ಕಾನ್ಪುರ ಜಿಲ್ಲೆಯ ಪಂಕಿ ಪಟ್ಟಣ

ಎಸ್‌. ಐ ಮೇಲೆ ಗುಂಡು

ಇಲ್ಲಿನ ಕಾನ್ಪುರ ಜಿಲ್ಲೆಯ ಪಂಕಿ ಪಟ್ಟಣದಲ್ಲಿ ಅಪರಿಚಿತನೊಬ್ಬ ತಪಾಸಣೆ ನಡೆಸಲು ತಡೆದ ವೇಳೆ ಗುಂಡು ಹಾರಿಸಿದ್ದು, ಸಬ್‌ ಇನ್‌ಸ್ಪೆಕ್ಟರ್‌ ಗಾಯಗೊಂಡಿದ್ದಾರೆ.

ಲಖನೌ : ಇಲ್ಲಿನ ಕಾನ್ಪುರ ಜಿಲ್ಲೆಯ ಪಂಕಿ ಪಟ್ಟಣದಲ್ಲಿ ಅಪರಿಚಿತನೊಬ್ಬ ತಪಾಸಣೆ ನಡೆಸಲು ತಡೆದ ವೇಳೆ ಗುಂಡು ಹಾರಿಸಿದ್ದು, ಸಬ್‌ ಇನ್‌ಸ್ಪೆಕ್ಟರ್‌ ಗಾಯಗೊಂಡಿದ್ದಾರೆ.

ಸಬ್‌ ಇನ್‌ಸ್ಪೆಕ್ಟರ್‌ ಅನುರಾಗ್‌ ಸಿಂಗ್‌ ಹಾಗೂ ಕಾನ್‌ಸ್ಟೆಬಲ್‌ ಗಿರಿಜೇಶ್‌ ಗಸ್ತು ತಿರುಗುತ್ತಿದ್ದರು. ಆಗ ಸಮೀಪದ ರಾಮಲೀಲಾ ಮೈದಾನದ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದ ಚಟುವಟಿಕೆಯಲ್ಲಿ ತೊಡಗಿದ್ದುದನ್ನು ಗಮನಿಸಿದ ಅವರು, ತಪಾಸಣೆಗಾಗಿ ಆತನನ್ನು ತಡೆಯಲು ಮುಂದಾದರು. ಆಗ ಆತ ಅನುರಾಗ್‌ ಸಿಂಗ್‌ ಅವರತ್ತ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್‌ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಹುಲ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಗುಂಡು ಎಸ್‌ಐ ಅವರ ಮೈ ಉಜ್ಜಿಕೊಂಡು ಹೋಗಿದ್ದು, ಪ್ರಥಮ ಚಿಕಿತ್ಸೆಯ ಬಳಿಕ ಅವರನ್ನು ಮನೆಗೆ ಕಳುಹಿಸಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು

ಪ್ರತಾಪಗಢ
ಉತ್ತರ ಪ್ರದೇಶ: ದಲಿತ ಬಾಲಕಿ ಸಜೀವ ದಹನ

ದೀಪ್ ಹಾಗೂ ಆತನ ತಂದೆ, ಮಿಥಾಯಿಲಾಲ್ ಎನ್ನುವವರ ಮನೆಗೆ ನುಗ್ಗಿ ಅವರ ಮಗಳು ಅಂಜು ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಪ್ರಕರಣ ನಡೆದ...

24 Jan, 2018
ನಾಳೆ ‘ಪದ್ಮಾವತ್‌’ ಚಿತ್ರ ಬಿಡುಗಡೆ ಖಚಿತ

ಆದೇಶ ಮಾರ್ಪಾಡಿಗೆ ಸುಪ್ರೀಂ ಕೋರ್ಟ್‌ ನಿರಾಕರಣೆ
ನಾಳೆ ‘ಪದ್ಮಾವತ್‌’ ಚಿತ್ರ ಬಿಡುಗಡೆ ಖಚಿತ

24 Jan, 2018
ರಾಜಸ್ಥಾನ, ಬಿಹಾರದಲ್ಲಿ ಪ್ರದರ್ಶನ ಇಲ್ಲ

ಕರ್ಣಿ ಸೇನಾದ ಬೆದರಿಕೆಗೆ ಮಣಿದ ಚಿತ್ರಮಂದಿರಗಳ ಮಾಲೀಕರು
ರಾಜಸ್ಥಾನ, ಬಿಹಾರದಲ್ಲಿ ಪ್ರದರ್ಶನ ಇಲ್ಲ

24 Jan, 2018

ಜೈಪುರ
ಜೈಪುರ ಸಾಹಿತ್ಯ ಉತ್ಸವಕ್ಕೆ ಬಿಗಿ ಭದ್ರತೆ

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷ ಪ್ರಸೂನ್‌ ಜೋಷಿ ಅವರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕ ಸಂಜಯ್‌ ರಾಯ್‌ ಹೇಳಿದ್ದಾರೆ.

24 Jan, 2018
ಹಾದಿಯಾ ಮದುವೆಯ ತನಿಖೆ ಬೇಡ: ಸುಪ್ರೀಂ ಕೋರ್ಟ್‌

‘ಅಪರಾಧ ತನಿಖೆ ನಡೆಸುವುದಕ್ಕೆ ಅವಕಾಶ ಇಲ್ಲ’
ಹಾದಿಯಾ ಮದುವೆಯ ತನಿಖೆ ಬೇಡ: ಸುಪ್ರೀಂ ಕೋರ್ಟ್‌

24 Jan, 2018