕಡಲೆ ಹೂ ಮತ್ತು ಕಾಯಿಕಟ್ಟುವ ಹಂತದಲ್ಲಿರುವಾಗ ಸಸ್ಯವರ್ಧಕಗಳನ್ನು ಬಳಸುವ ಅಗತ್ಯ ಇರುವುದಿಲ್ಲ. ಹೂವು ಕಟ್ಟಲು ಕಾಯಿ ಬಲಿಯುವುದಕ್ಕೆ ಬೇಕಾದ ಅಮೈನೊ ಆ್ಯಸಿಡ್‌ ಇರುವ ಟಾನಿಕ್‌ ಬಳಸಬೇಕು

ಕುಷ್ಟಗಿ ಹೊರವಲಯದಲ್ಲಿ ಕಳಕಪ್ಪ ನಾಯಕವಾಡಿ ಅವರ ಹೊಲದಲ್ಲಿ ಬೆಳೆದ ಕಡಲೆ ಹುಲುಸಾಗಿ ಬೆಳೆದಿರುವುದು

ಕುಷ್ಟಗಿ: ತೇವಾಂಶದ ಕೊರತೆ ನಡುವೆಯೂ ಹಿಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ವಿವಿಧ ಕಡೆ ಬೆಳೆದಿರುವ ಕಡಲೆ ಬೆಳೆ ಉತ್ತಮವಾಗಿದೆ. ಟೆಂಗುಂಟಿ ರಸ್ತೆಯಲ್ಲಿರುವ ಕಳಕಪ್ಪ ನಾಯಕವಾಡಿ ಅವರ ಎರಡೂವರೆ ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಲಾಗಿರುವ ಕಡಲೆ ಉತ್ತಮವಾಗಿದ್ದು, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ಮುಂದಾಳು ಡಾ.ಎಂ.ಬಿ.ಪಾಟೀಲ ಅವರು ಮಂಗಳವಾರ ಭೇಟಿ ನೀಡಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ ಅವರು, ಸದ್ಯ ಕಡಲೆ ಬೆಳೆ ಹೂವಾಡುವ ಮತ್ತು ಕಾಯಿಕಟ್ಟುವ ಹಂತದಲ್ಲಿದ್ದು , ರೈತರು ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಬೇಕು. ಯೂರಿಯಾ ಇಲ್ಲದ ಮತ್ತು ರಂಜಕ, ಪೊಟಾಷ್‌ ಇರುವ ಸಿದ್ಧ ರಾಸಾಯನಿಕ ಗೊಬ್ಬರವನ್ನು ಬೆಳೆಗೆ ಪ್ರತಿ ಲೀಟರ್‌ ನೀರಿಗೆ 2 ಗ್ರಾಂ ಪ್ರಮಾಣದಲ್ಲಿ ಬೆರೆಸಿ ತಂಪು ವಾತಾವರಣದಲ್ಲಿ ಸಿಂಪಡಿಸಬೇಕು ಎಂದರು.

ಕಡಲೆ ಹೂ ಮತ್ತು ಕಾಯಿಕಟ್ಟುವ ಹಂತದಲ್ಲಿರುವಾಗ ಸಸ್ಯವರ್ಧಕಗಳನ್ನು ಬಳಸುವ ಅಗತ್ಯ ಇರುವುದಿಲ್ಲ. ಹೂವು ಕಟ್ಟಲು ಕಾಯಿ ಬಲಿಯುವುದಕ್ಕೆ ಬೇಕಾದ ಅಮೈನೊ ಆ್ಯಸಿಡ್‌ ಇರುವ ಟಾನಿಕ್‌ ಬಳಸಬೇಕು ಎಂದು ಸಲಹೆ ನೀಡಿದರು.

ಪಲ್ಸ್‌ ಮ್ಯಾಜಿಕ್‌: ಕೃಷಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ‘ಪಲ್ಸ್‌ ಮ್ಯಾಜಿಕ್‌’ ಎಲ್ಲ ಸೂಕ್ಷ್ಮ ಪೋಷಕಾಂಶ (ಮೈಕ್ರೋ ನ್ಯೂಟ್ರಿಯಂಟ್ಸ್‌) ಮತ್ತು ಜಿಬ್ರಾಲಿಕ್‌ ಆ್ಯಸಿಡ್‌ ಇದರಲ್ಲಿದ್ದು ಕಾಯಿ ಮತ್ತು ಕಾಳು ಗಟ್ಟಿಯಾಗುವುದಕ್ಕೆ ಸಹಕರಿಸುತ್ತದೆ.

ಎಕರೆಗೆ 2 ಕೆ.ಜಿ ಪಲ್ಸ್‌ ಮ್ಯಾಜಿಕ್‌ ಅಗತ್ಯವಾಗಿದ್ದು, ಪ್ರತಿ ಲೀಟರ್‌ ನೀರಿಗೆ 10 ಗ್ರಾಂನಂತೆ ಬೆರೆಸಿ ಸಿಂಪಡಿಸಬೇಕು. ಇದರಿಂದ ಕಾಯಿ ಬೇಗನೆ ಮಾಗಿ ಕಾಯಿಕೊರಕ ಹುಳುವಿನ ಕಾಟ ಇರುವುದಿಲ್ಲ. ಇದು ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಲಭ್ಯವಿದೆ. ಬೇಡಿಕೆ ಸಲ್ಲಿಸಿದರೆ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ಖಾಸಗಿ ಮಾರಾಟಗಾರರಿಗೂ ವಿತರಿಸಲಾಗುತ್ತದೆ ಎಂದು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಮುಖ್ಯಮಂತ್ರಿ ಆಗಲು ಅವಕಾಶ ಕೊಡಿ

ಕೊಪ್ಪಳ
ಮುಖ್ಯಮಂತ್ರಿ ಆಗಲು ಅವಕಾಶ ಕೊಡಿ

22 Jan, 2018

ಕನಕಗಿರಿ
₹ 2. 63 ಕೋಟಿ ಕಾಮಗಾರಿಗೆ ಚಾಲನೆ

ಹುಲಸನಹಟ್ಟಿ ಗ್ರಾಮದಿಂದ ಅಡವಿಬಾವಿ ಚಿಕ್ಕತಾಂಡದ ವರೆಗೆ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಲ್ಲಿ ₹ 1. 40...

22 Jan, 2018
ರಾಜ್ಯದಲ್ಲಿ ಹೆಚ್ಚಿದ ಹತ್ಯೆ, ಆತ್ಮಹತ್ಯೆಗಳು

ಕೊಪ್ಪಳ
ರಾಜ್ಯದಲ್ಲಿ ಹೆಚ್ಚಿದ ಹತ್ಯೆ, ಆತ್ಮಹತ್ಯೆಗಳು

21 Jan, 2018
ಹನುಮನಹಳ್ಳಿಯಲ್ಲಿ ಕುಡುಕರಿಗೆ ದೊಣ್ಣೆಯೇಟು ಖಾತ್ರಿ

ಕೊಪ್ಪಳ
ಹನುಮನಹಳ್ಳಿಯಲ್ಲಿ ಕುಡುಕರಿಗೆ ದೊಣ್ಣೆಯೇಟು ಖಾತ್ರಿ

20 Jan, 2018

ಗಂಗಾವತಿ
ಆತ್ಮಹತ್ಯೆ ನಿರ್ಣಯ ಹಿಂಪಡೆದ ಪೌರನೌಕರರು

ಹಿರಿಯ ಕಾರ್ಮಿಕ ನಾಯಕ ಜೆ. ಭಾರದ್ವಾಜ್, ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆಯದಂತೆ ಸರ್ಕಾರದ ನಿರ್ದೇಶನವಿದೆ.

20 Jan, 2018