ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶ್ರಿತರ ಕಸರತ್ತು

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಉಗಾಂಡದಲ್ಲಿ ತೆರೆಯಲಾದ ಐದು ಬೃಹತ್‌ ನಿರಾಶ್ರಿತರ ಶಿಬಿರಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಆಶ್ರಯ ಪಡೆದಿದ್ದಾರೆ. ಅದರಲ್ಲೂ ಹದಿಹರೆಯದವರು ತುಂಬಿ ತುಳುಕುತ್ತಿದ್ದಾರೆ. ಯುಂಬೆ ಜಿಲ್ಲೆಯಲ್ಲಿರುವ ‘ಬಿಡಿಬಿಡಿ’ ಎಂಬಲ್ಲಿ ಅಂಥದ್ದೊಂದು ನಿರಾಶ್ರಿತರ ಶಿಬಿರವಿದೆ.

ಇಲ್ಲಿನ ಯುವ ಪ್ರತಿಭೆಗಳು ಯಾವುದೇ ಪ್ರೋತ್ಸಾಹವಿಲ್ಲದೆ ಹಾಗೇ ಕಮರಿ ಹೋಗುತ್ತವಲ್ಲ ಎಂಬ ಆತಂಕ ಎದುರಾಗಿದ್ದೇ ತಡ, ‘ಟ್ಯಾಲೆಂಟ್‌ ಪ್ರೊಜೆಕ್ಟ್‌’ ತಂಡ ಯುವಕರ ಕಲಾಪ್ರದರ್ಶನಕ್ಕೆ ಒಂದು ಸ್ಪರ್ಧಾ ವೇದಿಕೆ ಕಲ್ಪಿಸಿದೆ. ಹೊಟ್ಟೆ ತುಂಬುವಷ್ಟು ಊಟ ಸಿಗದೆ ಬಸವಳಿದಿದ್ದ ಶಿಬಿರದ ಯುವಕರಿಗೆ ಸ್ಪರ್ಧೆಯಿಂದ ಹೊಸ ಹುಮ್ಮಸ್ಸು ಬಂದಿದೆ. ಯಾವುದೇ ಕಸರತ್ತು ನೋಡಿ ‘ಇದೇನು ಮಹಾಬಿಡಿ’ ಎನ್ನುವವರನ್ನು ಬಿಡಿಬಿಡಿಗೆ ಕರೆತರಬೇಕು.

ಇಲ್ಲಿನ ಯುವಕರು ಗಾಳಿಯಲ್ಲೇ ಲಗಾಟೆ ಹೊಡೆಯುವ ಪರಿಗೆ ಎದುರಿಗಿದ್ದವರು ಚಿತ್‌ ಆಗಲೇಬೇಕು. ಯುವಕನೊಬ್ಬ ಪ್ರದರ್ಶಿಸಿದ ಈ ಕಸರತ್ತು ತೀರ್ಪುಗಾರರಲ್ಲಿ ರೋಮಾಂಚನ ಉಂಟು ಮಾಡಿತಂತೆ. ಈ ಪ್ರತಿಭೆಗೆ ಮುಂದಿನ ಹಂತದ ಸ್ಪರ್ಧೆಗೆ ಅವಕಾಶ ಸಹ ಸಿಕ್ಕಿತಂತೆ. ಅಂತಿಮ ಹಂತದಲ್ಲಿ ಗೆದ್ದವರಿಗೆ ರಾಷ್ಟ್ರೀಯ ಕಲಾ ತಂಡದಿಂದ ಮಾರ್ಗದರ್ಶನ ಕೊಡಿಸಲಾಗುತ್ತದೆ ಎಂದು ‘ಟ್ಯಾಲೆಂಟ್‌ ಪ್ರೊಜೆಕ್ಟ್‌’ ತಂಡ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT